ಹೆಬ್ಬಾರ್ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ -2023

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ  ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಆಶ್ರಯದಲ್ಲಿ ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022.

ಡಾII ಹಂಗಳೂರ್ ರಾಘವೇಂದ್ರ ಹೆಬ್ಬಾರ್  ( ಡಾ| ಹೆಚ್.ಆರ್ ಹೆಬ್ಬಾರ್)  ಡಾ| ಪುಷ್ಪಗಂಧಿನಿವೈದ್ಯೋ ನಾರಾಯಣೋ ಹರಿಃ

ನಮ್ಮ ಸಮಾಜ ಹಲವಾರು ವೈದ್ಯರು ತಮ್ಮ ಅಮೂಲ್ಯವಾದ ಸೇವೆಯ ಮೂಲಕ ಮನೆಮಾತಾಗಿದ್ದಾರೆ.ತಮ್ಮ ಕುಟುಂಬಕ್ಕೆ ಕೂಡ ಸರಿಯಾದ ಸಮಯ ನೀಡದೆ ರೋಗಿಗಳಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಂಡು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಅಪೂವ೯ ವೈದ್ಯ ದಂಪತಿಗಳಲ್ಲಿ ಇವರೂ ಕೂಡ ಸೇರಿದ್ದಾರೆ. ಕುಂದಾಪುರದ ಪ್ರಸಿದ್ಧ ವೈದ್ಯ ದಂಪತಿಯಾಗಿರುವ ಇವರು ಹೆಬ್ಬಾರ್ ಕ್ಲಿನಿಕ್ ಮೂಲಕ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಡಾII ಹೆಚ್.ಆರ್ ಹೆಬ್ಬಾರ್ ರವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಸ್ಥಳೀಯ ಸಂಸ್ಥೆಯಲ್ಲಿ ಪೂರೈಸಿ, ಮೈಸೂರು ಮೆಡಿಕಲ್ ಕಾಲೇಜಿನ ಮೂಲಕ ಎಂ.ಬಿ.ಬಿ.ಎಸ್ ನ್ನು ವಿ.ವಿಯಲ್ಲಿ ಅತೀ ಹೆಚ್ಚಿನ ಅಂಕ ಗಳನ್ನು ಪಡೆಯುವ ಮೂಲಕ ಪೂರೈಸಿರುತ್ತಾರೆ. ನಂತರ ಗುಲ್ಬಗ೯ ವಿ.ವಿಯಲ್ಲಿ ಎಂ.ಡಿ (ಮಕ್ಕಳ ರೋಗ ಶಾಸ್ತ್ರ) ವನ್ನು ಪೂರೈಸಿದ ಮೊದಲ ವ್ಯಕ್ತಿಯಾಗಿ ಮೂಡಿ ಬಂದಿರುವುದು ಅಭಿನಂದನೀಯ ವಿಷಯ. ನಂತರ ಸಕಾ೯ರದ ಸೇವೆಯಲ್ಲಿ 7 ವಷ೯ಗಳ ಕಾಲ ಸೇವೆ ಸಲ್ಲಿಸಿದ ಬಳಿಕ  ಕಳೆದ 38 ವಷ೯ಗಳಿ೦ದ ನಿರಂತರ ಕುಂದಾಪುರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕಲೆ , ಸಂಗೀತ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರ: – ಡಾ. ಹೆಬ್ಬಾರ್ ಅವರು ಸಂಗೀತದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದು, ಕಳೆದ 22 ವಷ೯ಗಳಿಂದ ಹಿಂದೂಸ್ತಾನಿ ಸಂಗೀತದಲ್ಲಿ ತೊಡಗಿಸಿಕೊಂಡಿದ್ದು, ವಿದ್ವತ್ (ವಿಶಾರದ) ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಉತ್ತೀಣ೯ರಾಗಿದ್ದಾರೆ. ತಬಲಾ ಜೂನಿಯರ್ ವಿಭಾಗದಲ್ಲಿ ತೇಗ೯ಡೆಯಾಗಿರುವುದು ಅಭಿನಂದನೀಯ.
ಪ್ರವಾಸ ಕಥನ ಹಾಗೂ ಇನ್ನಿತರ ಹಲವಾರು ಲೇಖನಗಳನ್ನು ಬರೆದಿದ್ದು,  ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿರುತ್ತಾರೆ.
ಪ್ರಾಣಿಗಳ ಆರೈಕೆಯಲ್ಲಿ ಕೂಡ ಆಸಕ್ತಿ ಬೆಳೆಸಿಕೊಂಡಿದ್ದು, ಉತ್ತಮ ಯೋಗ ಪಟು ಕೂಡ ಹೌದು. ಕ್ರೀಡೆಯಲ್ಲಿ ಅದರಲ್ಲಿಯೂ ಟೆನ್ನಿಸ್ ಬ್ಯಾಡ್ಮಿಂಟನ್ ನಲ್ಲಿ ಸಾಧನೆ ಮಾಡಿದ್ದಾರೆ. ಕುಂದಾಪುರ ರೋಟರಿಯಲ್ಲಿ ಅಧ್ಯಕ್ಷರಾಗಿ ವಿವಿಧ ಚಟುವಟಿಕೆಗಳನ್ನು ನಡೆಸಿ ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೀಗೆ ಬಹುಮುಖ ಪ್ರತಿಭಾ ಸಂಪನ್ನರಾದ ಇವರು ತಮಗೆ ಆಸಕ್ತಿ ಇರುವ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಡಾII ಪುಷ್ಪ ಗಂಧಿನಿ ಇವರು ಗುಲ್ಬಗ೯ ವಿವಿಯಿಂದ ಎಂ.ಬಿ.ಬಿ.ಎಸ್ ಪದವಿ ಪಡೆದಿದ್ದು, ಡಿಜಿಒ ಪದವಿಯನ್ನು ವಿಮ್ಸ್ ಬಳ್ಳಾರಿಯಿಂದ ಮುಗಿಸಿದ್ದಾರೆ. ಇವರು ವಿ.ವಿಯ ಟೆನ್ನಿಕೊಟ್ ಮತ್ತು ತ್ರೋಬಾಲ್ ಚಾಂಪಿಯನ್ ಆಗಿ ಮೂಡಿ ಬಂದಿರುವುದು ಅವರ ದೊಡ್ಡ ಕ್ರೀಡಾ ಸಾಧನೆಯಾಗಿದೆ. ಪ್ರವಾಸದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ಈವರೆಗೆ 20 ದೇಶಗಳನ್ನು ಸಂದಶಿ೯ಸಿ ಅದರ ಕುರಿತು ಲೇಖನಗಳನ್ನು ಕೂಡ ಬರೆದಿದ್ದಾರೆ. ರಂಗ ಚಟುವಟಿಕೆಗಳಲ್ಲಿ ಕೂಡ ಆಸಕ್ತಿ ಬೆಳೆಸಿಕೊಂಡಿರುವುದು ಸಂತೋಷದ ವಿಷಯ. ವಿವಿಧ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡಿರುತ್ತಾರೆ. 2 ಪುಸ್ತಕಗಳು ಇವರ ಲೇಖನಿಯಿಂದ ಮೂಡಿ ಬಂದಿವೆ. ಡಾII ಅಲ್ಕಾ ಮತ್ತು ಡಾ| ಮಾಳವಿಕಾ ಹೆಬ್ಬಾರ್ ದಂಪತಿಗಳ ಮುದ್ದು ಮಕ್ಕಳು .

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಇವರು ಕುಂದಾಪುರದ ಅಪೂವ೯ ವೈದ್ಯ ದಂಪತಿಗಳು. ವೈದ್ಯ ದಂಪತಿಗಳ ಸೇವೆ  ಹೀಗೆಯೇ ಮುಂದುವರೆಯಲಿ ಎಂಬ ಆಶಯದೊಂದಿಗೆ, ಇವರ ಈ ಸೇವೆಗೆ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಮಧ್ಯಾಹ್ನ 3 ಕ್ಕೆ ನಡೆಯುವ ಸಮಾರಂಭದಲ್ಲಿ  ಗೌರವ ಪುರಸ್ಕಾರ 2023ನ್ನು ನೀಡಿ ಗೌರವಿಸಲಿದ್ದಾರೆ
~  ರಾಘವೇಂದ್ರ ಪ್ರಭು ಕರ್ವಾಲು

 
 
 
 
 
 
 
 
 
 
 

Leave a Reply