Janardhan Kodavoor/ Team KaravaliXpress
32 C
Udupi
Wednesday, March 3, 2021

ಬೇಬಿ ಎಚ್. ಸಾಲ್ಯಾನ್ (ಬೇಬಿಯಕ್ಕ)ರವರಿಗೆ ರೈತ ರತ್ನ ಪ್ರಶಸ್ತಿ

ಮೂರನೇ ತರಗತಿಯ ನಂತರ ಶಿಕ್ಷಣ ಮುಂದುವರಿಸಲಾಗದಂತಹ ಬಡತನದಲ್ಲಿ ಹುಟ್ಟಿದ ಬೇಬಿ ಎಚ್. ಸಾಲ್ಯಾನ್ ಯಾನೆ ಬೇಬಿಯಕ್ಕ, ಅವರ ಮಾತಿಗೆ ಇಂದು ಕರಾವಳಿಯಲ್ಲಿ ಒಂದು ತೂಕ ಇದೆ, ಮಾನ್ಯತೆ ಇದೆ, ಗೌರವ ಇದೆ. ಇಂದು ಬೇಬಿಯಕ್ಕ ಎಂದರೇ ಕೇವಲ ಒಬ್ಬ ಮಹಿಳೆಯಲ್ಲ, 5 – 6 ಸಾವಿರಕ್ಕೂ ಅಧಿಕ ಮಹಿಳಾ ಮೀನುಗಾರರು ಬೆನ್ನಿಗಿರುವ ನಾಯಕಿಯಾಗಿದ್ದಾರೆ.
  ಸುಮಾರು 40 ವರ್ಷಗಳ ಹಿಂದೆ ತನ್ನ ದೊಡ್ಡಮ್ಮ ತಲೆ ಮೇಲೆ ಮೀನು ಬುಟ್ಟಿ ಹೊತ್ತುಕೊಂಡು ಮನೆಮನಗೆ ಹೋಗಿ ಮೀನು ಮಾರುತಿದ್ದಾಗ, ಆಗಿನ್ನೂ ಲಂಗದಾವಣಿ ತೊಟ್ಟ ಬಾಲಕಿ ಬೇಬಿ  ಅವರ ಜೊತೆ ಹೋಗುತಿದ್ದರು. ಒಂದು ದಿನ ಅವರ ದೊಡ್ಡಮ್ಮ, ಬಂದರಿನಲ್ಲಿ ಬುಟ್ಟಿ ತುಂಬಾ ಮೀನು ಖರೀದಿಸಿ, ಅದನ್ನೂ ಊರೂರು ತಿರುಗಿ ಮಾರುವುದಕ್ಕೆ ಮೊದಲು ಅದರಲ್ಲಿ ಐಸ್ ತುಂಡು ಹಾಕಬೇಕು ಹೋದಾಗ ಮೇಲಿನಿಂದ ಆಕಸ್ಮಿಕವಾಗಿ ದೊಡ್ಡದೊಂಡು ಐಸ್ ತುಂಡೊಂದು ಅವರ ತಲೆ ಮೇಲೆ ಬಿತ್ತು, ಅವರು ಶಾಶ್ವತವಾಗಿ ಮೀನಿನ ವ್ಯಾಪಾರವನ್ನು ನಿಲ್ಲಿಸಿದರು. ಆಗ ದೊಡ್ಡಮ್ಮ ಕೆಳಗಿಟ್ಟ ತುಂಬಿದ ಮೀನಿನ ಬುಟ್ಟಿಯನ್ನು ತಲೆಗೇರಿಸಿಕೊಂಡ ಬೇಬಿಗೆ ಅಗಿನ್ನೂ ಬಾಲ್ಯ ಕಳೆದು ಹದಿಹರೆಯ.
 ಹೀಗೆ ಬೇಬಿ ಸಾಲ್ಯಾನ್ 4 ದಶಕಗಳ ಹಿಂದೆ ಶುರು ಮಾಡಿದ ಮೀನು ಮಾರುವ ಕಾಯಕ, 2 ಸಾವಿರ ಮೀನುಗಾರ ಮಹಿಳಾ ಸದಸ್ಯರ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದರೂ ಬಿಟ್ಟಿಲ್ಲ.  ಹಿಂದೆಲ್ಲಾ ಮೀನುಗಾರರದ್ದು ಆಯಾದಿನ ಮೀನು ಹಿಡಿದು ಮಾರಿದರೇ ಆಯಾದಿನ ಉಣ್ಣುವುದಕ್ಕಿ ರುತಿತ್ತು. ಪ್ರತಿದಿನವೂ ತಲೆ ಮೇಲೆ ಮಣಭಾರದ ಬುಟ್ಟಿ ಹೊತ್ತು ಬೀದಿಬೀದಿ ಸುತ್ತಿ,  ಮನೆಮನೆ ತಿರುಗಿ ಮೀನು ಮಾರಬೇಕಾಗಿತ್ತು. 
ಈ ಕಷ್ಟವನ್ನು ಕಣ್ಣುಬಿಟ್ಟಾಗಿಂದಲೂ ನೋಡಿ, ಅನುಭವಿಸಿ ಅರಿತಿದ್ದ ಬೇಬಿ ಅವರಿಗೆ, ಈ ಮಹಿಳೆ ಯರ ಕಷ್ಟಗಳಿಗೊಂದು ಪರಿಹಾರ ಕಂಡುಕೊಳ್ಳಬೇಕು ಎಂದುಕೊಂಡರು. ಅದಕ್ಕಾಗಿ ಮೈಲು ಗಟ್ಟಲೇ ತಲೆಮೇಲೆ ಮೀನಿನ ಬುಟ್ಟಿ ಹೊರುವ, ಮಳೆಬಿಸಿಲು ಎನ್ನದೇ ರಸ್ತೆ ಬದಿ – ಮರದಡಿಯಲ್ಲಿ ಮೀನು ಮಾರುವ ಮಹಿಳೆಯರನ್ನು ಕಂಡು ಅವರ ಕಷ್ಣಸುಖಗಳನ್ನು ಕೇಳಿದರು, ಅವರನ್ನೆಲ್ಲಾ ಸಂಘಟಿಸಿದರು.
 ಹೀಗೆ 2010ರಲ್ಲಿ ಮಹಿಳಾ ಮೀನು ಮಾರಾಟಗಾರರ ಸಂಘ ಅಸ್ತಿತ್ವಕ್ಕೆ ಬಂತು, ಸಹಜ ವಾಗಿಯೇ ಅವರನ್ನೇ ಎಲ್ಲರೂ ಅದ್ಯಕ್ಷರನ್ನಾಗಿ ಆರಿಸಿದರು. ಅಲ್ಲಲ್ಲಿ ರಸ್ತೆ ಪಕ್ಕದಲ್ಲಿ, ಪರಸ್ಪರ ಸ್ಪರ್ಧಯಲ್ಲಿ ಜಗಳವಾಡುತ್ತಾ ಬೈದಾಡುತ್ತಾ ಮೀನು ಮಾರುತ್ತಿದ್ದವರ ಮನವೊಲಿಸಿ, ಎಲ್ಲರೂ ಒಂದು ಕಡೇ ಮರದಡಿಯಲ್ಲಿ, ಸೌಹಾರ್ದದಿಂದ ಬೆಲೆ ನಿಗದಿ ಮಾಡಿ, ವ್ಯಾಪಾರ ಮಾಡುವಂತೆ ಸೂಚಿಸಿದರು, ಅದು ಯಶಸ್ವಿಯೂ ಆಯಿತು.
ಆದರೇ ಮಳೆಗಾಲದಲ್ಲಿ ಮರದಡಿಯಲ್ಲಿ ಮೀನು ಮಾರುವುದು ಕಷ್ಟವಾದಾಗ ಜನಪ್ರತಿನಿಧಿಗಳಿಗೆ ದಂಬಾಲು ಬಿದ್ದು, ಮಾರುಕಟ್ಟೆ ಎಂಬ ಸೂರು ಸಿಗುವಂತೆ ಮಾಡಿದರು, ಶೀಟು ತಗಡಿನ ಈ ಮಾರುಕಟ್ಟೆಗಳಲ್ಲಿ ನೀರು, ಶೌಚಾಲಯ, ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು, ಅದಕ್ಕೆ ಮಾರ್ಕೆಟ್ ರೂಪ ನೀಡಿದರು. ಇಂದು ಉಡುಪಿ ನಗರ ಮತ್ತು ಸುತ್ತಮುತ್ತ ಬೇಬಿಯಕ್ಕ ಸೂರೆರೇರಿಸಿದ 35ಕ್ಕೂ ಹೆಚ್ಚು ಮಾರ್ಕೆಟ್ ಗಳಿವೆ.
 
ಇಷ್ಟಾದರೂ ಬೇಬಿಯಕ್ಕನಿಗೆ ಸಮಧಾನವಾಗಲಿಲ್ಲ, ಸಮಾಜದ ಬೇರೆ ವರ್ಗದ ಮಹಿಳೆಯರ ಕೈಯಲ್ಲಿ ಸಾಕಷ್ಟು ಹಣ ಓಡಾಡುವ ಕಾಲ ಬಂದಿತ್ತಾದರೂ, ಕಷ್ಟಜೀವಿಗಳಾದ ಮೀನುಗಾರರ ಮಹಿಳೆಯರ ಸ್ಥಿತಿ ಅಷ್ಟೇನೂ ಸುಧಾರಿಸಿರಲಿಲ್ಲ, ಮನೆಯಲ್ಲಿ ಮದುವೆ ಬಯಕೆ ಎಂದರೇ ಸಾಲ ಮಾಡುವುದು ತಪ್ಪುತಿರಲಿಲ್ಲ.
ಅದಕ್ಕಾಗಿ ಈ ಮಹಿಳೆಯರು ಸಂಪಾದಿಸಿದ ಹಣದಲ್ಲಿ ಒಂದಂಶವನ್ನು ಉಳಿತಾಯ ಮಾಡಬೇಕು ಎನ್ನುವುದನ್ನು ಯೋಚಿಸಿದ ಬೇಬಿಯಕ್ಕ ಅದಕ್ಕಾಗಿಯೇ ಹುಟ್ಟು ಹಾಕಿದ್ದು ಮಹಿಳಾ ಮೀನು ಮಾರಾಟಗಾರರ ವಿವಿಧೋದ್ಧೇಶ ಸಹಕಾರಿ ಸಂಘ. ಇದು ಇಂದು ಮೀನುಗಾರ ಮಹಿಳೆಯರ ಮನೆಯ ಪರಿಸ್ಥಿತಿಯನ್ನು ಬಹಳ ಆಧರಿಸಿದೆ.
 
ತನ್ನಂತೆ, ಬಡತನದ ಕಾರಣಕ್ಕೆ ಯಾರೂ ವಿದ್ಯೆಯಿಂದ ವಂಚಿತರಾಗಬಾರದು ಎಂಬ ಕಳಕಳಿ ಯಿಂದ ಸಂಘದ ಮೂಲಕ ಸದಸ್ಯೆಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಿಸಿದರು, ಒಂದಲ್ಲ ಒಂದು ಅನಾರೋಗ್ಯ ಸಾಮಾನ್ಯವಾಗಿರುವ ಮೀನುಗಾರರಿಗಾಗಿಯೇ ಆರೋಗ್ಯ ನಿಧಿ ಆರಂಭಿಸಿ ಹಣದ ಸಹಾಯ ಮಾಡಿದರು, ಕಟ್ಟಾ ದೈವ ಭಕ್ತರಾಗಿರುವ ಮೀನುಗಾರರ ದೈವ – ದೇವಸ್ಥಾನ ಗಳಿಗೆ ದೇಣಿಗೆ ವಿತರಿಸಿದರು.
 
ಎರಡ್ಮೂರು ವರ್ಷಗಳ ಹಿಂದೆ ಉಡುಪಿಯಲ್ಲಿ ಮೀನು ಮಾರಾಟ ಅಂಗಡಿಗಳು ಆರಂಭಕ್ಕೆ ಅನುಮತಿ ಸಿಕ್ಕಿದಾಗ, ನೂರಾರು ಮೀನುಗಾರ ಮಹಿಳೆಯರು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾದಾಗ, ಈ ಮಹಿಳೆಯರನ್ನು ಸಂಘಟಿಸಿ ಈ ಅಂಗಡಿಗಳನ್ನು ಮುಚ್ಚಿಸುವಲ್ಲಿ ಬೇಬಿಯಕ್ಕ ವಹಿಸಿದ್ದ ಪಾತ್ರ ನಿರ್ಣಾಯಕವಾಗಿತ್ತು.
ಮೀನು ಮಾರಾಟ, ಸಂಘಟನೆ, ಸಹಕಾರಿ ಸಂಘ ಇತ್ಯಾದಿಗಳ ಬಗ್ಗೆ ಗುಜರಾತ್, ಚೆನ್ನೈ, ಮುಂಬೈ ಇತ್ಯಾದಿ ನಾನಾ ಕಡೆಗಳಲ್ಲಿ ನಡೆಯುವ ತರಬೇತಿ ಕಾರ್ಯಾಗಾರಗಳಲ್ಲಿ ಬೇಬಿಯಕ್ಕ ಮತ್ತು ಇತರ ಸದಸ್ಯರು ಭಾಗವಹಿಸಿದ್ದಾರೆ, ಅಲ್ಲಿ ಪಡೆದ ಜ್ಞಾನವನ್ನು ಇಲ್ಲಿ ಬಂದು ಇತರರಿಗೆ ಹಂಚುತ್ತಾರೆ.
 
ತನ್ನಿಬ್ಬರು ಮಕ್ಕಳನ್ನು ಮಾತ್ರವಲ್ಲವೇ ತನ್ನ ಸಂಬಂಧಿಕರ ಇಬ್ಬರು ಹೆಣ್ಣುಮಕ್ಕಳನ್ನು ತಾನೇ ಸಾಕಿ ಓದಿಸಿ ಒಳ್ಳೆಯ ಜೀವನಕ್ಕೆ ಅನುವು ಮಾಡಿದ್ದಾರೆ. ಬೇಬಿಯಕ್ಕನ ಹೋರಾಟದ ಫಲವಾಗಿ ಉಡುಪಿ ಯಲ್ಲಿ ದೇಶದಲ್ಲಿಯೇ ಪ್ರಥಮ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆ ನಿರ್ಮಾಣವಾಗಿದೆ.
ಮೃದು ಮಾತಿನ ಆದರೇ ಗಟ್ಟಿ ಮನಸ್ಸಿನ ಬೇಬಿಯಕ್ಕ ಇವತ್ತಿಗೂ ಬೆಳಿಗ್ಗೆ 4 ಗಂಟೆಗೆ ಎಓದ್ದು ಮನೆಯಲ್ಲಿ ಗಂಡಮಕ್ಕಳಿಗೆ ಅಡುಗೆ ಕೆಲಸಗಳನ್ನೆಲ್ಲಾ ಪೂರೈಸಿ, ಮಲ್ಪೆ ಬಂದರಿಗೆ ಹೋಗಿ, ಹರಾಜಿನಲ್ಲಿ ಮೀನು ಖರೀದಿಸಿ, ಉಡುಪಿಯ ಹೈಟೆಕ್ ಮಾರುಕಟ್ಟೆಯಲ್ಲಿ ಯಾವ ಹಮ್ಮುಬಿಮ್ಮು ಇಲ್ಲದೇ, ಎಂದಿನಂತೆ ಕಿಲಕಿಲ ನಗುನಗತ್ತಾ ಮೀನು ಮಾರಾಟ ಮಾಡುತ್ತಿದ್ದಾರೆ.
ಇಷ್ಟೆಲ್ಲಾ ಕಷ್ಟನಷ್ಟ, ಹೋರಾಟ, ಸಾಧನೆಗಳ ಪ್ರತಿರೂಪ ಬೇಬಿಯಕ್ಕನಿಗೆ ಇಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ರೈತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಯಿತು.  ರಾಜ್ಯದ ಇಂತಹ 15 ಮಂದಿ ಸಾಧಕರಿಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಪ್ರದಾನ ಸಂಪಾದಕ ರವಿ ಹೆಗಡೆ ಅವರು ಈ ಪ್ರಶಸ್ತಿಯನ್ನು ನೀಡಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕುಂಜಾರುಗಿರಿಯ ಗಿರಿಬಳಗ (ರಿ) ಇದರ 32ನೆಯ ವಾರ್ಷಿಕೋತ್ಸವ

ಕುಂಜಾರುಗಿರಿಯ ಗಿರಿಬಳಗ (ರಿ) ನ 32ನೆಯ ವಾರ್ಷಿಕೋತ್ಸವವು ಕುಂಜಾರುಗುರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಭೆಯಲ್ಲಿ ಭಾಗವಹಿಸಿ, ಇಂದಿನ ಮಕ್ಕಳು ಜೀವನದಲ್ಲಿ ದಾರಿ ತಪ್ಪುತ್ತಿರುವುದು ಬೇಸರದ...

ಮಾಸ್ಟರ್ ಪ್ಲಾನ್ ಗೆ ವೇಗ, ಜನಸ್ನೇಹಿ ಆಡಳಿತಕ್ಕೆ ನಿರ್ಧಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಿರ್ಣಯ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಕೋವಿಡ್ ಕಾರಣದಿಂದ ವಿಳಂಬವಾಗುತ್ತಿರುವ ಮಾಸ್ಟರ್ ಪ್ಲಾನಿಗೆ ವೇಗ ನೀಡಲು, ಸಾರ್ವಜನಿಕರಿಗೆ ತಮ್ಮ ಅರ್ಜಿ ಸ್ಥಿತಿಗತಿ ಮಾಹಿತಿ ನೀಡುವ ನೂತನ ಸಾಫ್ಟವೇರ್ , ಪ್ರಾಧಿಕಾ ರದ ವ್ಯಾಪ್ತಿಯಲ್ಲಿ...

ವಿಪ್ರ ಸಂಘಟನೆಗಳು ಆಶಕ್ತರು, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ~ ವಾಸುದೇವ ಅಡೂರು

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯು ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನ ದಲ್ಲಿ ಜರುಗಿತು. ಎಸ್ ಎಸ್ ಎಲ್ ಸಿ, ಪಿ ಯು ಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮುಖ್ಯ ಅತಿಥಿ...

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ 

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ (93 ವ.)  ಶನಿವಾರ ದಂದು ನಿಧನರಾಗಿರುತ್ತಾರೆ. ಇವರು ಸ್ವಾತಂ​ತ್ರ್ಯ ಹೋರಾಟಗಾರ ದಿ| ಕುರ್ಕಾಲು ಗಣಪಯ್ಯ ಶೆಟ್ಟರ ಮಗಳು, ಮೂಳೂರು ಬೈಲುಮನೆ ಶತಾಯುಷಿ ದಿ| ಬಾಬು ಶೆಟ್ಟಿಯವರ...
error: Content is protected !!