ಕಾಲ್ಚೆಂಡಿನ ಸಮರದಲ್ಲಿ ಜಯಮಾಲೆ ಅರ್ಜೆಂಟಿನಾ ಕೊರಳಿಗೆ..

ಅಂತಿಮ ಕ್ಷಣದವರೆಗಿನ ರೋಚಕ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಗೆದ್ದು ಫಿಫಾ ವಿಶ್ವಕಪ್​ 2022ರ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಒಂದು ತಿಂಗಳ ಕಾಲ ಫುಟ್ಬಾಲ್ ಪ್ರೇಮಿಗಳನ್ನು ರಂಜಿಸಿದ ಫಿಫಾ ವಿಶ್ವಕಪ್ 2022ಗೆ ಅದ್ಧೂರಿ ತೆರೆಬಿದ್ದಿದೆ.

 ಫೈನಲ್​ ಪಂದ್ಯದಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ಮತ್ತು ಎಂಬಾಪೆ ನಾಯಕತ್ವದ ಫ್ರಾನ್ಸ್​ ತಂಡಗಳು ಸೆಣಸಾಡಿದವು.

 ಅಂತಿಮ ಕ್ಷಣದವರೆಗಿನ ರೋಚಕ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ಗೆದ್ದು ಫಿಫಾ ವಿಶ್ವಕಪ್​ 2022ರ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

 3-3 ಗೋಲ್​ಗಳ ಮೂಲಕ ಪಂದ್ಯ ಟೈ ಆದಾಗ ಪೆನಾಲ್ಟಿ ಶೂಟ್​ ಔಟ್​ನಲ್ಲಿ 4-2 ಅಂತರದಿಂದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಅರ್ಜೆಂಟಿನಾ ತಂಡ ಮೆಸ್ಸಿಗೆ ಗೆಲುವಿನ ಉಡುಗೊರೆ ನೀಡಿದೆ.

ಪಂದ್ಯದ 117ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್​ ಸಿಕ್ಕ ಅವಕಾಶವನ್ನು ಎಂಬಾಪೆ ಸರಿಯಾಗಿ ಬಳಸಿಕೊಳ್ಳುವ ಮೂಲಕ ಗೋಲ್​ ಆಗಿ ಪರಿವರ್ತಿಸಿದರು. ಅರ್ಜೆಂಟಿನಾ 4-4-2 ರಚನೆಯಲ್ಲಿ ಮತ್ತು ಫ್ರಾನ್ಸ್ 4-2-3-1 ಶೈಲಿಯಲ್ಲಿ ಮೈದಾನಕ್ಕಿಳಿದಿತ್ತು.

ಫಿಫಾ ವಿಶ್ವಕಪ್​ಗೆ ಇಂದು ಬಾಲಿವುಡ್​ ಬ್ಯೂಟಿ ದೀಪಿಕಾ ಪಡುಕೋಣೆ ಎಂಟ್ರಿಕೊಟ್ಟಿದ್ದರು.

 ಫಿಫಾ ವಿಶ್ವಕಪ್ ಟ್ರೋಫಿಯನ್ನು ದೀಪಿಕಾ ಇಂದು ಅನಾವರಣಗೊಳಿಸಿದರು. ಇವರ ಜೊತೆಗೆ ಸ್ಪೇನ್‌ನ ಮಾಜಿ ನಾಯಕ ಐಕರ್ ಕ್ಯಾಸಿಯಸ್ ಸಹ ಮೈದಾನದಲ್ಲಿ ಟ್ರೋಫಿ ಅನಾವರಣದ ವೇಳೆ ಕಾಣಿಸಿಕೊಂಡರು.

 ಬಳಿಕ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಸಹ ಭಾಗಿ ಆಗುವ ಮೂಲಕ ಫಿಫಾ ವಿಶ್ವಕಪ್​ನಲ್ಲಿ ಬಾಳಿವುಡ್​ ರಂಗು ತಂದರು.

 ಒಟ್ಟಾರೆಯಾಗಿ ವಿಶ್ವಕಪ್​ನಲ್ಲಿ ಅರ್ಜೆಂಟೇನಾ ಗೆಲ್ಲುವ ಮೂಲಕ ಕಾಲ್ಚೆಂಡಿನ ಆಟಕ್ಕೆ ಅದ್ಧೂರಿ ತೆರೆ ಬಿದ್ದಿದೆ.

 
 
 
 
 
 
 
 
 
 
 

Leave a Reply