ಮಂಗಳೂರು: ರೈಲ್ ನ್ನೇ ನಿಲ್ಲಿಸಿದ ಛಲದಂಕ ಮಲ್ಲೆ ಚಂದ್ರಾವತಿ.

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ 70ರ ಹರೆಯದ ಮಹಿಳೆಯ ಸಮಯ ಪ್ರಜ್ಞೆಯಿಂದ ಸಂಭಾವ್ಯ ರೈಲ್ವೇ ಅವಘಡ ತಪ್ಪಿದ್ದು, ಮಹಿಳೆಯ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲು ಹಳಿಗೆ ಮರ ಬಿದ್ದಿದ್ದನ್ನ ಗಮನಿಸಿದ 70ರ ಹರೆಯದ ಚಂದ್ರಾವತಿಯವರು, ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು,. ಇದನ್ನ ಗಮನಿಸಿ ತಕ್ಷಣ ಮನೆಗೆ ಓಡಿ ಕೆಂಪು ಬಟ್ಟೆ ತಂದು ಚಂದ್ರವತಿಯವರು ರೈಲಿಗೆ ಕೆಂಪು ಬಟ್ಟೆ ಹಿಡಿದಿದ್ದಾರೆ, ಅಪಾಯ ಅರಿತ ಲೋಕೋ ಪೈಲೆಟ್ ತಕ್ಷಣ ರೈಲು ನಿಲ್ಲಿಸಿದ್ದಾರೆ.

ಅಪಾಯ ಅರಿತ ಲೋಕೋಪೈಲೆಟ್‌ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಸುಮಾರು ಅರ್ಧ ತಾಸಿ‌ನ ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಸಿಬ್ಬಂದಿಗಳು ಸೇರಿ ಮರವನ್ನು ತೆರವು ಮಾಡಿದರು. ರೈಲು ಅವಘಡ ತಪ್ಪಿಸಲು ಕೆಂಪು ವಸ್ತ್ರ ಹಿಡಿದು ವೃದ್ದೆ ಚಂದ್ರವತಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

 
 
 
 
 
 
 
 
 
 
 

Leave a Reply