ಕರೋನಾ 3 ನೇ ಅಲೆಗೆ ನಾವು ಸ್ವಾಗತ ಕೋರುತ್ತಿದ್ದೆವೆಯೇ? ….!

ಈಗಾಗಲೇ ಕರೋನಾದ ಒಂದು ಮತ್ತ 2ನೇ ಅಲೆಯ ಪರಿಣಾಮವನ್ನು ನಾವೆಲ್ಲರೂ ಅನುಭವಿ ಸಿದ್ದೇವೆ ಲಾಕ್ ಡೌನ್ ನಿಂದಾಗಿ ಜನತೆ ಎಷ್ಟು ಕಷ್ಟ ಪಟ್ಟಿದ್ದಾರೆ.

ಬಡವ ಶ್ರೀಮಂತ ಜಾತಿ ಭೇಧವಿಲ್ಲದೆ ಜನತೆ ಕರೋನಾದ ವಿಶೇಷ ಅನುಭವ ಪಡೆದಿದ್ದಾರೆ. ಇಷ್ಟೇಲ್ಲವಾದರೂ ನಾವು ಇನ್ನು ಪಾಠ ಕಲಿಯದಿರುವುದು ಸರಿಯಲ್ಲ.

ಕರೋನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದೆ ಎನ್ನುವಾಗಲೇ ಕರೋನಾ ನೀತಿ ನಿಯಮಗಳನ್ನು ಜನರು ಗಾಳಿಗೆ ತೂರಲು ಪ್ರಾರಂಭಿಸಿದ್ದಾರೆ. ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಡ್ಡಾಯವಾದರೂ ಬಹಳಷ್ಟು ಜನರು ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಸಕಾ೯ರದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.

ಸಕಾ೯ರ ದ ಕರೋನಾ ನಿಯಮದಂತೆ ಯಾವುದೇ ರಾಜಕೀಯ, ಸಾಮಾಜಿಕ, ಧಾಮಿ೯ಕ ಕಾಯ೯ಕ್ರಮಗಳು ಅದೇ ರೀತಿ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಆದರೆ ಈ ಮೇಲಿನ ಕಾಯ೯ ಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

ಪ್ರತಿಭಟನೆಗಳು ದಿನಕ್ಕೆ 3 ರಿಂದ 4 ನಿರಂತರ ನಡೆಯುತ್ತಿವೆ.ಈ ಹೆಚ್ಚಿನ ಕಾಯ೯ಕ್ರಮಗಳಲ್ಲಿ ಕರೋನಾ ನಿಯಮಗಳು ಪಾಲನೆಯಾಗುತ್ತಿಲ್ಲ ಈ ರೀತಿ ನಡೆದರೆ 3ನೇ ಅಲೆಗೆ ನಾವು ರತ್ನ ಕಂಬಳಿ ಹಾಕಿ ಸ್ವಾಗತ ಮಾಡಬೇಕಾದಿತು…!

ಮದುವೆ ಮುಂತಾದ ಕಾಯ೯ಕ್ರಮಗಳಲ್ಲಿ ಹೆಚ್ಚಿನ ಜನ ಸೇರುತ್ತಿರುವುದು ಕಂಡು ಬರುತ್ತಿದೆ.
ನಮ್ಮ ಜನಪ್ರತಿನಿಧಿಗಳು 3 ತಿಂಗಳು ಯಾವುದೇ ಕಾಯ೯ಕ್ರಮ ನಡೆಸಬಾರದು ಹೀಗಾದರೆ ಮಾತ್ರ ಕರೋನಾ ನಿಯಂತ್ರಿಸಬಹುದು.

ಏಕೆಂದರೆ ಜನಪ್ರತಿನಿಧಿಗಳು ಕರೋನಾ ನಿಯಮಗಳನ್ನು ಪಾಲನೆ ಮಾಡದಿದ್ದರೆ ಜನತೆ ಕೂಡ ಈ ನಿಯಮಗಳನ್ನು ಪಾಲನೆ ಮಾಡುದಿಲ್ಲ.

ಜನತೆ ಸ್ವಯಂ ಕಫ್ಯೂ ವಿಧಿಸಬೇಕು :-_ ಎಲ್ಲದಕ್ಕೂ ಸಕಾ೯ರವನ್ನು ಕಾಯುವ ಬದಲು ಜನರು ತಮ್ಮ ಆರೋಗ್ಯದ ರಕ್ಷಣೆಯ ಜವಾಬ್ದಾರಿಯನ್ನ ತಾವೇ ವಹಿಸಬೇಕು ಕರೋನಾ ನಿಯಮಗಳನ್ನು ತನ್ನ ವೈಯತ್ತಿಕ ಜೀವನದಲ್ಲಿ ಒಂದು ಅಂಗವಾಗಿ ಪಾಲನೆ ಮಾಡುವ ಪ್ರಮಾಣ ಮಾಡ ಬೇಕಾಗಿದೆ.

ಇಲ್ಲವಾದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಬಂದು ನಾವೆಲ್ಲರೂ ಸಂಕಷ್ಟಕ್ಕೆ ಒಳಗಾಗಬಹುದು.
ಈಗಾಗಲೇ ಜಗತ್ತಿನ ಕೆಲವು ದೇಶಗಳಲ್ಲಿ ಲಾಕ್ ಡೌನ್ ಬಿಸಿ ಏರಿದೆ. ನಾವೆಲ್ಲರೂ ಏಕ  ಮನಸ್ಸಿ ನಿಂದ ರಾಜಕೀಯ ಮರೆತು ಕರೋನಾ ಓಡಿಸುವ ಸಂಕಲ್ಪ ಮಾಡೋಣ. ಬನ್ನಿ ಬದಲಾಗೋಣ.

 
 
 
 
 
 
 
 
 
 
 

Leave a Reply