ಸಂಸ್ಕೃತ ಶಬ್ದೋಚ್ಚಾರಣ ಮಾತ್ರದಿಂದಲೇ ಪುಣ್ಯಸಂಚಯ​~ ಪುತ್ತಿಗೆಶ್ರೀ 

ಭಾವಿ ಪರ್ಯಾಯ ಮಠಾಧೀಶರಾದ ಪುತ್ತಿಗೆ ಮಠದ ಶ್ರೀ ಶ್ರೀಸುಗುಣೇಂದ್ರತೀರ್ಥಶ್ರೀಪಾದರು ಶ್ರೀಮನ್ಮಧ್ವಸಿದ್ದಾಂತಪ್ರಬೋಧಕಸಂಸ್ಕೃತ ಕಾಲೇಜಿಗೆ ಚಿತ್ತೈಸಿ, ಕಾಲೇಜಿನ ವತಿಯಿಂದ ನೀಡಿದ ಅಭಿವಂದನೆಯನ್ನು ಸ್ವೀಕರಿಸಿ ಆಶೀರ್ವದಿಸಿದರು.

ಸಂಶ್ಕೃತವು ಒಂದು ದಿವ್ಯಭಾಷೆಯಾಗಿದೆ. ಇತರಭಾಷೆಗಳಲ್ಲಿ ಇಲ್ಲದ ಒಂದು ವಿಶೇಷತೆ ಸಂಸ್ಕೃತ ಕ್ಕಿದೆ. “ಏಕಃ ಶಬ್ದಃ ಸುಷ್ಠು ಪ್ರಯುಕ್ತಃ ಸ್ವರ್ಗೇ ಲೋಕೇ ಕಾಮದುಗ್ಭವತಿ” ಎಂಬ ಶಾಸ್ತ್ರದ ಮಾತಿನಂತೆ ನಿರ್ದುಷ್ಟವಾದ ಓಂದು ಸಂಸ್ಕೃತ ಶಬ್ದಪ್ರಯೋಗದಿಂದ ಅಲೌಕಿಕವಾದ ಸುಖದ ಪ್ರಾಪ್ತಿಯಾಗುತ್ತದೆ. ಹಾಗಾದರೆ ಲೌಕಿಕ ಇಷ್ಟಾರ್ಥಗಳು ಖಂಡಿತವಾಗಿಯೂ ಪ್ರಾಪ್ತವಾಗುವುದು. ಅತಂಹಾ ಪುಣ್ಯ ಸಂಸ್ಕೃತ ಭಾಷೆಯಿಂದ ಸಿಗುವುದು. ಎಂದು ಅಭಿವಂದನೆಯನ್ನು ಸ್ವೀಕರಿಸಿ ಆಶೀರ್ವದಿಸಿದರು.

ಸದ್ಯೋ ಭವಿಷ್ಯದಲ್ಲಿ ದೇಶದಲ್ಲಿ ಸಂಸ್ಕೃತಕ್ಕೆ ಮಹತ್ತ್ವ ಮಗದೊಮ್ಮೆ ಮರುಕಳಿಸಲಿದೆ. ವಿದೇಶಗಳಲ್ಲೂ ಸಂಸ್ಕೃತಕ್ಕೆ ಅಪಾರವಾದ ಮನ್ನಣೆಯಿದೆ. ಅಂತಹಾ ಪ್ರತಿಭಾವಂತ ಸಮ್ಸ್ಕೃತ ವಿದ್ವಾಂಸರನ್ನು ನಿರ್ಮಾಣ ಮಾಡುವ ಕೆಲಸ ನಮ್ಮಿಂದಾಗಬೇಕಿದೆ.

ಅದಕ್ಕಾಗಿ ಮುಂದಿನ ಪರ್ಯಾಯಾವಧಿಯಲ್ಲಿ  ಉಡುಪಿಯ ಸಂಸ್ಕೃತ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸಂಪೂರ್ಣ ಸಹಕಾರವನ್ನು ನೀಡಲಾಗುವುದು. ಉಡುಪಿಯ ಸಂಸ್ಕೃತ ಮಹಾವಿದ್ಯಾಲಯ ಶ್ರೀಕೃಷ್ಣಮಠದ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ತಮ್ಮದೇ ಪರ್ಯಾಯ, ತಮ್ಮದೇ ಕೃಷ್ಣಪೂಜೆ ಎಂಬ ದೃಷ್ಠಿಯಿಂದ ಎಲ್ಲರೂ ಸಹಕಾರವನ್ನು ನೀಡಬೇಕು ಎಂದು ಆಶಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಸತ್ಯನಾರಾಯಣ ವಿ. ರಾವ್ ಮತ್ತು ಎಸ್.ಎಮ್.ಎಸ್.ಪಿ. ಸಭಾ ದ ಕೋಶಾಧಿಕಾರಿಗಳಾದ ಶ್ರೀಯುತ ಚಂದ್ರ ಶೇಖರ ಆಚಾರ್ಯರು ಶ್ರಿಪಾದರನ್ನು ಫಲಪುಷ್ಪಗಳನ್ನಿತ್ತು ಅಭಿವಂದಪತ್ರವನ್ನು ನೀಡಿ ಅಭಿವಂದಿಸಿದರು. ಪ್ರೋ. ಸತ್ಯನಾರಾಯಣ ವಿ. ರಾವ್  ಅಭವಂದನಾ ಪತ್ರವನ್ನು ವಾಚಿಸಿದರು.​ ಇದೇ ವೇಳೆ ಪ್ರೌಢಶಾಲಾವತಿಯಿಂದಲೂ ಶ್ರೀಪಾದರನ್ನು ಗೌರವಿಸಲಾಯಿತು.

   ವಿದ್ಯಾರ್ಥಿಗಳಾದ ಭಾರ್ಗವ ನಾರಾಯಣ ಮತ್ತು ವಿನಯ ವೇದಘೋಷದೊಂದಿಗೆ ಪ್ರಾರ್ಥಿಸಿದರು. ಡಾ.ಷಣ್ಮುಖ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕ ರಾದ  ವಿದ್ವಾನ್ ಗಣಪತಿ ಭಟ್ಟ ಧನ್ಯವಾದವನ್ನು ಸಮರ್ಪಿಸಿದರು. ಉಪನ್ಯಾಸಕರಾದ  ವಿದ್ವಾನ್    ಅನಿಲ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.

ಇದೆ ಸಂದರ್ಭದಲ್ಲಿ ಕಾಲೇಜಿನ ಎಳುದಿನದ ಎನ್ನೆಸ್ಸೆಸ್ ಶಿಬಿರವನ್ನು ಧ್ವಜಾರೋಹಣ ನಡೆಸುವ ಮೂಲಕ ಮತ್ತು ದೀಪಬೆಳಗುವ ಮೂಲಕ ಉದ್ಘಾಟಿಸಿದರು.

ಶಿಬಿರವು “ಸಪ್ತೊತ್ಸವ” ದೃಷ್ಟಿಕೋನದಲ್ಲಿ ನಡೆಯಲಿದೆ. ಸಂಚಲನೋತ್ಸವ, ಜ್ಞಾನೋತ್ಸವ, ಅಕ್ಷರೋತ್ಸವ, ಗೀತೋತ್ಸವ, ನೃತ್ಯೋತ್ಸವ ಮತ್ತು ಸೇವೋತ್ಸವ ಎಂದು ಎಳು ರೀತಿಯಲ್ಲಿ ನಡೆಯಲಿದೆ. ಅಕ್ಷರೋತ್ಸವ ದಲ್ಲಿ ಮೂರುದಿನ ತುಳುಲಿಪಿ ಕಾರ‍್ಯಾಗಾರ ನಡೆಯಲಿದೆ.  ವಿಶೇಷಶೈಲಿಯ ರಂಗವಲ್ಲೀ ತರಬೇತಿ ನೀಡ ಲಾಗುವುದು ಎಂದು  ಕಾಲೇಜಿನ ಎನ್ನೆಸ್ಸೆಸ್ ಸಂಯೋಜನಾಧಿಕಾರಿಗಳಾದ ಡಾ. ರಾಧಾಕೃಷ್ಣ ಅವರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply