ರಾಮನ ಆಲಯಕ್ಕೆ ಕಾಯುತ್ತಿದೆ ರಾಂಪುರ ~ರಾಘವೇಂದ್ರ ಪ್ರಭು, ಕವಾ೯ಲು

ಅಯೋಧ್ಯೆ ಭವ್ಯ ರಾಮಮಂದಿರ ಲೋಕಾರ್ಪಣೆಗೊಳ್ಳುವ ಈ ಸುಸಂದರ್ಭದಲ್ಲಿ ಎಲ್ಲೆಡೆ ರಾಮನ ಧ್ಯಾನ ನಡೆಯುತ್ತಿದೆ ಇಡೀ ಭಾರತ ದೇಶವೇ ಶ್ರೀ ರಾಮನ ಅಯೋಧ್ಯಾಆಗಮನಕ್ಕೆ ಕಾಯುತ್ತಿದೆ.

 ಉಡುಪಿ ತಾಲೂಕಿನ ಅಲೆವೂರು ಗ್ರಾಮದ ರಾಂಪುರ ಎಂಬ ಸಣ್ಣ ಪ್ರದೇಶ ರಾಮನ ಭವ್ಯ ಆಲಯಕ್ಕಾಗಿ ಕಾಯುತ್ತಿದೆ, ಇಲ್ಲಿಯೇ ಪಕ್ಕದಲ್ಲಿರುವ ರಾಮಮಂದಿರ ಶೀತಿಲಗೊಂಡು ಸಂಪೂರ್ಣವಾಗಿ ಜೀರ್ಣವಾಗಿದೆ ಆದರೆ ಈ ಆಲಯದಲ್ಲಿರುವ ಸೀತಾ ಸಹಿತ ರಾಮದೇವರ ಮೂರ್ತಿ ನೋಡಲು ಆಕರ್ಷಕವಾಗಿದೆ ಒಂದು ಕಡೆಯಲ್ಲಿ ಉಬ್ಬಿದ ಶೈಲಿಯ ರಾಮದೇವರ ಮೂರ್ತಿ ಇದೆ ರೀತಿ ಅದರ ಕೆಳಗಡೆ ಮೂರು ಹಿತ್ತಾಳೆಯ ಪುರಾತನ ಮೂತಿ೯ಗಳು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

 ಈ ದೇವಾಲಯ ಖಾಸಗಿ ಪ್ರದೇಶದಲ್ಲಿದ್ದು, ಕಾಲಂತರದಲ್ಲಿ ಇದು ವಿವಿಧ ಕಾರಣಗಳಿಂದ ಜೀರ್ಣವಾಗಿದೆ ಇದೇ ದೇವಾಲಯದ ಹೆಸರಿನಿಂದ ಈ ಪ್ರದೇಶಕ್ಕೆ ರಾಮಪುರ ಅಥವಾ ರಾಂಪುರ ಎಂಬ ಹೆಸರು ಬಂದಿತ್ತು.

 ಇಡೀ ಗ್ರಾಮಕ್ಕೆ ಈ ಒಂದು ದೇವಾಲಯ ಮುಕುಟ ಪ್ರಾಯವಾಗಿತ್ತು , ಇದೀಗ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಒತ್ತಾಯಗಳು ಕೇಳಿಬರುತ್ತಿವೆ. ಪ್ರತಿ ದಿನ ಇಲ್ಲಿ ಆಸಕ್ತ ಜನರು ಭೇಟಿ ಕೊಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಯಾವ ರೀತಿ ಪ್ರಾಮುಖ್ಯತೆಯನ್ನು ಪಡೆದಿದೆಯೋ ಅದೇ ರೀತಿ ಈ ರಾಮಪುರ ರಾಮದೇವಲಯ ಪ್ರಖ್ಯಾತಿಯನ್ನು ಪಡೆದಿತ್ತು 

 ಇಲ್ಲಿನ ದೇವಾಲಯದ ಕಂಬಗಳು ಸುತ್ತು ಪೌಳಿ ನಶಿಸಿಹೋಗಿದೆ ಕಂಬಗಳು ಧರೆಗುರುಳಿ ನಿಂತರೆ, ದೇವಾಲಯದ ಒಳಗಡೆ ಗೋಡೆಗಳಲ್ಲಿ ಗೆದ್ದಲು ಹಿಡಿದಿವೆ. ಇದೀಗ ಈ ದೇವಾಲಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಪ್ರಚಾರ ಸಿಕ್ಕಿದ ಪರಿಣಾಮ ಇದರ ಹಲವಾರು ಜನರಲ್ಲಿ ಚರ್ಚಿಗಳು ಪ್ರಾರಂಭವಾಗಿವೆ. ಆದರೆ ಖಾಸಗಿ ಸ್ಥಳದಲ್ಲಿರುವ ಕಾರಣ ಈ ದೇವಾಲಯದ ಅಭಿವೃದ್ಧಿ ಈವರೆಗೂ ನಡೆದಿಲ್ಲ ಎಂಬ ಮಾಹಿತಿ ಇದೆ .

ಇಡೀ ಗ್ರಾಮಕ್ಕೆ ಹೆಸರುವಾಸಿಯಾದ ಮತ್ತು ಗ್ರಾಮದ ಹೆಸರಿಗೆ ಕಾರಣವಾದ ಈ ಮಂದಿರ ತನ್ನ ಹಿಂದಿನ ಗತವೈಭವವನ್ನು ಮತ್ತೆ ಸಾರಬೇಕಾಗಿದೆ 

ಇದೀಗ ಈ ದೇವಾಲಯದ ನಿರ್ಮಾಣಕ್ಕೆ ಕೂಗು ಕೇಳಿ ಬರುತ್ತದೆ ಏನೇ ಆಗಲಿ ಈ ದೇವಾಲಯ ಮತ್ತೊಮ್ಮೆ ತನ್ನ ಗತ ವೈಭವ ಭಕ್ತರಿಗೆ ತೋರಿಸಬೇಕಾಗಿದೆ.

 ಜನರು ಈ ಬಗ್ಗೆ ಗಮನ ನೀಡಿದರೆ ಅದೇ ರೀತಿ ಈ ಸ್ಥಳದ ಸಂಬಂಧಿಕರು ಮನಸ್ಸು ಮಾಡಿದರೆ ಮಂದಿರದ ಜೀರ್ಣೋದ್ದಾರ ಕಷ್ಟದ ಮಾತಲ್ಲ.

ಏನೇ ಆಗಲಿ ರಾಮಮಂದಿರ ವಾಗಲಿ.

 ~ರಾಘವೇಂದ್ರ ಪ್ರಭು, ಕವಾ೯ಲು

 
 
 
 
 
 
 
 
 
 
 

Leave a Reply