ಅನಿತಾ ಸಿಕ್ವೇರಾ ಇವರಿಗೆ ರಾಜ್ಯ ಮಟ್ಟದ “ಸಾಹಿತ್ಯ ಸಿರಿ” ಪ್ರಶಸ್ತಿ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಗೂ ಜಿಲ್ಲಾ ಬರಹಗಾರರ ಸಂಘ ಮಂಡ್ಯ ಜಿಲ್ಲಾ ಘಟಕ ಇವರ ವತಿಯಿಂದ  ಉಡುಪಿ ಜಿಲ್ಲೆಯ ಅನಿತಾ ಸಿಕ್ವೇರಾ ಇವರಿಗೆ ರಾಜ್ಯ ಮಟ್ಟದ “ಸಾಹಿತ್ಯ ಸಿರಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸುಮಾರು 25 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿತಾ ಸಿಕ್ವೇರಾ ಉಡುಪಿ ಪ್ರಸ್ತುತ ಕನ್ನಡ ಉಪನ್ಯಾಸಕಿಯಾಗಿ ಹಾಗೂ ಸ್ಪಂದನ ಟಿವಿಯಲ್ಲಿ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸನ್ಮಾನ ಸಮಾರಂಭವು 3.11.2023ರಂದು ಮಂಡ್ಯದ ಗಾಂಧಿ ಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಮಂಡ್ಯ ಬರಹಗಾರರ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್,ಕಾರ್ಯದರ್ಶಿಯಾದ ರೂಪ, ಮಂಡ್ಯ ಬರಹಗಾರರ ಸಂಘದ ಸದಸ್ಯರು ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕರು, ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

Leave a Reply