ಮಣ್ಣಿನ ಫಲವತ್ತತೆಯ ಸಂರಕ್ಷಣೆ ಕುರಿತಾದ ಮಾಹಿತಿ ಕಾರ್ಯಾಗಾರ

ರೋಟರಿ ಕ್ಲಬ್ ಸೈಬ್ರಕಟ್ಟೆ ವತಿಯಿಂದ ಮಣ್ಣಿನ ಫಲವತ್ತತೆಯ ಸಂರಕ್ಷಣೆ ಕುರಿತಾದ ಮಾಹಿತಿ ಕಾರ್ಯಾಗಾರ ಯಡ್ತಾಡಿಯ ಅಲ್ತಾರಿನಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಸೈಬ್ರಕಟ್ಟೆ ಮಹಾತ್ಮಾಗಾಂಧಿ ಪ್ರೌಢ ಶಾಲೆಯ  ಕನ್ನಡ ಭಾಷಾ ಶಿಕ್ಷಕ  ಶಿರಿಯಾರ ಗಣೇಶ್ ನಾಯಕ್  ಮಣ್ಣಿನ ಸಂರಕ್ಷಣೆ ಕುರಿತಾಗಿ “ಲಕ್ಷಾಂತರ ಕೋಟಿ ಜೀವಿಗಳು ಬಾಳಲು ನೆಲೆಯಾಗಿರುವ ಈ ಮಣ್ಣು ಫಲವತ್ತತೆಯನ್ನು ಕಳೆದುಕೊಂಡಲ್ಲಿ ನಾಗರೀಕತೆಯ ನಾಶವೇ ಸರಿ.
ಅದಕ್ಕಾಗಿ ನಾಗರೀಕ ಸಮಸ್ಯೆಗಳನ್ನು ಕಾನೂನು ಚೌಕಟ್ಟಿನ ಅಡಿಯಲ್ಲಿ ಪರಿಹರಿಸಿಕೊಂಡು ಸ್ಥಳೀಯ ವಾತಾವರಣದ ಮರುಸ್ಥಾಪನೆಯಲ್ಲಿ ಪ್ರತೀಯೋಬ್ಬರೂ ಕಾರ್ಯೋನ್ಮುಖರಾಗಿ ನೆಲ ಜಲ ರಕ್ಷಣೆಗೆ ಬದ್ಧರಾಗಿ” ಎಂದು ಕರೆ ನೀಡಿದರು.
ರೋಟರಿ ಅಧ್ಯಕ್ಷೆ ಯಶಸ್ವಿನಿ ಹೆಗ್ಡೆ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಶ್ರೀ ಆಲ್ವಿನ್ ಕ್ವಾಡ್ರಸ್, ವಲಯ ಪ್ರತಿನಿಧಿ ವಿಜಯ್ ಶೆಟ್ಟಿ ಕಾಜ್ರಳ್ಳಿ ಹಾಗೂ ರೋಟರಿ ಸೈಬ್ರಕಟ್ಟೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಲ್ತಾರು ಗೌತಮ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
 
 
 
 
 
 
 
 
 
 
 

Leave a Reply