ಆನ್ ಲೈನ್‌ ಜೂಜುಗೆ ತಿಲಾಂಜಲಿ ಹಾಕಬೇಕಾಗಿದೆ

ದಿನ ಬೆಳಗಾದರೆ ಸಾಕು ಮೊಬೈಲ್ನಲ್ಲಿ  ಸಾಮಾಜಿಕ ಜಾಲತಾಣ ನೋಡಿದಾಗ ನಮಗೆ ನೋಡಲು ಸಿಗುವುದು  ರಮ್ಮಿ ಆಡಿ ಕ್ಯಾಶ್ ಗೆಲ್ಲಿ ಇಂತಹ ಹಾದಿ ತಪ್ಪಿಸುವಂತಹ ಮೆಸೇಜ್ ಗಳು ಮತ್ತು ಜಾಹೀರಾತುಗಳು. ಇದನ್ನು ನೋಡಿದವರು ತಪ್ಪಿಯೂ ಹಣ ಕೊಟ್ಟು ಆಡಿದರೆ ನಿಮ್ಮ ಕಥೆ ಮುಗಿಯಿತು,  ಕಾರಣ ಈ ಜೂಜು ನಿಮ್ಮ ಮನೆಹಾಳು ಮಾಡುವುದು ಖಂಡಿತ. ಈ ರಮ್ಮಿ ರೀತಿಯ ಆನ್ ಲೈನ್ ಗೇಮ್ಸ್ ಗಳು ಇಂದು  ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿದೆ. ಇದರಿಂದ ಬಹಳಷ್ಟು ಜನರು ಸಂಕಷ್ಟ ಅನುಭವಿಸಿದ್ದಾರೆ. ಅನೇಕರು ತಾವು ಉಳಿತಾಯ ಮಾಡಿದ ಹಣವನ್ನು ಕಳೆದುಕೊಂಡು, ಈ ಜೂಜು ಆಡಲು ಬೇರೆಯವರ ಬಳಿ ಸಾಲ ಮಾಡಿಕೊಂಡು ಆ ಸಾಲ ತೀರಿಸಲು ಸಾಧ್ಯವಾಗದೆ ಕೊನೆಗೆ ನೇಣಿಗೆ ಶರಣಾಗುತ್ತಿದ್ದಾರೆ. ಅದೇ ರೀತಿ ಅನೇಕ ಮಂದಿ ತಮ್ಮ  ಮನೆ, ಆಸ್ತಿ-ಪಾಸ್ತಿ ಮಾರುತ್ತಿರುವುದು ನಮಗೆ ಕಾಣಸಿಗುತ್ತದೆ. ಅಂದಾಜು ಸುಮಾರು 2 ಸಾವಿರಕ್ಕೂ ಅಧಿಕ ವೆಬ್ಸೈಟ್ಗಳು ಭಾರತದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ಪ್ರೋತ್ಸಾಹ ನೀಡುತ್ತಿವೆ. ಈ ರೀತಿಯ ಜೂಜು ಆಡಲು ಜಾಹೀರಾತು ನೀಡುವ ವವರು ಪ್ರಖ್ಯಾತ ಚಲನಚಿತ್ರ ನಟರು ಅದೇ ರೀತಿ ಕ್ರಿಕೇಟ್ ಆಟಗಾರರಾಗಿರುವುದು ದುರಂತದ ವಿಷಯ.

ಈ ರೀತಿಯ ಜೂಜು ಯುವ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಈ ಘಟನೆಯೇ ಸಾಕ್ಷಿಯಾಗಿದೆ. ಚೈನ್ನೈ ನಗರದಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಒನ್ಲೈನ್ ಜೂಜಿನ ಮಾಯಾಜಾಲಕ್ಕೆ ಬಿದ್ದು, ಯಾರೋ ಕಸ್ಟಮರ್ ಕೊಟ್ಟಿದ್ದ ಬಂಗಾರವನ್ನು ಬೇರೆ ಅಂಗಡಿಯಲ್ಲಿ ಮಾರಿ ಅದನ್ನು ಒನ್ಲೈನ್ ಜೂಜಿಗೆ ಕಟ್ಟಿ ಅದರಲ್ಲಿ ತನ್ನೆಲ್ಲಾ ಹಣವನ್ನು ಕಳೆದುಕೊಂಡು ಕೊನೆಗೆ ಸಮಾಜದದಲ್ಲಿ ಮಯಾ೯ದೆಗೆ ಹೆದರಿ ರೈಲಿಗೆ ತಲೆ ಕೊಟ್ಟು ತನ್ನ ಜೀವನ ತ್ಯಜಿಸಿರುತ್ತಾನೆ. ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅನೇಕರು ಆನ್ಲೈನ್ ಜೂಜಿಗೆ ಸಿಲುಕಿ ನೇಣು ಬಿಗಿದುಕೊಂಡವರ ಕಥೆಯನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ.

ಈ ಜೂಜಿನ ವಿಷಯದ ಕುರಿತು ಇದರ ಆಳಕ್ಕೆ  ಹೋದರೆ  ಅನೇಕ ರೀತಿಯ ದಂತ ಕಥೆಗಳನ್ನು ನಾವು ನೋಡಬಹುದು. ಈ ಜೂಜಿಗೆ ಇನ್ನೆಷ್ಟು ಯುವಕರು ಬಲಿ ತೆಗೆದುಕೊಳ್ಳಬೇಕೋ ತಿಳಿಯದು. ನಾವು ನಮ್ಮ ಮಕ್ಕಳಿಗೆ ಮೊಬೈಲ್  ಕೊಡುವಾಗ ಎಷ್ಟು ಎಚ್ಚರವಹಿಸಬೇಕಾಗಿದೆ. ಆಗಾಗ ಮಕ್ಕಳ ಮೊಬೈಲ್ ಅನ್ನು ನೋಡುತ್ತಾ ಇರಬೇಕಾದ ಪರಿಸ್ಥಿತಿ ಇದೆ. ಈಗ ಎಲ್ಲ ಕಡೆ ಆನ್ ಲೈನ್ ತರಗತಿ ನಡೆಯುವ ಸಂದಭ೯ದಲ್ಲಿ ಮಕ್ಕಳು ಈ ರೀತಿಯ ಅನ್ ಲೈನ್ ಜೂಜಿನ ಖೆಡ್ಡಕ್ಕೆ ಬೀಳುವ ಸಂದಭ೯ವಿದೆ ಹೀಗಾಗಿ ಪೋಷಕರು ಈ ಬಗ್ಗೆ ಗಮನ ಹರಿಸಬೇಕಾದ ಸ್ಥಿತಿಯಿದೆ.

ಈ ಒನ್ಲೈನ್ ಗ್ಯಾಬ್ಲಿಂಗ್ ಎನ್ನುವುದು ವಯಸ್ಕರು, ಮುಖ್ಯವಾಗಿ ಯುವ ಜನಾಂಗ ಮತ್ತು ಓದುತ್ತಿರುವ ಮಕ್ಕಳಲ್ಲಿ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದೆ. ಇದರಿಂದ ಅನೇಕ ಮಕ್ಕಳು ಯುವಕರು ಹಣದ ಆಸೆಗಾಗಿ ಅಡ್ಡ ದಾರಿಯನ್ನು ತುಳಿಯು ತ್ತಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಈ ರೀತಿಯ ಒನ್ಲೈನ್ ಗ್ಯಾಂಬ್ಲಿಂಗ್ ದೊಡ್ಡ ಮಾರಕವಾಗಿ ಮಾರ್ಪಾಡಾಗಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯಲ್ಲಿವೆ. ನಮ್ಮ ಅನೇಕ ಮಕ್ಕಳು ಮನೆಯಲ್ಲಿ ಪೋಷಕರ ಜೊತೆಗೆ ಕುಳಿತು ತಮ್ಮ ಸಂತೋಷದ ಸಮಯವನ್ನು ಸವಿಯುವುದನ್ನ ಬಿಟ್ಟು ಮೊಬೈಲ್ ನಲ್ಲಿ ಒನ್ಲೈನ್ ಗ್ಯಾಬ್ಲಿಂಗ್ ಆಡುತ್ತಾ ತಮ್ಮ ಉತ್ತಮ ಸಮಯವನ್ನು ಹಾಳು ಮಾಡುದನ್ನು ನೋಡಿದಾಗ ಮನ ಕರಗುತ್ತದೆ. ಅಪ್ಪ- ಅಮ್ಮ ಕಷ್ಟ ಪಟ್ಟು ಕೂಲಿ-ನಾಲಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ  ಕೂಡಿಟ್ಟ ಹಣವನ್ನು ನೀರಲ್ಲಿ ಹೋಮಮಾಡಿದಂತೆ  ಖಚು೯ ಮಾಡುತ್ತಿದ್ದಾರೆ. ತಮ್ಮ ಪಾಲಕರಿಗೆ ಸಮಾಜದಲ್ಲಿ ಇರುವ ಗೌರವ, ಘನತೆ ಮತ್ತು ಮರ್ಯಾದೆಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ಸಮಾಜಕ್ಕೂ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದಾರೆ.

ನಮ್ಮ ಯುವ ಸಮೂಹಕ್ಕೆ ಚಲನಚಿತ್ರದಲ್ಲಿ ಅಥವಾ ಆಟದಲ್ಲಿ ಹೀರೋಗಳಾಗಿರುವವರು ಜನರಿಗೆ ಬುದ್ದಿ ಹೇಳುವುದನ್ನು ಬಿಟ್ಟು, ಸೆಲೆಬ್ರಿಟಿಗಳೇ ಒನ್ಲೈನ್ ಗ್ಯಾಂಬಿಂಗ್ ಗೆ   ಪ್ರಚೋದನೆಯನ್ನು ನೀಡುತ್ತಿದ್ದಾರೆ, ಮತ್ತು ಅನೇಕರು ಅಡ್ಡ ದಾರಿಯನ್ನು ತುಳಿಯುವುದಕ್ಕೆ ಇವರುಗಳೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣೀಕರ್ತರಾಗಿದ್ದಾರೆ.

ಸಕಾ೯ರದ ಮಧ್ಯಪ್ರದೇಶ ಬೇಕಾಗಿದೆ:  ಸರ್ಕಾರವು ಇದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ನಮ್ಮ ಹಳ್ಳಿಯಲ್ಲಿ ಕೇಳಿ ಅಂಕ ಅದೇ ರೀತಿ ಎಕ್ಕ ರಾಜ ಆಟ ಆಡಿದರೆ ಪೋಲಿಸರು ನಿದಾ೯ಕ್ಷಿಣ್ಯವಾಗಿ ಕೇಸು ದಾಖಲಿಸಿ ಜೈಲಿಗೆ ಹಾಕು ತ್ತಾರೆ. ಆದರೆ ಈ ರೀತಿಯ ಆನ್ ಲೈನ್ ಜೂಜಿಗೆ ಯಾವ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ಸಾವಿರಾರು ವೈಬ್ ಸೈಟ್ ಗಳು ಈ ರೀತಿಯ ಆನ್ ಲೈನ್ ಜೂಜಿನಿಂದ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುತ್ತಿದ್ದಾರೆ. ನಮ್ಮಯುವ ಪೀಳಿಗೆ ಇದಕ್ಕೆ ದಾಸರಾಗಿ ಬಿಟ್ಟಿದ್ದಾರೆ ಮತ್ತು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಸಕಾ೯ರ ಬೇಗನೇ ಈ ಪಿಡುಗಿನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರ ನಿಷೇಧಕ್ಕೆ ಶೀಘ್ರ ಕಾನೂನು ರೂಪಿಸಬೇಕು. ಸರ್ಕಾರ, ಸೆಲೆಬ್ರೆಟಿಗಳು, ಸಂಘ ಸಂಸ್ಥೆಗಳು  ಎಲ್ಲರೂ ಕೈಜೋಡಿಸಿ  ಒನ್ಲೈನ್ ಗ್ಯಾಂಬ್ಲಿಂಗ್ ಅನ್ನು ಸಮಾಜದಿಂದ ಬೇರು ಸಮೇತ ಕಿತ್ತೆಸೆಯ ಬೇಕಾಗಿದೆ.

ಈ ಆನ್ಲೈನ್ ಗ್ಯಾoಬ್ ಲಿಂಗ್ ಬಗ್ಗೆ ಜನರು ಎಚ್ಚರವಹಿಸಬೇಕು ಹಣದ ಆಸೆಗೆ ಬಲಿಯಾಗಿ ಜೀವನ ಹಾಳು ಮಾಡಬಾರದು. ಈ ರೀತಿಯ ಅನ್ ಲೈನ್ ಗೇಮ್ಸ್ ಪ್ರಾರಂಭಿಸುವ ಮೊದಲು ಜನರನ್ನು ಸೇರಿಸಲು ವಾಟ್ಸ್ ಗ್ರೂಪ್ ರಚಿಸಿ ಗೂಗಲ್ ಪೇ ಮೂಲಕ ಪ್ರಾರಂಭಿಕ ಶುಲ್ಕ ಕಟ್ಟಲು ತಿಳಿಸಲಾಗುತ್ತದೆ ನಂತರ ಆಟ ಪ್ರಾರಂಭವಾದ ಬಳಿಕ ನೇರವಾಗಿ ಬ್ಯಾಂಕಿನ ಖಾತೆಯ ಮೂಲಕ ಹಣ ಹೋಗುತ್ತದೆ. ಒಂದು ಬಾರಿ ಆಟಕ್ಕೆ ಹೋದರೆ ಮತ್ತೆ ವಾಪಾಸು ಬರಲು ಕಷ್ಟ ಹೀಗಾಗಿ ತನ್ನ ಜೀವನವನ್ನು ಈ ಆಟದಲ್ಲಿ ಕಳೆದು ಹೋಗುತ್ತಾರೆ.

ಈ ರೀತಿಯ ಜೂಜಿನ ಬಗ್ಗೆ ಜನಜಾಗೃತಿ ಮೂಡಿಸಲು ಯುವ ಜನಾಂಗದವರು ಮುಂದೆ ಬರುತ್ತಿರುವುದು ಅಭಿನಂದನೀಯ ವಿಷಯ. ಈಗಾಗಲೇ ಜನಪ್ರತಿನಿಧಿಗಳಿಗೆ ಈ ವಿಷಯ ತಿಳಿದಿದೆ ಎಲ್ಲರೂ ಪಕ್ಷ ಭೇಧ ಮರೆತು ಸಕಾ೯ರದ ಮೇಲೆ ಒತ್ತಡ ತರಬೇಕು. ಒಟ್ಟಾಗಿ ಈ ಆನ್ ಲೈನ್ ಜೂಜಿಗೆ ಪೂಣ೯ ವಿರಾಮ ಹಾಕಬೇಕಾಗಿದೆ.

 ರಾಘವೇಂದ್ರ ಪ್ರಭು,  ಕವಾ೯ಲು, ಯುವ ಲೇಖಕ

 
 
 
 
 
 
 
 
 
 
 

Leave a Reply