ನೆಲೆ ತಪ್ಪಿದವರಿಗೆ ವಿಷು ಶೆಟ್ಟಿ ವಿಶ್ವಾಸದ ನೆಲೆ

ಹದಿನೆಂಟು ತಿಂಗಳ ಪರಿಶ್ರಮಪಟ್ಟು ಯುವಕನಿಗೆ ವಿಶು ಶೆಟ್ಟಿ ~ ಹೊಸಬೆಳಕು ನೀಡಿದರು.
ಆಶ್ರದಾತರಾರದರು ಹೆಬ್ರಿಯ ಐತಾಳ್ ವೈದ್ಯದಂಪತಿಗಳು…..
ಮಾನಸಿಕ ವ್ಯಾಧಿಯಿಂದ ಅಸಹಾಯಕನಾಗಿ ಬದುಕು ಸಾಗಿಸುತ್ತಿದ್ದ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸತತ ಒಂದು ವರ್ಷಗಳ ವರೆಗೆ ಚಿಕಿತ್ಸೆಗೊಳಪಡಿಸಿ ಯುವಕನನ್ನು ಮುಖ್ಯವಾಹಿನಿಗೆ ತಂದುನಿಲ್ಲಿಸಿದ್ದಾರೆ. ಜನ್ಮದಾತನೇ ಗನಿಗೆ ಆಶ್ರಯ ನೀಡಲು ಒಪ್ಪದಿದ್ದಾಗ ಹೆಬ್ರಿಯ ರಾಘವೇಂದ್ರ ಆಸ್ಪತ್ರೆ, ಯುವಕನಿಗೆ ಪುರ್ನವಸತಿ ಒದಗಿಸಿ ಯುವಕನ ಬಾಳಿ ನಲ್ಲಿ ಹೊಸಬೆಳಕು ಮೂಡಿಸಿದ್ದಾರೆ. ಆಸ್ಪತ್ರೆಯ ಡಾ. ಭಾರ್ಗವಿ ಐತಾಳ್,  ಡಾ. ರಾಮಚಂದ್ರ ಐತಾಳ್ ವೈದ್ಯ ದಂಪತಿಗಳ   ಮಾನವಿಯತೆಯ ಸತ್ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆ ಏನು…? :  ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೂಡುಬೆಟ್ಟು ಪರಿಸರದಲ್ಲಿ ಮನೋವ್ಯಾಧಿಗೆ ಒಳಪಟ್ಟಿರುವ ಇಪ್ಪತೆಂಟು ಹರೆಯದ ಯುವಕ, ಕಳೆದ ಎಳು ವರ್ಷಗಳಿಂದ ನಾಗರಿಕ ಸಮಾಜದಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ. ಇತನ ಉಗ್ರ ವರ್ತನೆಯು ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಯುವಕನಿಂದ ಸಾರ್ವಜನಿಕರ ಮೇಲೆ ವಿನಾಕಾರಣ ಹಲ್ಲೆಗಳು ನಡೆದಿದ್ದವು. ಯುವಕನ ಮೇಲೆಯೂ ಸಾರ್ವಜನಿಕರಿಂದ ಹಲ್ಲೆಗಳು ನಡೆದಿದ್ದವು. ಚಲಿಸುತ್ತಿರುವ ವಾಹನ- ಮನೆಗಳ ಮೇಲೆ ಯುವಕ ಕಲ್ಲುಗಳನ್ನು ಏಸೆಯುತ್ತಿದ್ದ. ಯುವಕನ ತಾಯಿ ಶಿಕ್ಷಕಿ ಆಗಿದ್ದರು. ಅವರು ಮರಣ ಹೊಂದಿದ ಬಳಿಕ ಯುವಕ ಮನ ನೊಂದು ಖಿನ್ನತೆಗೆ ಒಳಪಟ್ಟ ಎಂದು ಸ್ಥಳಿಯರು ಹೇಳಿಕೊಂಡಿದ್ದಾರೆ. ಒಮ್ಮೆ  ಇತನ ಉಗ್ರ ಉಪಟಳ ತಾಳಲಾರದೆ ಸಾರ್ವಜ ನಿಕರು  ವಶಕ್ಕೆ ಪಡೆದು ಕೈ ಕಾಲುಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ ರಸ್ತೆಯ ಬೀದಿಯಲ್ಲಿ ಎಸೆದು ಹೋಗಿದ್ದರು.
ರಕ್ಷಣಾ ಕಾರ್ಯಚರಣೆ: ವಿಷಯ ತಿಳಿದ ವಿಶು ಶೆಟ್ಟಿ ಅವರು ಯುವಕನನ್ನು ಹಗ್ಗದ ಬಂಧನದಿಂದ ಮುಕ್ತಗೊಳಿಸಿ ದೊಡ್ಡಣಗುಡ್ಠೆ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ್ದರು. ಗುಣಮುಖನಾದ ಬಳಿಕ ವಿಶು ಶೆಟ್ಟಿ ಅವರು, ಯುವಕನನ್ನು ಆತನ ತಂದೆಯ ವಶಕ್ಕೆ ನೀಡಿದ್ದರು. ತಂದೆಯಿಂದ ಸರಿಯಾಗಿ ಔಷಧೋಪಚಾರಗಳು ಸರಿಯಾಗಿ ನಡೆಯದೆ, ಮತ್ತೆ ಯುವಕನಿಗೆ ವ್ಯಾಧಿಯು ಮರು ಕಳಿಸಿತು. ಪುನಃ ಆತನ ವರ್ತನೆಗಳು ಮೊದಲಿನಂತೆ ಆದವು. ಯುವಕ ಪುನಃ ಬೀದಿಯಲ್ಲಿ ಕಂಡು ಬಂದಾಗ ಆತನ ವಶಕ್ಕೆ ಪಡೆದು, ಎರಡನೇ ಬಾರಿಗೆ ಬಾಳಿಗ ಆಸ್ಪತ್ರೆಗೆ ವಿಶು ಶೆಟ್ಟಿ ಅವರು  ದಾಖಲುಪಡಿಸಿದರು. ಅಲ್ಲಿ ಯುವಕನಿಗೆ ಸತತ 7 ತಿಂಗ ಳುಗಳ ಕಾಲ ಚಿಕಿತ್ಸೆ ನಡೆಯಿತು. ಅಲ್ಲದೆ ಆಸ್ಪತ್ರೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ದಾಖಲಿಸಲಾಗಿತ್ತು.

                         ಡಾ. ಭಾರ್ಗವಿ ಐತಾಳ್,  ಡಾ. ರಾಮಚಂದ್ರ ಐತಾಳ್ ವೈದ್ಯ ದಂಪತಿಗಳು   

ಯುವಕನು ಸ್ವಸ್ಥಗೊಂಡಾಗ ಸಂಬಂಧಪಟ್ಟವರಲ್ಲಿ ಸಂಬಂಧಿಕರಲ್ಲಿ ಯುವಕನಿಗೆ ನೆಲೆ ಒದಗಿಸುವುಂತೆ ಮಾಧ್ಯಮ ಮೂಲಕ ವಿಶು ಶೆಟ್ಟಿ ಅವರು ವಿನಂತಿಸಿಕೊಂಡಿದ್ದರು. ಆದರೆ ಯಾರಿಂದಲೂ ಸ್ಪಂದನೆಗಳು ದೊರೆಯಲಿಲ್ಲ. ಯಾರ ಮನವು ಕರಗಲೇ ಇಲ್ಲ. ಯುವ ಕನ ಹತ್ತಿರದ ಸಂಬಂಧಿಗಳು ಅನುಕೂಲಸ್ಥರು, ಪದವಿ ಶಿಕ್ಷಣ ಪಡೆದವರೆಂದು ತಿಳಿದು ಬಂದಿದೆ. ಯುವಕನ ಚಿಕಿತ್ಸೆಗೆ ವಿಶು ಶೆಟ್ಟಿ ಅವರು ಎರಡು ಹಂತದ ಚಿಕಿತ್ಸೆ ನೀಡಲು 50 ಸಾವಿರಕ್ಕೂ ಅಧಿಕ ಹಣ ವ್ಯಯಮಾಡಿದ್ದಾರೆ.  ಬಾಳಿಗ ಆಸ್ಪತ್ರೆಯ ವೈದ್ಯರು ಚಿಕಿತ್ಸಾ ವೆಚ್ಚದಲ್ಲಿ ವಿಶೇಷ ರಿಯಾಯತಿಯನ್ನು ನೀಡಿದ್ದಾರೆ. ಸಿಬ್ಬಂದಿಗಳು  ಬಹಳವಾಗಿ ಸಹಕರಿಸಿದ್ದಾರೆ.

ಆಶ್ರಯದಾತರು…!   ಯಾರು ಯುವಕನಿಗೆ ಆಶ್ರಯ ಒದಗಿಸಲು ಒಪ್ಪದಿದ್ದಾಗ, ವಿಶು ಶೆಟ್ಟಿ ಅವರ ವಿನಂತಿಯ ಮೆರೆಗೆ, ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಡಾ. ಭಾರ್ಗವಿ ಐತಾಳ್,  ಡಾ.ರಾಮಚಂದ್ರ ಐತಾಳ್ ದಂಪತಿಗಳು ಯುವಕನಿಗೆ ಆಶ್ರಯ ಒದಗಿಸಿ ದ್ದಾರೆ. ಯುವಕನು ನಮ್ಮಲ್ಲಿ ಇರುವವರೆಗೂ ಸುರಕ್ಷಿತವಾಗಿ  ನೋಡಿಕೊಳ್ಳುತ್ತೇವೆ. ಮತ್ತೆ ಕಾಯಿಲೆ ಮರುಕಳಿಸಿದರೆ, ವಿಶು ಶೆಟ್ಟಿ ಅವರ ಮೂಲಕ ಪರ್ಯಾಯ ವ್ಯವಸ್ಥೆ  ಮಾಡಿಸುತ್ತೇವೆ ಎಂದು ದಂಪತಿಗಳು  ಹೇಳಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply