ಕಾರ್ಕಳ ಪುರಸಭೆಯಲ್ಲಿ ಇನ್ನು ಸುಮಾ~ಪಲ್ಲವಿಯ ಹವಾ   

ಕಾರ್ಕಳ: ಮಂಗಳವಾರ ನಡೆದ ಕಾರ್ಕಳ ಪುರಸಭೆಯ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಸುಮಾಕೇಶವ್ ಹಾಗೂ ಉಪಾಧ್ಯಕ್ಷೆಯಾಗಿ ಪಲ್ಲವಿ ಆಯ್ಕೆಗೊಂಡಿದ್ದಾರೆ. ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾದ ಉಪಾಧ್ಯಕ್ಷತೆಗೆ ಬಿಜೆಪಿಯಿಂದ ಪಲ್ಲವಿ ಮತ್ತು ಕಾಂಗ್ರೆಸ್‌ನಿಂದ ಪ್ರಭಾ ಕಿಶೋರ್ ನಾಮಪತ್ರ ಸಲ್ಲಿಸಿದ್ದರು.ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಬಿಜೆಪಿಯ ಸುಮಾಕೇಶವ್ ಮತ್ತು ಪಲ್ಲವಿ ತಲಾ 13 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಸಂಸದೆ ಮತ್ತು ಶಾಸಕರ ಮತಗಳು ಬಿಜೆಪಿಗೆ ದೊರಕಿದ್ದು, ಗೆಲುವಿಗೆ ಸಹಕಾರಿಯಾಯಿತು. ಓರ್ವ ಪಕ್ಷೇತರ ಅಭ್ಯರ್ಥಿ ಮತದಾನದಲ್ಲಿ ಭಾಗಹಿಸದೆ ಹೊರಗುಳಿದರು. ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ ಚುನಾವಣೆ ಅಧಿಕಾರಿಯಾಗಿದ್ದರು. ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಸಹಕಾರ ನೀಡಿದರು.

ಇನ್ನು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಸದೆ, ಶೋಭಾ ಕರಂದ್ಲಾಜೆ, ಶಾಸಕ ವಿ.ಸುನೀಲ್‌ಕುಮಾರ್, ಆಡಳಿತ ಪಕ್ಷದ ಸದಸ್ಯರು, ವಿಪಕ್ಷ ಸದಸ್ಯರು, ಪುರಸಭೆ ಅಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು.

ಹಾಗೆ ನೂತನ ಅಧ್ಯಕ್ಷೆ ಸುಮಾಕೇಶವ್ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯವಾಗಿ ಒಳಚರಂಡಿ ಸೇರಿ ಕೆಲವು ಸಮಸ್ಯೆಗಳಿವೆ. ಈ ಸಮಸ್ಯೆಗಳ ಪರಿಹಾರ ಜೊತೆಗೆ ಸ್ವಚ್ಚತೆ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಆದ್ಯತೆ ನೀಡಲಾಗುವುದು. ಎಲ್ಲರ ವಿಶ್ವಾಸ ಪಡೆದು ಉತ್ತಮ ಆಡಳಿತ ನಡೆಸಲಾಗುವುದು ಎಂದರು.

 
 
 
 
 
 
 
 
 
 
 

Leave a Reply