ಸೀತಾರಾಮ ಗುರುಕುಲದಲ್ಲಿ ಶ್ರೀ ಮಧ್ವಜಯಂತಿ ಆಚರಣೆ

ಎರಡು ದಿನಗಳ ಕಾಲ ಆಚಾರ್ಯ ಮಧ್ವರ ಜಯಂತಿ ಆಚರಣೆಯು (online-virtual) Google meet ಮುಖಾಂತರ ಪಂಡಿತ ರತ್ನ, ರಾಜ್ಯಪ್ರಶಸ್ತಿ ವಿಜೇತ ಗುರುಗುಂಡಿ ವಾಸುದೇವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಉಡುಪಿಯ  ಬೈಲಕೆರೆಯ “ಸೀತಾರಾಮ ಗುರುಕುಲ”ದ ಆಶ್ರಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ​ ಆಚಾರ್ಯ ಮಧ್ವರ ಜೀವನ, ಅವರ ಕೃತಿಗಳು, ಅವರ ಸಾಧನೆಗಳು, ಆಚಾರ್ಯರ  ಸಂಚಾರ ಇತ್ಯಾದಿ ವಿಚಾರ ಗಳ ಕುರಿತಾಗಿ ಸೀತಾರಾಮ ಗುರುಕುಲದ ವಿದ್ಯಾರ್ಥಿಗಳಾದ ಸಂಪತ್ ಆಚಾರ್ಯ,  ಮಧುಸೂದನ ಆಚಾರ್ಯ, ಸುಹಾಸ ಆಚಾರ್ಯ,  ಕೃಷ್ಣ ಆಚಾರ್ಯ​,  ​ಸಂದೀಪ್ ತಂತ್ರಿ ಇವರು ಪ್ರಬಂಧ ಮಂಡನೆ​​ಯನ್ನು ಮಾಡಿದರು.ಗುರುಕುಲದ ಪೂರ್ವವಿದ್ಯಾರ್ಥಿಗಳೂ, ಆಪ್ತೇಷ್ಟರಾದ  ವಿಷ್ಣುಮೂರ್ತಿ ಭಟ್, ರಾಮಕೃಷ್ಣ ಆಚಾರ್ಯ, ನಿರಂಜನ ಆಚಾರ್ಯ,  ಪ್ರಮೋದ್ ಯು ವಿ,  ಕಿಶೋರ್ ಪಿ ಎನ್, ಆಶಾ ಆರ್ ರಾವ್, ಹರಿಣಿ ಆಚಾರ್ಯ ಹಾಗೂ ಭೂಮಿಕಾ ಇವರು ಮಧ್ವಾಚಾರ್ಯರ ಗ್ರಂಥಗಳ‌ ಕುರಿತು ವಿಚಾರ ಮಂಡನೆ ಯನ್ನು ಮಾಡಿದರು.

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯರು ರಾಷ್ಟ್ರಪ್ರಶಸ್ತಿ ವಿಜೇತರೂ ಆದ ವಿದ್ವಾನ್  ಅದ್ಯಪಾಡಿ ಹರಿದಾಸ ಭಟ್ಟರು ಆಚಾರ್ಯ ಮಧ್ವರ ವೈಶಿಷ್ಟ್ಯಗಳನ್ನು ತಿಳಿಸಿ ಅನುಗ್ರಹಿಸಿದರು.

ಇದೇ ಸಂದರ್ಭದಲ್ಲಿ  ಮಧ್ವರ  ಕುರಿತ ದಾಸರ ಕೀರ್ತನೆಗಳನ್ನು  ಶ್ರೀಮತಿ ಲಕ್ಷ್ಮೀ ನಾರಾಯಣ ಆಚಾರ್ಯ,  ಶಾಂತಲಾ ಆಚಾರ್ಯ, ಸುಧಾ ಆಚಾರ್ಯ, ಸುಮನಾ ಆಚಾರ್ಯ, ಶ್ರೀದೇವಿ ಆರ್ ಭಟ್​,​ ಉಷಾ ವಿ ಭಟ್,  ಕ್ಷಮಾ ನಿರಂಜನ್,  ವಿದ್ಯಾ ಪ್ರಶಾಂತ್,  ಪ್ರಜ್ಞಾ ಕಿಶೋರ್ ಹಾಗೂ ಸ್ಮೃತಿ ಆಚಾರ್ಯ ಇವರು ಸುಶ್ರಾವ್ಯ ವಾಗಿ ಹಾಡಿದರು

ಪುಟಾಣಿಗಳಾದ ಸುಹೃತ್ ಆಚಾರ್ಯ ಹಾಗೂ ಧಾರಿಣೀ  ಆಚಾರ್ಯರ ಕುರಿತ ಕಥೆಗಳನ್ನು ಹೇಳಿದರು.​ ಶ್ರೀ ಮಧ್ವಗುರುಗಳ ಮಹಿಮೆಯನ್ನು​ ​ಗುರುಕುಲದ ಸಂಚಾಲಕರಾದ ಹರಿದಾಸ ಆಚಾರ್ಯ​ ​ತಿಳಿಸಿ​ದರಲ್ಲದೆ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಗುರುಕುಲದ ಗುರುಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಆನಂದ ಆಚಾರ್ಯ  ಸ್ವಾಗತಿಸಿ​, ನಿರೂಪಿಸಿ ​ಧನ್ಯವಾದವನ್ನಿತ್ತರು.​​

 

 

 
 
 
 
 
 
 
 
 

Leave a Reply