ಮೇಘನಾಳ ಕರಗಳಲ್ಲಿ ಮೂಡಿದ ಹರಿದ್ರಾ ಗಣಪ~ಪೂರ್ಣಿಮಾ ಜನಾರ್ದನ

ಇದೀಗ ಎಲ್ಲಿ ನೋಡಿದರೂ ಪರಿಸರ ಸಂರಕ್ಷಣೆಯ ಜಾಗೃತಿಯ ಕೂಗು. ಮನೆ ಮನೆಗಳಲ್ಲಿ ಪರಿಸರ ಸ್ನೇಹಿ ಗಣಪ ಬಹು ಬೇಡಿಕೆಯ‌ ಕೂಸು.ಎಲ್ಲರಿಂದ ಪೂಜಿಸಲ್ಪಡುವ ವಿನಾಯಕನ ಆರಾಧನೆ ಒಂದೊಂದು ಸ್ಥಳಗಳಲ್ಲಿ ಒಂದೊಂದು ರೀತಿ. ಭಕ್ತರ ಮನದ ಆಶಯ ಪೂರೈಸುವ ಏಕದಂತನನ್ನು ಭಕ್ತರು ವಿವಿಧ ರೂಪಗಳಲ್ಲಿ ನೋಡಿ ಖುಷಿ‌ ಪಡುವ ಸಂಪ್ರದಾಯ ಇಂದು ನಿನ್ನೆಯದಲ್ಲ.

ಮಣ್ಣಿನಿಂದ ಹುಟ್ಟಿ ಮಣ್ಣಿನಲ್ಲಿ‌ ಲೀನವಾಗುವ ಪ್ರಕೃತಿ‌ಮಾತೆಯ ಪುತ್ರ ಬೆನಕನನ್ನು ಪ್ರಕೃತಿ ಪ್ರಿಯರು ಮಣ್ಣಿನಲ್ಲಿ ಸುಲಭವಾಗಿ ಕರ ಗುವ ಆವೆ ಮಣ್ಣು,ತರಕಾರಿ ತರಹೇವಾರಿ ಹೂಗಳು, ಮರಳು, ಬಿಸ್ಕತ್, ಕಾಗದ ಹೀಗೆ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿ ಸುತ್ತಾರೆ.ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಮನೆಗಳಲ್ಲಿ ಪೂಜಿಸುವ ವಿಗ್ರಹಗಳಲ್ಲಿ ಬೀಜದುಂಡೆಗಳನ್ನು ಹುದುಗಿಸಿ ಆ ಮೂಲಕ ಪರಿಸರ ಜಾಗೃತಿಯ ಹೊಸ ಪರಿಕಲ್ಪನೆ ಬೆಳೆದು ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕೊರೋನಾ ಮಾಹಾಮಾರಿಯನ್ನು ದೂರದಲ್ಲಿರಿಸಲು ಅರಶಿಣ,ಶುಂಠಿ, ಕಾಳುಮೆಣಸುಗಳ ಸೇವನೆ ಮನೆ ಮನೆಗಳಲ್ಲಿ ನಿತ್ಯವೂ ಕಾಣುವ ಪ್ರಕ್ರಿಯೆ. ಔಷಧೀಯ ಗುಣವುಳ್ಳ ಅರಿಶಿಣಕ್ಕೆ ಆಧ್ಯಾತ್ಮಿಕ ವಾಗಿಯೂ ಪವಿತ್ರ ಸ್ಥಾನ‌ ‌.ಇಂತಹ ಬಹು ಉಪಯೋಗಿ ರೋಗ ನಿರೋಧಕ ಗುಣವುಳ್ಳ ಅರಿಶಿಣವನ್ನು ಬಳಸಿಕೊಂಡು ಚೆಂದದ ಪುಟ್ಟ ಗಣಪನ ವಿಗ್ರಹದ ರಚನೆಯಲ್ಲಿ ತನ್ನನ್ನು ತೊಡಗಿಸಿಕೊಂಡವರು ಮೇಘನಾ ಪಡುಕುದ್ರು.

ತಂದೆ ಹರಿಪ್ರಸಾದ್ ಹಾಗು ತಾಯಿ ಮಂಗಲಾ ದಂಪತಿಗಳ ಪುತ್ರಿಯಾಗಿರುವ ಈಕೆ ತನ್ನ ಅಣ್ಣ ಸುಬ್ರಹ್ಮಣ್ಯರ ಜೊತೆಗೂಡಿ ಚೌತಿ ಯ ಹಿಂದಿನ ದಿನ ಪುಟ್ಟ ಮುದ್ದು ಅರಿಶಿಣ ಗಣಪನನ್ನು ನಿರ್ಮಿಸಿದ್ದಾರೆ.ಅರಿಶಿಣ ಪುಡಿಗೆ ಅಂಟು ಬರಲು ಸ್ವಲ್ಪ ಮೈದಾ ಬೆರೆಸಿ ಮಾಡಿದ ಗಣಪತಿಯ ಆಕೃತಿಯ ಕಣ್ಣಿಗೆ ಉದ್ದು, ದಂತಕ್ಕೆ ಕ್ಯಾಬೇಜಿನ‌ ಒಳಭಾಗ, ಇಲಿಯ ಕಣ್ಣಿಗೆ ಸಾಸಿವೆಯನ್ನು ಉಪಯೋಗಿಸಿ ಒಟ್ಟಂದದ ಗಣಪನನ್ನು ರಚಿಸಿ‌ ಹುಲ್ಲು ‌ಕಡ್ಡಿಗಳಿಂದ ಅಲಂಕರಿಸಿ ಪಕ್ಕಾ ಪರಿಸರ ಸ್ನೇಹಿ ಗಣಪತಿಯನ್ನು ನಿರ್ಮಿಸಿದ್ದಾರೆ.

ಕಂಪೆನಿ ಸೆಕ್ರೆಟರಿ ಫೌಂಡೇಷನ್ ಪದವಿ‌ ಮುಗಿಸಿದ ಮೇಘನಾ ಅರಿಶಿಣ ಗಣಪನ ಮೂಲಕ ಪರಿಸರ ಪ್ರೇಮ ಹಂಚುವ ಇವಳ ಮೊದಲ ಪ್ರಯತ್ನದಲ್ಲಿ ಮೂಡಿ ಬಂದ ಹರಿದ್ರಾ ವಿಘ್ನೇಶ ಔಷಧೀಯ ಗುಣಗಳ ಭಂಡಾರವೂ ಹೌದು.

 

 
 
 
 
 
 
 
 
 
 
 

Leave a Reply