ಕಾರ್ಕಳ ಹರೀಶ್ ಪೂಜಾರಿಯವರಿಗೆ ” ಡಾಕ್ಟರೇಟ್” ಗೌರವ

ನವಿಮುಂಬಯಿ : ಇಲ್ಲಿಯ ನೆರುಲು ನಿವಾಸಿ ಸಮಾಜ ಸೇವಕ ಶ್ರೀ ಹರೀಶ್ ಪೂಜಾರಿಯವರಿಗೆ ಇಂಡಿಯನ್ ಏಂಪಯೈರ್ ಯುನಿವರ್ಸಿಟಿ ಮತ್ತು ಯುನಿವರ್ಷಲ್  ಡೆವಲಪ್ಮೆಂಟ್ ಕೌನ್ಸಿಲ್ ಜಂಟಿಯಾಗಿ ಗುರುತಿಸಿ ಡಾಕ್ಟರೇಟ್ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
ಶನಿವಾರದಂದು ಬೆಂಗಳೂರಿನ ಹೊಸೂರುನಲ್ಲಿರುವ ಕ್ರಿಸ್ಟಲ್ ಪಂಚತಾರಾ ಹೊಟೇಲ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಇಂಡಿಯನ್ ಎಂಪಯೈರ್ ಯುನಿವರ್ಸಿಟಿಯ ಅಧ್ಯಕ್ಷ ಡಾ. ಕೆ. ಪ್ರಭಾಕರ,  ಯುನಿವರ್ಷಲ್ ಡೆವಲಪ್ಮೆಂಟ್ ಕೌನ್ಸಿಲನ ಅಧ್ಯಕ್ಷ ಡಾ. ಪೌಲ್ ಇಮನುಜಾರ್, ಮುಖ್ಯ ಅತಿಥಿಗಳಾಗಿ ಡಾ. ಜೆ ಹರಿಡೋಶ್ ಉಪಜಡ್ಜ್ ಕಾಳಹಸ್ತಿ ಸಬ್ ಕೋರ್ಟ್, ಚಿತ್ತೂರು, ಅಂಧ್ರಪ್ರದೇಶ, ಡಾ. ಅರ್. ಶಿವಕುಮಾರ್ (IPS), ಉಪ ಪೊಲೀಸ್ ಆಯುಕ್ತ, ತಮಿಳುನಾಡು, ಡಾ. ಕೆ. ಎ. ಮನೋಹರನ್ ಮಾಜಿ ಶಾಸಕ ಇವರುಗಳ ಉಪಸ್ಥಿತಿಯಲ್ಲಿ ಗೌರವ ಪ್ರಶಸ್ತಿ ನೀಡಲಾಯಿತು. 
 
ಹರೀಶ್ ಪೂಜರಿಯವರು ಮೂಲತಃ ಕಾರ್ಕಳದ ನಕ್ರೆ ಪೆತ್ತಾಜೆಯ ಶ್ರೀಮತಿ ಸಂಜೀವಿ ಪೂಜಾರಿ ಮತ್ತು ಕಾರ್ಕಳ  ದಿ. ಪೆರ್ವಾಜೆ ಸುಂದರ ಪೂಜಾರಿಯವರ ದ್ವಿತೀಯ ಪುತ್ರರಾಗಿರುವರು.
ಮುಂಬಯಿ, ನವಿ ಮುಂಬಯಿಯ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ತನ್ನಿಂದಾದ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇತ್ತೀಚೆಗೆಯಷ್ಟೆ ಡಿ.ಪಿ. ವರ್ಲ್ಡ್ ನವಸೇವಾ ಇಂಟರ್ನ್ಯಾಶನಲ್ ಬಹು ಅಂತಾರಾಷ್ಟ್ರೀಯ ಕಂಪನಿಯಲ್ಲಿ ಸತತ 21 ವರ್ಷ ಉನ್ನತ ಅಧಿಕಾರಿಯಾಗಿ ಸುದೀರ್ಘ ಸೇವೆ ಮಾಡಿ ನಿವೃತ್ತಿ ಹೊಂದಿದ್ದಾರೆ.
ಹರೀಶ್ ಪೂಜಾರಿಯವರು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆ ಸಂಘ – ಮಹಾರಾಷ್ಟ್ರ, ಸೆಲ್ಯೂಟ್ ತಿರಂಗ, ಕರ್ನಾಟಕ ಘಟಕ – ಮಹಾರಾಷ್ಟ್ರ, ಬಿಜೆಪಿ ದಕ್ಷಿಣ ಭಾರತ ಘಟಕ, ನವಿಮುಂಬಯಿ, ವಿಶ್ವ ಮಾನವಾಧಿಕಾರ ಸಂಸ್ಥೆ – ನವಿಮುಂಬಯಿ, ಗ್ರಾಹಕರ ಉಪಬೋಕ್ತ ಸಮಿತಿ – ನವಿಮುಂಬಯಿಯ ಅಧ್ಯಕ್ಷರಾಗಿದ್ದರು.  
ಶ್ರೀ ಶಬರಿಮಲೆ ಅಯ್ಯಪ್ಪ ಸೇವಾಸಂಗಮ್ – ನವಿಮುಂಬಯಿಯ ಉಪಾಧ್ಯಕ್ಷರಾಗಿ, ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿ, ಜನತಾ ಶಿಕ್ಷಣ ಸಂಘ ಮತ್ತು ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ – ಮುಂಬಯಿ, ರಂಗಭೂಮಿ ಫೈನ ಅರ್ಟ್ಸ್ – ನವಿಮುಂಬಯಿಯ ಅಡಳಿತ ಸಮಿತಿ ಸದಸ್ಯರಾಗಿ ಅಲ್ಲದೆ ಹತ್ತು ಹಲವು ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು. 
ಇವರು ಚಿಕ್ಕಂದಿನಲ್ಲಿ ಹಗಲು ಹೋಟೆಲ್ ಗಳಲ್ಲಿ  ಕೆಲಸ ಮಾಡಿ, ರಾತ್ರಿ ಮದರ್ ಇಂಡಿಯಾ ಧರ್ಮಾರ್ಥಾ ರಾತ್ರಿ ಶಾಲೆಯಲ್ಲಿ ಕಲಿತು ಹಂತ ಹಂತವಾಗಿ ಈ ಮಟ್ಟಕ್ಕೆ ತಲುಪಿರುವುದಕ್ಕೆ ಅವರ ಬಂಧು ಮಿತ್ರರು, ಹಿತೈಷಿಗಳು, ಗೆಳೆಯರು ಸಂಭ್ರಮ ಪಡುತ್ತಿದ್ದಾರೆ.    
 
 
 
 
 
 
 
 
 
 
 

Leave a Reply