“ನಿರ್ಧಾರಗಳು…” ~ಪೂರ್ಣಿಮಾ ಗಿರಿರಾಜ್..

ನಿರ್ಧಾರಗಳ ಮೇಲೆ ನಿಂತ ಜೀವನ. ಬೆಟ್ಟದಷ್ಟು ವಿಫಲತೆ. ಬೆರಳಣಿಕೆಯಷ್ಟು ಸಫಲತೆ. ಹೊಸ ಅಧ್ಯಾಯದ ಮುನ್ನುಡಿ ಬರೆವ ತಪ್ಪು ನಿರ್ಧಾರಗಳು. ಸಂಚಲನ ಸೃಷ್ಟಿಸುವ ಸರಿ ನಿರ್ಧಾರಗಳು. ಸಿಹಿ ನೆನಪುಗಳನ್ನು ತಮ್ಮದಾಗಿಸಲು ಮುಂದಾದಾಗ ಖೈದಿಗಳನ್ನಾಗಿ ಮಾಡಿ ಕತ್ತಲ ಕೋಣೆಗೆ ತಳ್ಳುವುದು ನಿರ್ಧಾರಗಳೇ. ಕಹಿ ನೆನಪುಗಳ ಮರೆತು ಹೊಸ ಪಥದಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವುದೂ ನಿರ್ಧಾರಗಳೇ. ಕೆಲವನ್ನು ಬದಾಲಾಯಿಸಬಹುದು. ಹಲವನ್ನು ಸರಿಪಡಿಸಬಹುದು. ಬದುಕೆಂಬ ಸಮರ ಯಾತ್ರೆಯಲ್ಲಿ ಕೆಟ್ಟ ನಿರ್ಧಾರಗಳ ಹಾದಿಯಲ್ಲಿ ಕುಗ್ಗದೆ , ಸರಿ ನಿರ್ಧಾರಗಳ ಹಾದಿಯಲ್ಲಿ ಹಿಗ್ಗದೆ, ದೃಢ ಸಂಕ್ಪದಿಂದ ಸಾಗಿದರೆ ಮಾತ್ರ ಜೀವನ ಸದೃಢ.

 
 
 
 
 
 
 
 
 
 
 

Leave a Reply