ತಮ್ಮ ಸೇವಾ ಕಾರ್ಯಗಳಿಂದ ಉಡುಪಿಯ ಜನರ ಮನಗೆದ್ದ ಶಾಸಕ ರಘುಪತಿ ಭಟ್~✍️ಆಲ್ವಿನ್ ಡಿ’ಸೋಜ.

ಜನಪ್ರತಿನಿಧಿಯಾಗಲು ಯೋಗವೂ ಬೇಕು, ಯೋಗ್ಯತೆಯೂ ಬೇಕು. ಇಂತಹ ಜನನಾಯಕನನ್ನು ಪಡೆಯಬೇಕಾದರೆ ಉಡುಪಿಯ ಜನತೆ ಪುಣ್ಯ ಮಾಡಿರಬೇಕು.

ಜನಪ್ರಿಯ ಶಾಸಕ ಮಾನ್ಯ ಶ್ರೀ. ಕೆ. ರಘುಪತಿ ಭಟ್ ರವರಲ್ಲಿ ನಿತ್ಯ ಸಮಸ್ಯೆಗಳನ್ನು ಹೇಳುತ್ತಾ ಅರ್ಜಿಗಳನ್ನು ತಂದು ಸಹಿಮಾಡುತ್ತಾ, ತಮ್ಮ ಕೆಲಸಗಳನ್ನು ಸಂತೋಷದಿಂದ ಮಾಡಿಸುತ್ತಾ ಹೋಗುತ್ತಿರುವ ಜನರ ಸರದಿ ಒಂದು ಕಡೆ, ಬೆಳಗ್ಗೆ ಮನೆಯಲ್ಲಿ ಜನರ ದಂಡು, ಕಛೇರಿಯಲ್ಲಿ ನಿರಂತರ ಜನರ ಸರದಿಸಾಲು, ಸಮಸ್ಯೆ ಹೇಳಿ ಬಂದವರನ್ನು ಸ್ವತಃ ತಾವೇ ಮುಖತ ಸ್ಪಂದಿಸಿ, ಯಾವ್ಯಾವ ಅಧಿಕಾರಿಗಳನ್ನು ಮಾತನಾಡಿಸಬೇಕೋ ಅಂತಹವರನ್ನು ಅರ್ಜಿದಾರರೆದುರೇ ಮಾತನಾಡಿಸಿ ಸಮಸ್ಯೆ ಬಗೆಹರಿಸುವ ಶೈಲಿ ಇದು ಅಸಾಧಾರಣ ವ್ಯಕ್ತಿತ್ವದ ಭಟ್ರಿಗೆ ಮಾತ್ರ ಸಾಧ್ಯ.

ನೊಂದವರ ಬಾಳಿಗೆ ಭಟ್ರು ಸದಾ ಶ್ರೀರಕ್ಷೆ. ಅವರ ಕಾರ್ಯವೈಖರಿಯು ಅಷ್ಟೇ ಅದ್ಭುತ. ಯಾಕೆಂದರೆ ಕೆಲವು ಮಾಜಿಶಾಸಕರಾದವರು ಜನರ ಅಹವಾಲಿಗೆ ತಮ್ಮ ಕಛೇರಿಯ ಆಪ್ತ ಸಹಾಯಕರಿಗೆ ಹೇಳಿ ಕಾಲಹರಣ ಮಾಡುವುದಷ್ಟೇ ಇದ್ದಿತು.

ಆದರೆ ಶಾಸಕ ಭಟ್ಟರ ಶೈಲಿಯೇ ಭಿನ್ನ. ತನ್ನನ್ನು ಮತ ಹಾಕಿ ಆರಿಸಿದ ಜನರಿಗೆ ಎಷ್ಟು ಪ್ರಾಮುಖ್ಯತೆಯೋ ಅಷ್ಟೇ ಪ್ರಾಮುಖ್ಯತೆಯನ್ನು ತನಗೆ ಮತ ಹಾಕದ, ಅಣಕಿಸಿದ ವಿರೋಧ ಪಕ್ಷದವರಿಗೂ ಕೊಡುತ್ತಾರೆ, ಯಾಕೆಂದರೆ ತನ್ನ ಕ್ಷೇತ್ರದ ಎಲ್ಲಾ ಜನರ ಶಾಸಕನಲ್ಲವೇ ಮತ್ತು ಇದು ಶಾಸಕನಾದ ಮೇಲೆ ಜವಾಬ್ದಾರಿಯೂ ಹೌದು ಎನ್ನುತ್ತಾರೆ.

➡️ತಾನು ಅಧಿಕಾರದಲ್ಲಿರಲಿ ಇಲ್ಲದೆ ಇರಲಿ, ಉಡುಪಿಯ ಜನತೆಗೆ ಯಾವುದೇ ಸಮಯದಲ್ಲೂ ಸದಾ ಸ್ಪಂದಿಸಿ ಸಹಾಯಕ್ಕೆ ನಿಲ್ಲುವ ಒಬ್ಬ ನಂಬಿಗಸ್ಥ ನಾಯಕನಿದ್ದರೆ ಅದು ಜನಮೆಚ್ಚಿದ ಜನನಾಯಕನೆಂದರೆ ರಘುಪತಿ ಭಟ್. ಅವರು ಪಳಗಿದ ಗರಡಿಯೇ ಅಂತಹುದು, ಡಾ. ವಿ.ಎಸ್. ಆಚಾರ್ಯರ ಶಿಷ್ಯರಾಗಿ ರಾಜಕೀಯ ಚಾಣಾಕ್ಷತೆ ಪಡೆದು, ಹಿರಿಯ ನಾಯಕರಾದ ಸೋಮಶೇಖರ ಭಟ್, ಕರಂಬಳ್ಳಿ ದಿವಂಗತ ಸಂಜೀವ ಶೆಟ್ಟಿಯಂತವರ ಗರಡಿಯಲ್ಲಿ ಪಳಗಿದ ಅಪ್ಪಟ ಜನಸ್ನೇಹಿ ನಾಯಕ ಎನ್ನಲು ಹೆಮ್ಮೆಯೆನಿಸುತ್ತದೆ.ಸದಾ ತನ್ನೊಂದಿಗೆ ಕಾರ್ಯಕರ್ತರ, ಯುವಜನರ ತಂಡ ಕಟ್ಟಿಕೊಂಡು ಯಾವುದೇ ಸಂಕಷ್ಟವಿರಲಿ ನೆರೆಬರಲಿ, ನೀರಿಗೆ ಬರವಿರಲಿ, ಕ್ಷೇತ್ರದಲ್ಲಿ ಯಾವುದೇ ಸಂಕಷ್ಟವಿರಲಿ ತಾನು ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಸೇವೆಗೆ ಇಳಿಯುವ, ಜಿಲ್ಲಾಡಳಿತದ, ನಗರಾಡಳಿತದ ವಿವಿಧ ಇಲಾಖೆಗಳ ಅಧಿಕಾರಿ ಗಳಿಗೆ ಚುರುಕು ಮುಟ್ಟಿಸಿ ಕಾರ್ಯಪ್ರವೃತ್ತರಾಗುತ್ತಾರೆ.

➡️ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಉಡುಪಿಯನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸ ಬೇಕೆನ್ನುವ ಕಾರ್ಯವೈಖರಿಯ ಹಠಕ್ಕೆ ಯಾರೂ ಮನಸೋಲಲೇಬೇಕು. ಎಷ್ಟೋ ಜನ ವಿರೋಧಿ ಗಳು, ಶಾಸಕ ರಘುಪತಿ ಭಟ್ ಮಾಡುವ ಅಭಿವೃದ್ಧಿಯ ಕೆಲಸಗಳಿಗೆ ಮೊದಮೊದಲು ಅಣಕ ವಾಡಿದರೂ, ಮತ್ತೆ ಮನಸೋತು ಭೇಷ್ ಎನ್ನುತ್ತಿದ್ದಾರೆ.

ಉಡುಪಿಯ ಜನತೆಯನ್ನು ಮಂತ್ರಮುಗ್ಧರನ್ನಾಗಿ ಮಾಡಲು ಅಂತಹದ್ದೇನು ಮಾಡಿದ್ದಾರೆ ನೋಡಿ: ಆಗ ಪ್ರಪಂಚಕ್ಕೆ ಕೋವಿಡ್ ಮೊದಲನೆ ಅಲೆಯ ಸಂಕಷ್ಟದ ಕಾಲ. ಲಾಕ್ ಡೌನ್ ಸಂದರ್ಭ. ಕಣ್ಣಿಗೆ ಕಾಣದ ವೈರಾಣು ಜಗತ್ತನ್ನೇ ನಡುಗಿಸಿದ ಸಮಯ, ಜನರು ಮನೆಯಿಂದ ಹೊರಬರ ಲಾಗದೆ, ತಮಗೆಲ್ಲಿ ಕೊರೋನಾ ವಕ್ಕರಿಸುವುದೋ ಎಂಬ ಭಯದ ವಾತಾವರಣ. ವ್ಯಾಪಾರ ವಹಿವಾಟು, ಅಂಗಡಿ ಮುಗ್ಗಟ್ಟುಗಳು ಸ್ಥಬ್ದ ವಾದ ಸಮಯ. ವಲಸೆ ಕಾರ್ಮಿಕರು ದುಡಿಯಲು ಆಗದೆ, ಕೈಯಲ್ಲಿ ಹಣವಿಲ್ಲದ ಸಮಯ.ವಿರೋಧ ಪಕ್ಷದವರು ಪ್ರಧಾನಿ ಮೋದಿಯವರ ಬಗ್ಗೆ ಕುಹುಕವಾಡುತ್ತಾ, ಅಣಕಿಸುತ್ತಾ, ಕೋವಿಡ್ ಗೆ ಹೆದರಿ ತಿಂಗಳುಗಟ್ಟಲೆ ರಗ್ಗ್ ಹೊದ್ದು ಮಲಗಿರುವ ಸನ್ನಿವೇಶ.

ಈ ಸಮಯದಲ್ಲಿ ಶಾಸಕರ ಸಮಯೋಚಿತ ನಿರ್ಧಾರ, ಕಡಿಯಾಳಿ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ಮುಖಾಂತರ, ಉಡುಪಿ ನಗರದಲ್ಲಿರುವ ವಲಸೆ ಕಾರ್ಮಿಕರಿಗೆ, ಅಗತ್ಯವಿರುವವರಿಗೆ ಅನ್ನದಾನ ಕಾರ್ಯಾರಂಭ.ಉಡುಪಿಯಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹಸಿದ ಹೊಟ್ಟೆಯಲ್ಲಿ ಯಾರೂ ಮಲಗಿರಬಾರದು ಎಂಬ ಮನೋಭಾವದಲ್ಲಿ ದಾನಿಗಳಿಂದ ಮಧ್ಯಾಹ್ನ 5000 ಜನರಿಗೆ ಊಟದ ವ್ಯವಸ್ಥೆ ಸುಸಜ್ಜಿತವಾಗಿ ರಾಘವೇಂದ್ರ ಕಿಣಿ ಮತ್ತು ತನ್ನ ಕಾರ್ಯಕರ್ತರೊಂದಿಗೆ ಎಲ್ಲಾ ವಾರ್ಡ್ ಗಳಲ್ಲಿ ನಿತ್ಯ ಕಠೋರ ಬಿಸಿಲಲ್ಲಿ ಸಂಚರಿಸಿ ಅನ್ನದಾನ ಮಾಡಿದ ಶ್ರೇಷ್ಠತೆ.ಶಾಸಕರ ನಿರ್ದೇಶನದ ಮೇರೆಗೆ ಯಶ್ ಪಾಲ್ ಸುವರ್ಣ, ಕಪ್ಪೆಟ್ಟು ಪ್ರವೀಣ್ ಶೆಟ್ಟಿ ಮತ್ತು ದಾನಿಗಳ ನೆರವಿನಿಂದ ಕ್ಷೇತ್ರದಲ್ಲಿ ರಾತ್ರಿ 5000 ಊಟದ ವ್ಯವಸ್ಥೆ, ಲಾಕ್ ಡೌನ್ ಮುಗಿಯುವ ವರೆಗೆ ಕೊಟ್ಟು ಸಹಕರಿಸಿದರು.ತನ್ನ ಕ್ಷೇತ್ರದ ಪ್ರತಿಯೊಂದು ವಾರ್ಡ್ ಗಳಲ್ಲಿ ಕಾರ್ಯಕರ್ತರ ಮತ್ತು ದಾನಿಗಳ ಸಹಾಯದಿಂದ ಬಡಮಧ್ಯಮ ಕುಟುಂಬ, ಕಡೂಬಡವರಿಗೆ, ಕೆಲಸವಿಲ್ಲದ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ಟನ್ನು ಮನೆಮನೆಗೆ ಮುಟ್ಟಿಸುವ ಕಾರ್ಯಕ್ರಮಕ್ಕಾಗಿ ಕೈಜೋಡಿಸಿ ಪ್ರಾರ್ಥಿಸಿ ನಿರ್ದೇಶನ ನೀಡಿದರು.

ಕೊರೋನಾ ಅಂಟುರೋಗ ಮನೆ ಮನೆಯಲ್ಲಿ ತಾಂಡವವಾಡುತ್ತಿದ್ದಾಗ, ರೋಗಿಗಳ ದೂರವಾಣಿ ಕರೆಗೆ ತಾಳ್ಮೆಯಿಂದ ಉತ್ತರಿಸಿ ಸಹಕರಿಸಿದರು, ತನ್ನ ಮನೆಯ ಸದಸ್ಯರೆಂದೇ ಭಾವಿಸಿ ರೋಗಿ ಗಳಿಗೆ ಸಹಾಯ ಮಾಡಿದರು. ಕೊರೋನಾ ರೋಗಿಗಳಿಗೆಂದೇ ಕ್ವಾರಂಟೈನ್ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳೊಂದಿಗೆ ಮಾತುಕತೆ, ಜಿಲ್ಲಾಡಳಿತ ಮತ್ತು ಸರಕಾರದೊಂದಿಗೆ ನಿಕಟ ಸಂಪರ್ಕ ಮಾಡಿ, ಜನರಿಗೆ ಅಭಯ ಹಸ್ತ ನೀಡಿದರು.ಕೊರೋನ ಸಂದರ್ಭದ ಭಯದ ವಾತಾವರಣದಲ್ಲಿ ಬಿಡುವಿಲ್ಲದೆ ಆರೋಗ್ಯ ಕಾಪಾಡುವಲ್ಲಿ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ತಮ್ಮ ಕಾರ್ಯಕರ್ತರಿಗೆ ಕರೆನೀಡಿ ಪ್ರತಿ ವಾರ್ಡ್ ಗಳಲ್ಲಿ ಸಹಾಯಕರನ್ನು ನೇಮಿಸಿ, ಆಶಾ ಕಾರ್ಯಕರ್ತೆಯರಿಗೂ ಮಾರ್ಗದರ್ಶನ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು, ಕೋವಿಡ್ ಮರಣ ಸಂಭವಿಸಿದಾಗ ಯಾವ ರೀತಿ ಅಂತ್ಯಸಂಸ್ಕಾರ ಮಾಡಬೇಕು ಎಂದು ಕಾರ್ಯಕರ್ತರ ತಂಡಕ್ಕೆ ಸೂಚಿಸಿ, ಕಾರ್ಯಕರ್ತರಿಗೆ ಬೇಕಾದ ಧೈರ್ಯ ತುಂಬಿದರು.

ಕೊರೋನ ಕಠಿಣ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಮರಣ ಹೊಂದಿದವರ ದೇಹ ಎಲ್ಲಿದೆಯೆಂದು ತಿಳಿಯದೆ, ಬಿಡಿಸಲಾಗದೆ ನಿದ್ರೆ ಬಿಟ್ಟು ಸಂಬಂಧಿಗಳು ಕಂಗಾಲಾಗಿದ್ದ ಸಂದರ್ಭದಲ್ಲಿ ಶಾಸಕರು ಉತ್ತಮವಾಗಿ ಸ್ಪಂದಿಸಿದ್ದಾರೆ.

ಉತ್ತರ ಕನ್ನಡದ ಗುರುದತ್ತ್ ಖೇಣಿ ಎಂಬವರು ಸಂಬಂಧಿಕರ ಮನೆಗೆ ಉಡುಪಿಗೆ ಬಂದವರು ಕೊರೋನಾಕ್ಕೆ ತುತ್ತಾಗಿ ಸಾವು ಸಂಭವಿಸಿತು. ಸಂಬಂಧಿಕರಿಗೆ ದಿಕ್ಕು ತೋಚದೆ ಎರಡು ದಿನ ನಿದ್ರೆ ಮಾಡದೆ ಆತಂಕದಲ್ಲಿದ್ದ ಒಬ್ಬ ನನ್ನ ಮಿತ್ರ ಈ ಸಂಬಂಧವಾಗಿ ನನಗೆ ಫೋನ್ ಮುಖಾಂತರ, ನಾವು ಕಷ್ಟದಲ್ಲಿದ್ದೇವೆ ಅಂದಾಗ ನಾನು ಶಾಸಕ ರಘುಪತಿ ಭಟ್ ರಿಗೆ ಫೋನಿನಲ್ಲಿ ವಿಷಯ ತಿಳಿಸಿದೆ.

ಶಾಸಕರು ಕರ್ನಾಟಕ ರಾಜ್ಮ ಭರವಸೆಯ ಸಮೀತಿಯ ಅಧ್ಯಕ್ಷ ರಾಗಿರುವುದರಿಂದ ಬೆಂಗಳೂರಿಗೆ ಹೊರಟಿದ್ದರು, ವಿಷಯವನ್ನು ತಿಳಿಸಿದೆ. ನನ್ನ ಮಿತ್ರನಿಗೂ ಫೋನಿನಲ್ಲಿ ಮಾತನಾಡಿಸಿದೆ, ಕೇವಲ ಮೂರ್ನಾಲ್ಕು ನಿಮಿಷಗಳಲ್ಲಿ ಜಿಲ್ಲಾಡಳಿತದ ಆರೋಗ್ಯಾಧಿಕಾರಿ DHO ರವರನ್ನು ಸಂಪರ್ಕಿಸಿ ಮಣಿಪಾಲದ ಆಸ್ಪತ್ರೆಯಲ್ಲಿರುವ ಮ್ರತ ದೇಹ ಎಲ್ಲಿದೆ, ಅಂತ್ಯ ಕ್ರಿಯೆಯ ವಿಚಾರ ತಿಳಿಸಿದರು.

ಮೃತ ದೇಹಗಳನ್ನು ಬಿಟ್ಟು ಹೋಗುವ, ಮುಟ್ಟಲೂ ಹೆದರುವ ಕಾಲದಲ್ಲಿ, ಶಾಸಕರು ನನ್ನ ಮಿತ್ರನಿಗೆ ಸಾಂತ್ವಾನ ಹೇಳಿ, ಮಕ್ಕಳು ಎಷ್ಟೋ ಜನ ತಮ್ಮ ತಂದೆ ತಾಯಿಗಳನ್ನು ಬೀದಿ ನಾಯಿಗಳಂತೆ ಬಿಟ್ಟು ಹೋಗುತಿದ್ದಾರೆ. ಇದು ಮನುಷ್ಯರ ಕುಲಕ್ಕೆ ಅಪಮಾನ.

ನಿಮಗೆ PP Kit ಗಳನ್ನು ಕೊಡಿಸಿ ಶವಸಂಸ್ಕಾರಕ್ಕೆ ರುದ್ರಭೂಮಿಯವರೆಗೆ ಎಲ್ಲಾ ಸಹಾಯ ಮಾಡುತ್ತೇನೆಂದು ಹೇಳಿ ಮಾತಿನಂತೆ ನಡೆಸಿಕೊಟ್ಟರು. ನನ್ನ ಮಿತ್ರನಿಗೆ ಆಶ್ಚರ್ಯವಾಗಿ ಇಂತಹ ದಯಾಮಮ ನಡತೆಯ ಶಾಸಕರು ಇರುತ್ತಾರೆಯೇ? ನಾವು ಎರಡು ದಿನದಿಂದ ಬೇಸರದಲ್ಲಿ ನಿದ್ರೆ ಬಿಟ್ಟು ಹುಚ್ಚರಂತಾಗಿದ್ದಾಗ ನಮಗೆ ಬೆಟ್ಟದಷ್ಟು ದೊಡ್ಡದಿದ್ದ ಸಮಸ್ಯೆಯನ್ನು ಬಹಳ ಸುಲಭವಾಗಿ ಬಗೆ ಹರಿಸಿದ ರೀತಿಗೆ ಸಹಸ್ರ ಸಹಸ್ರ ಧನ್ಯವಾದಗಳನ್ನು ಹೇಳಿದರು.

ಇದೊಂದು ಸಣ್ಣ ನಿದರ್ಶನವಷ್ಟೇ, ಇಂತಹ ಎಷ್ಟೋ ಸಮಸ್ಯೆಗಳಿಗೆ ಶಾಸಕರು ಸಹಾಯ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಶಾಸಕರಿಗೆ ರಾತ್ರಿ ಹಗಲು ಫೋನುಗಳದ್ದೇ ಸುರಿಮಳೆ. ಆದರೂ ಸ್ವಲ್ಪವೂ ದಣಿಯದೆ ನಿರಂತರ ಜನಸೇವೆಯೇ ಜನಾರ್ಧನ ಸೇವೆಯಲ್ಲಿ ತೊಡಗಿದ್ದರು.

ಇಡೀ ನಗರಕ್ಕೆ ನಗರವೇ ಸ್ಥಬ್ದವಾಗಿರುವಾಗ, ಕೊರೋನ ಪ್ರಥಮ ಅಲೆ ಕಡಿಮೆ ಆಗುತ್ತಾ ಬರುವಾಗ, ಲಾಕ್ಡೌನ್ ಸಡಿಲಿಸಿದರೂ ಜನರಿಗೆ ಅಗತ್ಯಕ್ಕೆ ವಾಹನ ಸಂಚಾರ ಇಲ್ಲದ್ದನ್ನು ಮನಗಂಡು ತನ್ನ ಆಪ್ತ ಕಾರ್ಯಕರ್ತರಾದ ಗಿರೀಶ್ ಅಂಚನ್ ಒಂದು ಸಲಹೆ ಕೊಟ್ಟರು.

ಗರದಲ್ಲಿ ಬಸ್ಸ್ ಸೇವೆ ಆರಂಭಿಸಿದರೆ ಹೇಗೆ ಎಂದು. ಶಾಸಕರು ತನ್ನ ಆಪ್ತ ಕಾರ್ಯಕರ್ತರನ್ನು ಕರೆದು ಮಾತುಕತೆ ಮಾಡಿ ಉಡುಪಿ ನಗರದಲ್ಲಿ ನಾಳೆಯಿಂದ ಬಸ್ಸ್ ಸೇವೆ ಆರಂಭಿಸುವ, ಹಲವು ಕಾಲದಿಂದ ನಿಂತಿರುವ ಬಸ್ಸ್ ಗಳನ್ನು ಸುವ್ಯವಸ್ಥೆಗೆ ತರಲು ತಲಾ ಒಂದು ಲಕ್ಷಕ್ಕೂ ಮಿಕ್ಕಿ ಖರ್ಚಾ ಗುತ್ತದೆ.

ಕಡಿಯಾಳಿ ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿಯ ಅಧ್ಯಕ್ಷ ಮಹೇಶ್ ಠಾಕೂರ್ ರವರು ಯೋಜನೆ ತಯಾರಿಸಿ, ಡ್ರೈವರ್ ಗಳಿಗೆ ಕರೆಸಿ, ಕಾರ್ಯಕರ್ತರೇ ಸೇರಿ ಕಂಡಕ್ಟರ್ ಕೆಲಸ, ಸೆನಿಟೈಸೇಷನ್ ಮಾಡಿ ಉಚಿತ ಬಸ್ಸ್ ಸೇವೆ ಆರಂಭಿಸಿಯೇ ಬಿಟ್ಟರು.

ಆದರೂ ಜನರು ಆರಂಭದಲ್ಲಿ ನಿಧಾನವಾಗಿ ತಮ್ಮ ಕೆಲಸಕ್ಕೆ ತೊಡಗಿಕೊಂಡರು, ಹೀಗೆ ಹಳ್ಳಿಗಳಿಂದ ಹಿಡಿದು, ನಗರಗಳಲ್ಲಿ ಜನಸಂಚಾರ ಆರಂಭವಾಯಿತು, ನಂತರ ನಗರದಲ್ಲಿ ವ್ಯಾಪಾರ ಆರಂಭವಾಯಿತು. ಹೀಗೆ ಸನ್ಮಾನ್ಯ ಶಾಸಕರು ಕಾರ್ಯಕರ್ತರನ್ನು ಸೇರಿಸಿ ಬಸ್ಸು ಗಳಿಂದ ಹಿಡಿದು ಬಸ್ಸ್ ನಿಲ್ದಾಣ ಸ್ವಚ್ಚಗೊಳಿಸಿ, ಸ್ವಚ್ಚತೆಗೆ ಪ್ರಾಶಸ್ತ್ಯ ಕೊಟ್ಟು ಉಡುಪಿಯಲ್ಲಿ ವಾಹನಸಂಚಾರ ಮತ್ತು ವ್ಯಾಪಾರ ಆರಂಭಿಸಲು ಉತ್ಸಾಹ ಕೊಟ್ಟರು.

ಜನಸೇವೆಯೇ ಜನಾರ್ಧನ ಸೇವೆಯೆಂದರಿತು ಬಹಳ ಚಟುವಟಿಕೆಯಿಂದ ಕೂಡಿದ ಶಾಸಕರು, ನಂತರ ಸ್ವಲ್ಪ ಸಮಯದಲ್ಲಿ ಕೊರೋನಾಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದರು. ಗುಣಮುಖರಾಗಿ ಮತ್ತೆ ಸೇವೆಯಾರಂಭಿಸಿದರು.

ಉಡುಪಿಯಲ್ಲಿ ಆಗಸ್ಟ್ ತಿಂಗಳಲ್ಲಿ ಮೇಘಸ್ಫೋಟವಾಗಿ ಸುರಿದ ಮಳೆಯಿಂದ ನೆರೆಬಂದು ಜನ ಜೀವನವೇ ಅಸ್ತವ್ಯಸ್ತ ವಾಯಿತು. ರಾತ್ರಿ ನೆರೆಬಂದಾಗ ಪುನಃ ಕಾರ್ಯಕರ್ತರನ್ನು ರಾತ್ರಿಯೇ ಕರೆಸಿ ತಂಡ ತಂಡಗಳಾಗಿ ರಚಿಸಿ ನೆರೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದರು.

ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿಯವರೊಂದಿಗೆ ಮಾತನಾಡಿ ಜಿಲ್ಲಾಡಳಿತ ಮತ್ತು ಸರಕಾರದಿಂದ, ಸಂಸದೆ ಶೋಭಾ ಕರಂದ್ಲಾಜೆಯವರಿಗೆ ತಿಳಿಸಿ ಸಹಾಯ ಯಾಚಿಸಿ NDRF ರಕ್ಷಣಾ ಸಲಕರಣೆ ಗಳೊಂದಿಗೆ ನೆರೆಯ ಮಧ್ಯೆ ಸಿಲುಕಿ ಕೊಂಡ ಜನರನ್ನು ರಕ್ಷಿಸಿದರು.

ಶಾಸಕರು ಸ್ವತಃ ತಾವೇ NDRF ತಂಡದೊಂದಿಗೆ ರಕ್ಷಣಾ ಕಾರ್ಯಕ್ಕೆ ಧುಮುಕಿದರು. ನೆರೆ ಬಂದ ಸ್ಥಳದ ಜನರಿಗೂ, ಸಾಕುಪ್ರಾಣಿಗಳಿಗೂ ರಕ್ಷಿಸಿದರು. ನೆರೆಯಿಂದ ಹಾನಿಗೊಳಗಾದವರಿಗೆ ಪರಿಹಾರ ಒದಗಿಸಿದರು.

ನೋಡ ನೋಡುತ್ತಿದ್ದಂತೆಯೇ ಕೊರೋನ ಎರಡನೆಯ ಅಲೆಯೂ ಈ ಬಾರಿ ಅಪ್ಪಳಿಸಿತು ಮಾರ್ಚ್ 2021: ಆದರೆ ಕೊರೋನಾ ವ್ಯಾಕ್ಸಿನ್ ಇರುವ ಕಾರಣ ಶಾಸಕರು ತನ್ನ ತಂಡದೊಂದಿಗೆ ಪುನಃ ಕಾರ್ಯಪ್ರವೃತ್ತರಾದರು. ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್ ರವರ ಕೋವಿಡ್ ವ್ಯಾಕ್ಸಿನ್ ಗಾಗಿ ಮತ್ತು ಇತರ ಉದ್ದೇಶಗಳಿಗಾಗಿ ಅಂಬುಲೆನ್ಸ್ ಸೇವೆ, ಕೊರೋನಾ ವಾರಿಯರ್ಸ್, ಕೊರೋನಾ ಕಾಲ್ ಸೆಂಟರ್ ಸಹಾಯಕೇಂದ್ರ ಆರಂಭಿಸಿದರು.

ಕ್ಷೇತ್ರದ ಜನರಿಗೆ ಸಹಾಯಕ್ಕೆ ನಿಂತರು. ಕೊರೋನಾ ವ್ಯಾಕ್ಸಿನ್ ಕೊಳ್ಳುವ ಮೊದಲು ರಕ್ತನಿಧಿಯ ಕ್ಯಾಂಪ್ ಗಳನ್ನು ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ತಂಡದೊಂದಿಗೆ , KMC ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಾಡಿ ಅಗತ್ಯಕ್ಕೆ ರೋಗಿಗಳಿಗೆ ಬೇಕಾದ ರಕ್ತ ಸಂಗ್ರಹ ಮಾಡಿದರು.

ಕೋವಿಡ್ ರೋಗದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ತೊಂದರೆ ಯಿರುವವರಿಗೆ ಮಣಿಪಾಲದ MIT ಯಲ್ಲಿ 350 ಬೆಡ್ಡ್ ಗಳ 24 ಗಂಟೆಯ ಸೇವೆಯನ್ನು ಕೊಡುವ ಉಚಿತ ಕ್ವಾರಂಟೈನ್ ಕೇಂದ್ರವನ್ನು ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಸ್ಥಾಪಿಸಿದರು.

ಎರಡನೆಯ ಅಲೆಯ ಸಂದರ್ಭದಲ್ಲಿ ಯುವಕರೆಲ್ಲಾ ತಾತ್ಕಾಲಿಕ ಕೆಲಸವಿಲ್ಲದೆ ಮನೆಯಲ್ಲಿ ರುವುದನ್ನು ಮನಗಂಡು ಯುವಶಕ್ತಿಗೆ ಚೈತನ್ಯ ತುಂಬಿ, ಕ್ಷೇತ್ರದಲ್ಲಿ ರೈತರು ಕೃಷಿ ಮಾಡದೆ ಹಡಿಲು ಬಿಟ್ಟಿರುವ ಗದ್ದೆಗಳನ್ನು ಕೃಷಿ ಮಾಡುವ ಮಹತ್ವದ ಯೋಜನೆಯನ್ನು ರೂಪಿಸಿ, ಕೇದಾರೋತ್ಥಾನ ಟ್ರಸ್ಟ್ ಅನ್ನು ಹುಟ್ಟುಹಾಕಿ ಉಡುಪಿಯಲ್ಲಿ ಕೃಷಿ ಕ್ರಾಂತಿಗೆ ಮುನ್ನುಡಿ ಬರೆದರು.

ಈಗ ಸುಮಾರು 350 ಕಿ.ಮೀ. ಉದ್ದಕ್ಕೆ ಕೆರೆ, ತೊರೆ, ತೋಡುಗಳ ಹೂಳು ತೆಗೆದು, ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೊದೆ, ಗಿಡಗಳನ್ನು ಯಂತ್ರಗಳು ಸಹಾಯದಿಂದ ಸ್ವಚ್ಚ ಮಾಡಿ, ಸುಮಾರು 2000 ಎಕರೆ ಪ್ರದೇಶದಲ್ಲಿ ಹಸಿರು ಕ್ರಾಂತಿ ಆರಂಭಿಸಿದ್ದಾರೆ.

ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ರವರು ಮೊನ್ನೆ ಉಡುಪಿಗೆ ಭೇಟಿ ನೀಡಿ ತಾವೇ ಸ್ವತಃ ಗದ್ದೆಗಿಳಿದು ಭತ್ತದ ನಾಟಿ ಮಾಡಿ ಶಾಸಕ ರಘುಪತಿ ಭಟ್ ರವರನ್ನು ಶ್ಲಾಗಿಸಿದರು, ಇದೊಂದು ರಾಜ್ಯಕ್ಕೆ ಮತ್ತು ದೆಶಕ್ಕೆ ಮಾದರಿಯಾದ ಕಾರ್ಯಕ್ರಮ ಇಲ್ಲಿಯ ಯುವಜನತೆ ಉತ್ಸಾಹದಿಂದ ಭಾಗಿಯಾಗಿದ್ದು ತುಂಬಾ ಸಂತೋಷವಾಗಿದೆ ಎಂದರು.

ಉಡುಪಿಯಲ್ಲಿ ವಸತಿ ರಹಿತರಿಗೆ ಕೊಳಗೇರಿ ವಸತಿ ಯೋಜನೆ ಅಡಿಯಲ್ಲಿ ಸುಮಾರು 1000 ಪ್ಲ್ಯಾಟ್ ಗಳನ್ನು ನಿರ್ಮಿಸುವ ಬ್ರಹತ್ ಯೋಜನೆಯನ್ನು ಹಮ್ಮಿಕೊಂಡು ವಸತಿ ಸಚಿವ ಸೋಮಣ್ಣ ರವರ ಹಸ್ತದಿಂದ ಅಡಿಪಾಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.

460 ವಸತಿಗಳನ್ನು ಹೆರ್ಗಾ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ ಕಟ್ಟಡ ಹಂತದಲ್ಲಿದ್ದು 240 ಮನೆಗಳನ್ನು ಶಾಸಕರ ಮತ್ತು ಬರೋಡಾ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲೇ ಪಾರದರ್ಶಕ ವಾಗಿ ಲಾಟರಿತೆಗೆದು ಇತ್ತೀಚೆಗೆ ಹಂಚಿದರು.

ಮೀನುಗಾರರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಿರುವ ಶಾಸಕ ರಘುಪತಿ ಭಟ್: ಮೀನುಗಾರರ ಪ್ರಮುಖ ಬೇಡಿಕೆಯಾದ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಶ್ರೀ ಪ್ರಮೋದ್ ಮಧ್ವ ರಾಜ್ ಅವರು ಮೀನುಗಾರಿಕಾ ಸಚಿವರಾಗಿದ್ದಾಗ ರದ್ದುಗೊಳಿಸಲಾದ ಮೀನುಗಾರಿಕೆಯ ಯಾಂತ್ರಿ ಕೃತ ದೋಣಿಗಳಿಗೆ ಡೀಸೆಲ್ ಡೆಲಿವರಿ ಪಾಯಿಂಟ್ ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವ ಯೋಜನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ B.S. ಯಡಿಯೂರಪ್ಪ ಅವರು 2021-22 ನೇ ಸಾಲಿನ ಆಯವ್ಯಯದಲ್ಲಿ ಯಾಂತ್ರಿಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಮೀಟರ್ ಡೀಸೆಲ್ ಮೇಲಿನ ಮಾರಾಟ ತೆರಿಗೆ ಮರು ಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್ ನಲ್ಲಿಯೇ ತೆರಿಗೆ ರಹಿತ ದರದಲ್ಲಿ ಡೀಸೆಲ್ ನೀಡುವ ವ್ಯವಸ್ಥೆ ಯನ್ನು ಕಾರ್ಯಗತ ಗೊಳಿಸಿದರು.

ಆಳಸಮುದ್ರ ಮೀನುಗಾರರ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೀನುಗಾರರ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ರೊಂದಿಗೆ ಶಾಸಕರು ನಿರ್ದೇಶನದೊಂದಿಗೆ ಲಕ್ಷಗಟ್ಟಲೆ ಮೀನುಗಾರರನ್ನು ಸೇರಿಸಿ ಪ್ರತಿಭಟನೆ ನಡೆಸಿದರು.

ನಿರ್ಮಲ ಸೀತಾರಾಮ್ ಅವರನ್ನು ಭೇಟಿಯಾಗಿ ಮೀನುಗಾರರೊಂದಿಗೆ ಎ.ಎನ್.ಎಸ್ ನಿರೀಕ್ಷಕ್ ಬೋಟ್ ನಲ್ಲಿ ಸ್ವತಃ ಶಾಸಕ ರಘುಪತಿ ಭಟ್ ರವರು ಮತ್ತು ಮೀನುಗಾರರ ತಂಡ ಸತತ 5 ದಿನ ಬೋಟ್ ಪತ್ತೆಯಾಗುವವರೆಗೆ ಕಾರ್ಯಾಚರಣೆ ನಡೆಸಿದರು.

ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಪ್ರತ್ಯೇಕ ಪರಿಹಾರ ಧನ ದೊರಕಿಸುವಲ್ಲಿ ಶ್ರಮಿಸಿದರು. ಫಿಶ್ ಮಿಲ್ ಮೇಲಿನ GST ( ಸರಕು ಮತ್ತು ಸೇವಾ ತೆರಿಗೆ) ರದ್ದುಗೊಳಿಸಲು ವಿಶೇಷ ಪ್ರಯತ್ನ ಮಾಡಿದರು.

ಕಳೆದ ಮೈತ್ರಿ ಸಮ್ಮಿಶ್ರ ಸರ್ಕಾರವಿದ್ದಾಗ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತುಂಬಾ ಗಂಭೀರ ವಾಗಿತ್ತು. ಮರಳಿನ ಬಗ್ಗೆ ಕಾಣದ ಕೈಗಳ ಉಪಟಳದಿಂದ, ಜಿಲ್ಲಾಡಳಿತ ಮರಳಿನ ಬಗ್ಗೆ ಸರಿ ಯಾದ ಕ್ರಮ ತೆಗೆದುಕೊಳ್ಳದೇ ಇದ್ದಾಗ, ಮರಳು ಸಂಬಂಧಿ ಜನರ ಬದುಕು ಮೂರಾಬಟ್ಟೆ ಯಾಗಿದ್ದಾಗ, ಶಾಸಕ ರಘುಪತಿ ಭಟ್ ರವರನ್ನು ಮರಳುಗಾರಿಕೆಯವರು ಅಲವತ್ತು ಕೊಂಡಾಗ, ಅವರನ್ನೆಲ್ಲ ಕರೆಸಿ ಸಭೆಮಾಡಿ ಜಿಲ್ಲಾಡಳಿತದೆದುರೇ 10 ರಾತ್ರಿ ಹಗಲುಗಳ ಕಾಲ ಬೆಂಬಲಿಗ ರೊಂದಿಗೆ ಧರಣಿ ಕುಳಿತಿದ್ದರು.

ರಾತ್ರಿ ಅಲ್ಲೇ ವಾಸ್ತವ್ಯ ಹೂಡಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದ್ದರು. ದೀಪಾವಳಿಯನ್ನು ತನ್ನ ಕ್ಷೇತ್ರದಲ್ಲಿ ವ್ಯಾಪಾರ ವಿಲ್ಲದೆ, ಕೆಲಸವಿಲ್ಲದೆ ಕಂಗಾಲಾದ ಕಾರ್ಮಿಕರು, ಬಡ ಲಾರಿ ಡ್ರೈವರ್, ಕುಟುಂಬದವರ ಮನೆಯಲ್ಲಿ ದೀಪ ಹಚ್ಚಲು, ಹಬ್ಬ ಮಾಡಲಾಗದೇ, ಅವರು ಮೊಗದಲ್ಲಿ ನಗೆ ಕಾಣದೆ ತಾನೂ ಹೇಗೆ ಆಚರಿಸುವುದು ಎಂಬ ಮನೋಭಾವವಿತ್ತು.

ಕೊನೆಗೂ ಸಮ್ಮಿಶ್ರ ಸರ್ಕಾರ ಪತನವಾದ ನಂತರ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ, ಕೆಂದ್ರ ಸರಕಾರಗಳೊಡನೆ ಖುದ್ದು ಮಾತನಾಡಿಸಿ, ಅಡೆತಡೆಗಳನ್ನು ನಿವಾರಿಸಿ ಮರಳುಗಾರಿಕೆಗೆ ಅನುಮತಿ ಪಡೆದು ಮರಳುಗಾರಿಕೆ ಆರಂಭಿಸಿದರು.

ಜನರು ಅರ್ಧದಲ್ಲಿ ನಿಲ್ಲಿಸಿದ ಕಟ್ಟಡಗಳಿಗೆ, ನಿರ್ಮಾಣ ಕಾಮಗಾರಿ ಗಳಿಗೆ ವೇಗ ಸಿಕ್ಕಿತು. ಮರಳುಗಾರಿಕೆಯಿಂದ ನಿರುದ್ಯೋಗಿಗಳಾಗಿದ್ದವರು ಉದ್ಯೋಗಿಗಳಾದರು ಮತ್ತು ಆರ್ಥಿಕ ಚಟುವಟಿಕೆ ಗರಿಗೆದರಿತು. ಮರಳುಗಾರಿಕೆಯಿಂದ ಜೀವನ ನಡೆಸುವವರು ಮನದುಂಬಿ ಶಾಸಕರನ್ನು ಹಾರೈಸಿದರು.

ಕಳೆದೆರಡು ವರುಷದ ಹಿಂದೆ ಉಡುಪಿ ನಗರದಲ್ಲಿ ನೀರಿನ ಬರ ಬಂದಾಗ, ಬಜೆ ಡ್ಯಾಂ ನಲ್ಲಿ ಅಲ್ಪಸ್ವಲ್ಪ ನೀರಿದ್ದದನ್ನು ಗಮನಿಸಿದ ಶಾಸಕರು, ನಗರಕ್ಕೆ ಮತ್ತು ಗ್ರಾಮಗಳ ಕುಟುಂಬಗಳಿಗೆ ಬೇಕಾದ ನೀರಿನ ಬವಣೆ ತಪ್ಪಿಸಲು ತನ್ನ ಕಾರ್ಯಕರ್ತರೊಡಗೂಡಿ ಡ್ಯಾಮಿಗೆ ಲಗ್ಗೆಯಿಟ್ಟರು.

ಡ್ಯಾಂ ನಲ್ಲಿ ಗುಂಡಿಗಳಲ್ಲಿದ್ದ ನೀರು ಬರಲು ಅಡಚಣೆಯಾಗಿ ತುಂಬಿರುವ ಹೂಳನ್ನು ತೆಗೆದು, ದೊಡ್ಡ ಕಲ್ಲು ಗಳನ್ನು ಒಡೆದು ತೆಗೆದು, ಗುಂಡಿಗಳಲ್ಲಿರುವ ನೀರನ್ನು ಪಂಪಿನ ಮೂಲಕ ಹಾಯಿಸಿ ಹಲವು ದಿನಗಳ ಕಾಲ ಕಾರ್ಯಪ್ರವೃತ್ತರಾದರು. ನೀರು ಡ್ಯಾಂ ನಲ್ಲಿ ಶೇಖರಣೆಯಾಯಿತು.

ನಗರಕ್ಕೆ ಗ್ರಾಮಗಳಿಗೆ ನೀರನ್ನು ಹಾಯಿಸಲಾಯಿತು. ನೀರಿಗಾಗಿ ಹಾಹಾಕಾರ ಎದ್ದಾಗ ಶಾಸಕರು ಮತ್ತು ನಗರ ಸಭಾ ಸದಸ್ಯರು, ಕಾರ್ಯಕರ್ತರು ಒಗ್ಗಟ್ಟಾಗಿ ಸಾಧಿಸಿದರೆ ಯಾವುದೂ ಅಸಾಧ್ಯ ವಲ್ಲ ಎಂಬುದನ್ನು ತೋರಿಸಿಕೊಟ್ಟರು.

ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಲಯ ನಿಯಮಾವಳಿ (ZR) ಯಿಂದ 10 ಸೆಂಟ್ಸ್ ವರೆಗಿನ ಕೃಷಿ ವಲಯದಿಂದ ವಸತಿ ನಿಲಯಕ್ಕೆ ಭೂಪರಿವರ್ತನೆ ಮಾಡಲು ಅವಕಾಶ ವಿಲ್ಲದೆ ಉಂಟಾಗಿರುವ ಸಮಸ್ಯೆ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಶೀಘ್ರದಲ್ಲಿ ಪರಿಹಾರ ಪಡೆದ ಶಾಸಕರು.

ಉಡುಪಿ ಶಾಂತಿಯುತವಾದ ಪ್ರದೇಶ. ಕರಾವಳಿಯಲ್ಲಿ ಹಿಂದುತ್ವದ ಒಡಲಲ್ಲಿ ಎಲ್ಲಾ ಧರ್ಮದವರು ಸಹಬಾಳ್ವೆಗೆ ಹೆಸರಾದವರು. ಮಾಜಿ ರಾಜಕಾರಣಿಗಳ ಒಂದು ಕೋಮಿನ ಓಲೈಕೆ ಮತ್ತು ಅಧಿಕಾರಿಗಳ ದರ್ಪದಿಂದ ಕೊಡವೂರು ಗ್ರಾಮದ 67 ಸೆಂಟ್ಸ್ ಸರಕಾರಿ ಜಾಗವನ್ನು  ಕುಮ್ಮಕ್ಕಿ ನಿಂದ ಅನಧಿಕೃತವಾಗಿ ವಕ್ಫ್ ಬೋರ್ಡ್ ಮುಖಾಂತರ ಕಲ್ಮತ್ ಮಸೀದಿ ಹೆಸರಿಗೆ ವರ್ಗಾಯಿಸಿ ದ್ದನ್ನು ಖಂಡಿಸಿ ಸದ್ರಿ ಸರ್ಕಾರಿ ಆಸ್ತಿಯನ್ನು ಕಂದಾಯ ಸಚಿವ ಆರ್. ಅಶೋಕ್ ರವರ ಗಮನಕ್ಕೆ ತಂದು ಸರ್ಕಾರದ ಹೆಸರಿಗೆ ಡಿನೋಟಿಫೈ ಮಾಡುವಲ್ಲಿ ಯಶಸ್ವಿಯಾದ ಶಾಸಕರು ಎಲ್ಲರ ಶ್ಲಾಘನೆಗೊಳಗಾಗಿದ್ದಾರೆ.

ರಸ್ತೆಗಳ ಅಭಿವೃದ್ಧಿ, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವುದು, ಪ್ರವಾಸೋದ್ಯಮಕ್ಕೆ ಒತ್ತು, ಮರಳಿನ ಸಮಸ್ಯೆಗೆ ಶಾಶ್ವತ ಪರಿಹಾರ, ನೀರಿನ ಸಮಸ್ಯೆಗೆ ಪರಿಹಾರ, ನಗರಸಭಾ ವ್ಯಾಪ್ತಿಯಲ್ಲಿ ಖಾಸಗಿಯಾಗಿ PPP ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಕಾರ್ಯಪ್ರವತ್ತರಾಗಿದ್ದಾರೆ.

ಉಡುಪಿಯಲ್ಲೊಂದು ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟುವ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಹಮ್ಮಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ನೆರವೇರುತ್ತದೆಂಬ ಆಶಯ ನಮ್ಮದು.

ಕರ್ನಾಟಕ ರಾಜ್ಯ ಭರವಸೆಯ ಅಧ್ಯಕ್ಷರಾಗಿರುವ ಶ್ರೀ ಕೆ. ರಘುಪತಿ ಭಟ್ ರವರು ಮೈಸೂರು-ಬೆಂಗಳೂರು 10 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಎದುರಾಗಿದ್ದ ವಿಘ್ನ ನಿವಾರಿಸಿ ಸಂಸದ ಪ್ರತಾಪ್ ಸಿಂಹ ರಿಂದ ಶ್ಲಾಘಿಸಲ್ಪಟ್ಟಿದ್ದಾರೆ.

ನಮ್ಮ ಉಡುಪಿಯ ಜನಪ್ರಿಯ ನಾಯಕ ರಘುಪತಿ ಭಟ್ ರವರು ಯಾವಾಗಲೂ ಡೈನಮಿಕ್ ಲೀಡರ್. ಎಲ್ಲಾ ಹಿರಿಯರ ಆಶೀರ್ವಾದವಿದೆ, ಕಿರಿಯರ ಆಪ್ತತೆಯಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಧೈರ್ಯ ತುಂಬಿ ಅಭಿವೃದ್ಧಿ ಮಾಡುವ ಶಾಸಕರ ಕೆಲಸವಿದೆಯಲ್ಲ…. ಅದು ಯಾವ ಜನಪ್ರತಿನಿಧಿಗಳು ಸಿಮೆಂಟು, ಬಿರಿಯಾನಿ, ದುಡ್ಡು, ಮದ್ಯ ಕೊಟ್ಟು ಮಾಡುವವ ರಿಗಿಂತ ಎಷ್ಟೋ ಉತ್ತಮ.

ಇಷ್ಟು ಜವಾಬ್ದಾರಿಯುತನಾದ ಶಾಸಕ ನಮ್ಮ ಸಮಾಜದ ಬಹುದೊಡ್ಡ ಆಸ್ತಿ. ಇವರಿಗೆ ಮುಂದೆ ಯೂ ಸರಕಾರದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಭಾಗ್ಯ ಬಂದೊದಗಲಿ ಮತ್ತು ದೇವರು ಆಶೀರ್ವಾದಿಸಲಿ.

 
 
 
 
 
 
 
 
 
 
 

Leave a Reply