ಹಿರಿಯರೆಡೆಗೆ ಸಾಹಿತ್ಯದ ನಡಿಗೆ

ನಾಯ್ಕನಕಟ್ಟೆ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಬೈಂದೂರು ತಾಲೂಕು ಘಟಕದ ಪದಾಧಿಕಾರಿಗಳು ಸೇರಿ, ಶ್ರೀ ಎಮ್ ಗೋವಿಂದ ಮಟ್ನಕಟ್ಟೆ , ಕೆರ್ಗಾಲು ಅವರ ಮನೆಗೆ ತೆರಳಿ ಕಾರ್ಯಕ್ರಮದ ನೆರಳಲ್ಲಿ ಅವರ ಸಾಧನೆ ,ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ “ಅಭಿನಂದನೆಯ ಅಲೇಖ” ದೊಂದಿಗೆ ಗೌರವಿಸಿ ಸನ್ಮಾನಿಸಿದರು.ಯಾವುದೇ ಪ್ರಚಾರ ಬಯಸದೇ ಕನ್ನಡ ನಾಡುನುಡಿಗೆ ತನ್ನದೇ ಆದ ವಿಶಿಷ್ಟ ಕಾಣಿಕೆ ನೀಡಿದ  ಎಮ್ ಗೋವಿಂದ ನವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿಗಳು,ಬೇಂಕಿಗೆ ಸೇರುವ ಪೂರ್ವದಲ್ಲಿ ಸರಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದು. ಬೈಂದೂರು ರೋಟರಿ ಕ್ಲಬ್‌ ಅಧ್ಯಕ್ಷರಾಗಿ,ಬೈಂದೂರು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು 60 ಕ್ಕೂ ಮಿಕ್ಕಿ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳ ಕುರಿತು ಉಪನ್ಯಾಸ ನೀಡಿರುತ್ತಾರೆ.
ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿ ವಿಶೇಷ ಸಂಚಿಕೆಗಳಿಗೆ ಸಂಪಾದಕರಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವ ಇವರು ಶಿಶುಗೀತೆಗಳನ್ನು ರಚಿಸಿ ಸಾಹಿತ್ಯ ಸೇವೆಯಲ್ಲೂ ತೊಡಗಿಸಿಕೊಂಡವರು. ಇವರು ಮಟ್ನಕಟ್ಟೆ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಕೆರ್ಗಾಲು ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ಜೀರ್ಣೋದ್ಧಾರ ಸಮಿತಿಯ ಸಲಹೆಗಾರರಾಗಿ,ಕೆರ್ಗಾಲು ವನದುರ್ಗಿ ದೇವಸ್ಥಾನದ ಕಾರ್ಯದರ್ಶಿಯಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.
ಖ್ಯಾತ ವಾಗ್ಮಿಗಳು, ಸಂಪನ್ಮೂಲ ವ್ಯಕ್ತಿಗಳಾಗಿರುವ ಇವರು ಯುವ ಸಮುದಾಯಕ್ಕೆ  ಮಾರ್ಗದರ್ಶಿಗಳಾಗಿ ಸ್ನೆಹಿತರಾಗಿ,
ಮಕ್ಕಳೊಂದಿಗೆ ಮಕ್ಕಳಾಗಿ, ವಯಸ್ಕರೊಂದಿಗೆ ಪ್ರಾಜ್ಞರಾಗಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ಸಹೃದಯದೊಂದಿಗೆ  ಬೆರೆಯುವ ಸೌಜನ್ಯ ಉಳ್ಳವರು. ಆಧ್ಯಾತ್ಮಿಕ ಒಲವು ಉಳ್ಳ ಇವರು ತಮ್ಮ ಅಸ್ಖಲಿತ ನುಡಿಗಳಿಂದ ಧಾರ್ಮಿಕ,ಇನ್ನಿತರ ಸಭೆಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವುದರಲ್ಲಿ ಮಂಚೂಣಿಯಲ್ಲಿದ್ದಾರೆ.
ಕೆರ್ಗಾಲು ಗ್ರಾಮ ಪಂಚಾಯತ್ ಸದಸ್ಯರಾಗಿ ನಮ್ಮ ಭೂಮಿ ಮತ್ತು ಗ್ರಾಮ ಪಂಚಾಯತ್ ವತಿಯಿಂದ “ಮಕ್ಕಳ ಮಿತ್ರ” ನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಯಕ್ಷಗಾನ,ತಾಳಮದ್ದಳೆ,ನಾಟಕ ಗಳಲ್ಲಿ ಅಭಿರುಚಿ ಹೊಂದಿರುವ ಇವರು ಹವ್ಯಾಸಿ ಕಲಾವಿದರಾಗಿ ನಾಟಕಗಳಿಗೆ ತರಬೇತುದಾರರಾಗಿ ಕಲಾರಸಿಕರ ಮನಸೂರೆಗೊಂಡವರು.
ಆರಂಭದಲ್ಲಿ ಕಸಾಪ ಉಡುಪಿ ಜಿಲ್ಲೆಯ ಸದಸ್ಯ ಶ್ರೀ ಸತ್ಯನಾ ಕೊಡೇರಿ ಪ್ರಾರ್ಥನೆ ಮಾಡಿದರು, ಬೈಂದೂರು ಘಟಕದ ಅಧ್ಯಕ್ಷ ಡಾ ರಘುನಾಯಕ್ ಸ್ವಾಗತಿಸಿದರು, ಬರಹಗಾರರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ,ಹಿರಿಯ ಸಾಹಿತಿ  ಶ್ರೀ ಉಪೇಂದ್ರ ಸೋಮಯಾಜಿ‌ ಯವರು ಶುಭಸಂಸನೆ ಮಾಡಿದರು. ಕಸಾಪ ಬೈಂದೂರು ಘಟಕದ ಕೋಶಾಧ್ಯಕ್ಷ ಶ್ರೀ ಬಿ.ಚಂದ್ರಶೇಖರ ನಾವಡರು ಪ್ರಾಸ್ತಾವಿಕ ನುಡಿಗಳನ್ನಾಡಿ,ವ್ಯಕ್ತಿ ಪರಿಚಯ ಮಾಡಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗರು ಶ್ರೀ ಗೋವಿಂದ ಎಮ್ ಅವರಿಗೆ ಸನ್ಮಾನಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ಶುಭಕೋರಿದರು.  ಗೌರವ ಕಾರ್ಯದರ್ಶಿಗಳಾದ   ಶ್ರೀ ಸುಬ್ರಹ್ಮಣ್ಯ ಶೆಟ್ಟಿ,ಕೋಶಾಧ್ಯಕ್ಷರಾದ ಮನೋಹರ ಪಿ,ಉಪಸ್ಥಿತರಿದ್ದು ಶುಭಕೋರಿದರು. ಕಸಾಪ ಬೈಂದೂರು ಗೌರವ ಕಾರ್ಯದರ್ಶಿ ಶ್ರೀ ಸುಧಾಕರ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ನಾಗರಾಜ ಪಟವಾಳ್ ಅಭಿನಂದನಾ ಪತ್ರ ವಾಚನ ಮಾಡಿದರು ,ಸದಸ್ಯ ಕೆ.ಪುಂಡಲೀಕ ನಾಯಕ್ ನಾಯ್ಕನಕಟ್ಟೆ ವಂದಿಸಿದರು ,ಗೋವಿಂದ ಬಿಲ್ಲವ,ಬಿ.ಗಣೇಶ್ ಕಾರಂತ್, ಮತ್ತು ಎಮ್. ಗೋವಿಂದ ಅವರ ಬಂಧುಗಳು ಹಿತೈಷಿಗಳು,ರೋಟರಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದು ಶುಭಕೋರಿದರು.
~ಕೆ.ಪುಂಡಲೀಕ ನಾಯಕ್ ನಾಯ್ಕನಕಟ್ಟೆ 
 
 
 
 
 
 
 
 
 
 
 

Leave a Reply