ಡಾ.ಜಿ .ಶಂಕರ್ ರಸ್ತೆ  ಎಂದು ನಾಮಕರಣ ಮಾಡುವ ಮೂಲಕ ಜಿಲ್ಲಾಡಳಿತ ಕೃತಜ್ಞತೆ ಸಲ್ಲಿಕೆ  

ಉಡುಪಿ ಜಿಲ್ಲೆ ಉಡುಪಿ ತಾಲೂಕು ಅಂಬಲಪಾಡಿಯಲ್ಲಿ ವಾಸವಾಗಿರುವ ಶಂಕರ್ ಅವರು ತಮ್ಮ ಫ್ಯಾಮಿಲಿ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಮಾಡುತ್ತಿರುವ ಕಾರ್ಯಗಳು ಸಮಾಜದಲ್ಲಿ ಇತರರಿಗೆ ಮಾದರಿಯಾಗಿದೆ​. ​ ಸಮಾಜದ ನೊಂದ ಜನರು ಕಣ್ಣೀರು ಒರೆಸುವ ಅವರ ಕಾರ್ಯಗಳಿಗೆ ಜಾತಿ-ಮತಗಳ ನಿರ್ಬಂಧವಿಲ್ಲ ​. ​
ಸಹಾಯ ಹಸ್ತವನ್ನು ಚಾಚುವ ಅವರ ಕೈಗಳಿಗೆ ಯಾವುದೇ ​ಇತಿಮಿತಿ ​ಇಲ್ಲ. ಕರೋನಾ ಸಂಕಷ್ಟ ಸಮಯದಲ್ಲಿ ಕರೋನಾ ತಡೆಗಟ್ಟು ವಿಕೆಯ ನಿಟ್ಟಿನಲ್ಲಿ ದೇಶದಾದ್ಯಂತ ​ಲಕ್ಡೌನ್ ಸಂದರ್ಭದಲ್ಲಿ ಘೋಷಿಸಿದ ಸಂದರ್ಭದಲ್ಲಿ ಶಂಕರ್ ರವರು 4,71,85,000-00 ಕೋಟಿ ಆರೋಗ್ಯ ಸಂಬಂಧಿ ಪರಿಕರಗಳ ​ಕೊಡುಗೆಗಳನ್ನು ​ಆರೋಗ್ಯ ಇಲಾಖೆ​,​ ಪೊಲೀಸ್ ಇಲಾಖೆ​,​ ಶಿಕ್ಷಣ ಇಲಾಖೆಗಳಿಗೆ ನೀಡಿದ್ದು ಬಡ ಕೂಲಿ ಕಾರ್ಮಿಕರಿಗೆ​, ​ ರಿಕ್ಷಾಚಾಲಕರಿಗೆ ರೂಪಾಯಿ ​2.75 ಕೋಟಿ ಮೌಲ್ಯದ ಆಹಾರ ಸಾಮಾಗ್ರಿಗಳ​ ಕಿಟ್ಗಳನ್ನು ನೀಡಿರು ತ್ತಾರೆ​.
​ಕೋವಿಡ್ ​ನಿಯಂತ್ರಿಸುವ ನಿಟ್ಟಿನಲ್ಲಿ ಉಡುಪಿ​. ದ .ಕ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳ ಅರೋಗ್ಯ ಇಲಾಖೆಗೆ ರೂಪಾಯಿ 59.50 ​ಲಕ್ಷ ಮೌಲ್ಯದ ಒಟ್ಟು 6 ಹ್ಯಾಮಿಲ್ಟನ್ ವೆಂಟಿಲೇಟರ್ಸ್ ಗಳನ್ನು ನೀಡಿರುತ್ತಾರೆ.  ಜಿ.ಶಂಕರ್ ರವರ ಮಾರ್ಗ ದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಕೋರೋನಾ  ಫ್ರಂಟ್ ಲೈನ್ ವಾರಿಯರ್ಸ್ ತಂಡ ಜಾತಿ ಮತ ಭೇದವಿಲ್ಲದೆ ಕರೋನ ಸೋಂಕಿನಿಂದ ಮೃತಪಟ್ಟ 130 ಪಾರ್ಥಿವ ಶರೀರಗಳ ಅಂತ್ಯ ಕ್ರಿಯೆಯನ್ನು ಅವರವರ ಧರ್ಮಕ್ಕನುಸಾರವಾಗಿ  ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿರುತ್ತಾರೆ.
ಹೀಗೆ ಅರೋಗ್ಯ , ಶಿಕ್ಷಣ ಕ್ರೀಡೆ ಸಾಂಸ್ಕೃತಿಕ ಪರಂಪರೆ ಧಾರ್ಮಿಕ  ಕ್ಷೇತ್ರಗಳು ಸೇರಿದಂತೆ ಸಮಾಜದ ಪ್ರಮುಖ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಗಳನ್ನು ನೀಡಿ ಸಮಾಜ ಮುಖಿಯಾಗಿ ಸೇವೆ ಸಲ್ಲಿಸಿರುವುದರಿಂದ ಅವರ ಹೆಸರು ಅಜರಾಮರವಾಗಿರುವಂತೆ ಉಡುಪಿ ನಗರಸಭಾ ವ್ಯಾಪ್ತಿಯ  ಬ್ರಹ್ಮಗಿರಿ ಜಂಕ್ಷನ್ ನಿಂದ ನಾರಾಯಣ ಗುರು ಮಂದಿರದವರಗಿನ ರಸ್ತೆಗೆ ಸರಕಾರದ ಆದೇಶ ದಂತೆ ನಾಡೋಜ ​ಡಾ.ಜಿ .ಶಂಕರ್​ ರಸ್ತೆ  ಎಂದು ನಾಮಕರಣ ಮಾಡಲಾಗಿದೆ ಎಂದು  ಜಿಲ್ಲಾಧಿಕಾ​​ರಿ ​ಜಿ ಜಗದೀಶ್ ತಿಳಿಸಿದ್ದಾರೆ 
 
 
 
 
 
 
 
 
 
 
 

Leave a Reply