ಡಾ.ಅವನೀಂದ್ರನಾಥ್ ರಾವ್ ಅವರ ಗ್ರಂಥಸೂಚಿ ಸಂಸ್ಕೃತಿ ಸಚಿವರಿಂದ ಬಿಡುಗಡೆ.

ಕೇಂದ್ರ ಸಚಿವಾಲಯ ಗ್ರಂಥಾಲಯದ ಹಿರಿಯ ಅಧಿಕಾರಿ, ದೆಹಲಿ ಶಿಕ್ಷಣ ಕನ್ನಡ ಸಂಸ್ಥೆಯ ಉಪಾಧ್ಯಕ್ಷ ಡಾ.ಅವನೀಂದ್ರ ನಾಥ್ ರಾವ್ ಅವರು ಸಂಕಲಿಸಿದ ವಸ್ತು ಸಂಗ್ರಹಾಲಯ ಕುರಿತ ಸಚಿತ್ರ ಗ್ರಂಥ ಸೊಚಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ಜಿ. ರೆಡ್ಡಿ ಅವರು ಈಚೆಗೆ ಬಿಡುಗಡೆ ಗೊಳಿಸಿದರು.

ಕೊಲ್ಕತ್ತದ ಕೇಂದ್ರ ಸಂದರ್ಭ ಗ್ರಂಥಾಲಯ ಈ ವಿಶೇಷ ಗ್ರಂಥಸೂಚಿಯನ್ನು ಪ್ರಕಟಿಸಿದೆ. ವಸ್ತು ಸಂಗ್ರಹಾಲಯ ಕುರಿತ ಜಾಗತಿಕ ಮಹಾಮೇಳ ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಷಪೊ-2023 ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ವಿಶೇಷ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

ಅವನೀಂದ್ರನಾಥ್ ಅವರು ಇಲ್ಲಿ ಆಯೋಜಿ ಸಿದ ‘ಮ್ಯೂಸಿಯಂ ಬುಕ್ ಕವರ್’ ಪ್ರದರ್ಶನದ ಪ್ರಧಾನ ಅಧಿಕಾರಿಯಾಗಿದ್ದರು. ದೇಶ ವಿದೇಶಗಳ ವಿವಿಧ ವಸ್ತು ಸಂಗ್ರಹಾಲ ಯಗಳು ಪ್ರದರ್ಶನ ನೀಡಿದ ಪ್ರಥಮ ಮ್ಯೂಸಿಯಂ ಎಕ್ಷಪೊ ಇದಾಗಿದ್ದು, ವಿವಿಧ ರಾಜ್ಯಗಳ ಸಂಸ್ಕೃತಿ ಮಂತ್ರಿಗಳು ಇಲ್ಲಿ ಭಾಗವಹಿಸಿದ್ದರು.

Leave a Reply