Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

 ಪರಿಸರ ಮಾತೆ ಜೀವದಾತೆ~ಭಾಗ್ಯಶ್ರೀ ಕಂಬಳಕಟ್ಟ

ಅಂದದ ಪರಿಸರ ಮಾತೆ ಜೀವದಾತೆ
ಜಗದ ಜನರೆಲ್ಲರನು ಪೊರೆವ ಮಾತೆ
ಸೌಂದರ್ಯ ಗಣಿಯ ಮಹಾ ಒರತೆ
ಹಸಿರ ಉಡುಗೆ ತೊಟ್ಟಿರುವ ದೇವತೆ

ಲೋಕದ ಪ್ರಾಣಿಪಕ್ಷಿಗಳ ನೆಲೆವೀಡು
ಜೀವಸಂಕುಲಕೆ ಉಸಿರಾಗಿಹ ಕಾಡು
ಮನುಜನು ಕಟ್ಟಲು ತನ್ನಯ ಗೂಡು
ವೃಕ್ಷಗಳ ಕಡಿಯುತಲಿಹನು ನೋಡು

ಮರಗಳಿಗೂ ನಮ್ಮಂತೇ ಇದೆ ಜೀವ
ಕಡಿದು ನೀಡದಿರಿ ನೀವದಕೆ ನೋವ
ಉಸಿರನು ನಿಲ್ಲಿಸದಿರು ನೀ ಮಾನವ
ಆಗದಿರು ಪಾಪವನೆಸಗುವ ದಾನವ

ಪ್ರಕೃತಿಯನು ಮಗುವಿನಂತೆ ಪ್ರೀತಿಸಿ
ಇಳೆಯಲಿರುವ ಗಿಡಮರಗಳ ರಕ್ಷಿಸಿ
ಹಸಿರನು ಬೆಳೆಸಿ ಉಸಿರನು ಉಳಿಸಿ
ರಾಷ್ಟ್ರದ ಭವಿಷ್ಯವನು ಹಸನಾಗಿಸಿ

ಪ್ರತಿದಿನ ಆಚರಿಸೋಣ ಪರಿಸರದಿನ
ಹರಿಸಿ ನಿಸರ್ಗದುಳಿವಿನೆಡೆಗೆ ಗಮನ
ಗಿಡಗಳನ್ನು ನೆಟ್ಟು ಬೆಳೆಸೋಣ ವನ
ಹಸಿರಾಗಿಸೋಣ ನಮ್ಮಯ ಭುವನ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!