ನಾಡೋಜ ಪ್ರೊ|ಕೆ.ಪಿ.ರಾವ್ ರವರಿಗೆ ನಾಗರಿಕ ಅಭಿನಂದನೆ

ನಾಡಿನ ಹಿರಿಯ  ವಿದ್ವಾಂಸ ಕಂಪ್ಯೂಟರ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ನಾಡೋಜ ಪ್ರೊ|ಕೆ.ಪಿ.ರಾವ್ ಅವರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಸಹಕಾರದೊಂದಿಗೆ ನಾಡೋಜ ಕೆ.ಪಿ.ರಾವ್ ಅಭಿನಂದನ ಸಮಿತಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಉಡುಪಿಯ ವಿವಿಧ ಸಂಘ -ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿಯ ಎಂಜಿಎ0 ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಗಸ್ಟ್ ೦೬, ಭಾನುವಾರದಂದು  ಬೆಳಿಗ್ಗೆ ಗಂಟೆ ೯:೦೦ ರಿಂದ೧.೧೫ ರವರೆಗೆ ನಡೆಯಲಿದೆ.ಬೆಳಿಗ್ಗೆ ಗಂಟೆ ೯:೧೫ ರಿಂದ ೯:೪೫ ರವರೆಗೆ ಸರಿಗಮ ಭಾರತಿ ಪರ್ಕಳ ಇವರಿಂದ ಸಾಂಸ್ಕೃತಿಕ ಸೌರಭ ನಡೆಯಲಿದೆ. ೯.೫೦ರಿಂದ ೧೦:೩೦ರ ವರೆಗೆ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನುಡಿ ಸಂದೇಶ: ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ  ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಮಠಾಧಿಪತಿಗಳು, ಶ್ರೀ ಜೈನ ಮಠ ಮೂಡುಬಿದಿರೆ, ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾ ಕುಮಾರಿ, ಪ್ರೊ| ಲಕ್ಷ್ಮೀನಾರಾಯಣ ಕಾರಂತ್, ನೀಲಾವರ ಸುರೇಂದ್ರ ಅಡಿಗ, ಮುರಳೀಧರ ಉಪಾಧ್ಯ ಹಿರಿಯಡ್ಕ,  ಪೂರ್ಣಿಮಾ, ಡಾ.ಪಿ.ವಿ ಭಂಡಾರಿ, ಉಡುಪಿ ವಿಶ್ವನಾಥ ಶೆಣೈ, ಜಯಕರ್ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು.

೧೦:೩೦ ರಿಂದ ೧೦:೪೫ರವರೆಗೆ ಡಾ| ಯು.ಬಿ.ಪವನಜ ಬೆಂಗಳೂರು ಕಂಪ್ಯೂಟರ್ ಮತ್ತು ಕೆ.ಪಿ.ರಾವ್ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ೧೦:೪೫ರಿಂದ ೧೧:೦೦ ರವರೆಗೆ ಪ್ರೊ| ವರದೇಶ ಹಿರೇಗಂಗೆರವರು ಕೆ.ಪಿ.ರಾವ್ ಬದುಕು ಹಾಗೂ ವರ್ಣಕ ಕಾದಂಬರಿ ಬಗ್ಗೆ ಹಾಗು ೧೧:೦೦ರಿಂದ ೧೧:೦೫ ಡಾ| ಎನ್.ಟಿ.ಭಟ್ ಇವರು ಕೆ.ಪಿ.ರಾವ್‌ರೊಂದಿಗಿನ ಒಡನಾಟದ ಬಗ್ಗೆ ಮಾತನಾಡಲಿರುವರು.

೧೧:೦೫ ರಿಂದ ೧೨.೦೫ರವರೆಗೆ ಕೆಪಿ ರಾವ್ ಅವರೊಂದಿಗೆ ಮಾತುಕತೆ ಎಂಬ ವಿಷಯದಲ್ಲಿ ಪಾದೆಕಲ್ಲು ವಿಷ್ಣು ಭಟ್, ಡಾ| ಮಹಾಲಿಂಗ ಭಟ್, ಡಾ| ನೀತಾ ಇನಾ೦ದಾರ್, ಡಾ.ಉದಯ ಶಂಕರ ಹೆಚ್.ಎನ್, ಸುಶ್ಮಿತಾ ಶೆಟ್ಟಿ, ಪಲ್ಲವಿ ಕೊಡಗು ಭಾಗವಹಿಸಲಿದ್ದಾರೆ. ಬಳಿಕ ೧೨.೦೫ ರಿಂದ ೧೨.೧೦ರವರೆಗೆ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಇವರಿಂದ ಹಾಡುಗಾರಿಕೆ.

 ೧೨.೧೫ ರಿಂದ ೧.೧೫ ರವರೆಗೆ ನಾಡೋಜ ಪ್ರೊ.ಕೆಪಿ ರಾವ್ ಅಭಿನಂದನ ಸಮಾರಂಭದಲ್ಲಿ ಸಭಾಧ್ಯಕ್ಷತೆಯನ್ನು ಡಾ.ಎಚ್.ಎಸ್ ಬಳ್ಳಾಲ್, ಅಭಿನಂದನ ಮಾತನ್ನು ಡಾ|ಜಯಂತ್ ಕಾಯ್ಕಿಣಿ ಮಾಡಲಿದ್ದಾರೆ. ಡಾ.ಬಿ. ಜಗದೀಶ ಶೆಟ್ಟಿ, ಪ್ರೊ.ಸೇಡಿಯಾಪು ಜಯರಾಮ ಭಟ್, ಉಡುಪಿ ವಿಶ್ವನಾಥ ಶೆಣೈ, ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು. ಛಾಯಾಚಿತ್ರ ಪ್ರದರ್ಶನ ಕೂಡಾ ನಡೆಯಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ವಿಶ್ವನಾಥ್ ಶೆಣೈ, ಮುರಳೀಧರ ಹಿರಿಯಡ್ಕ, ಜಯಕರ್ ಶೆಟ್ಟಿ ಇಂದ್ರಾಳಿ , ರವಿರಾಜ್ ಎಚ್ ಪಿ, ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply