Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

​ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ- “ಭವನಂ ಸನ್ನಿದಾನಂ”ಗೆ ಕರೆ..

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ ಇದರ  ಕಾರ್ಯಕಾರಿಣಿ ಸಭೆಯು ದಿನಾಂಕ ಆದಿತ್ಯವಾರ ದಂದು ಕೊಡವೂರು ಶ್ರೀ ಶಿರ್ಡಿ ಸಾಯಿ ಬಾಬಾ ಮಂದಿರದಲ್ಲಿ ಜಿಲ್ಲಾಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಗೌರವಧ್ಯಕ್ಷ ಹರಿಯಪ್ಪ ಕೋಟ್ಯಾನ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಸಂಪತ್ ಕುಮಾರ್ ಇವರ ಉಪಸ್ಥಿತಿಯಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ ಶಬರಿಮಲೆ ತೀರ್ಥಯತ್ರೆ ಕೈಗೊಳ್ಳುವ ವಿಚಾರದ ಬಗ್ಗೆ ಚರ್ಚಿಸಲಾಯಿತು​.​ ಶಬರಿಮಲೆಯಲ್ಲಿ ಮಾಲಾದಾರಿಗಳಿಗೆ ಸರಿಯಾದ ವ್ಯವಸ್ಥೆ ಗಳು ಇಲ್ಲದೆ ಇರುವುದರಿಂದ ಎಲ್ಲಾ ವಲಯದ ಪದಾಧಿಕಾರಿಗಳ ಒಕ್ಕೊರಲ ಅಭಿಪ್ರಾಯದಂತೆ​,​  ಈ ಬಾರಿ ಶಬರಿಮಲೆ ಯಾತ್ರೆ ಮಾಡುವುದರ ಬದಲಾಗಿ ತಮ್ಮ ತಮ್ಮ ಮನೆಗಳಲ್ಲಿ ಅಯ್ಯಪ್ಪ ವ್ರತವನ್ನು ಪಾಲಿಸುವ ಮೂಲಕ ಸಾಸ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಧಾರ “ಭವನಂ  ಸನ್ನಿದಾನಂ” ಗೆ ತಮ್ಮ ಸಹಮತವನ್ನು ಸೂಚಿಸಲಾಯಿತು ಹಾಗೂ ಹೊಸ ಸದಸ್ಯರನ್ನು ಸಮಿತಿಗೆ ಸೇರಿಸಿ ಕೊಳ್ಳಲಾಯಿತು

ಈ ಸಂದರ್ಭದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಉಪಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ರಾಜ್ಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಶಿಂತ್ರೆ, ಉಡುಪಿ ಜಿಲ್ಲಾ ಕಾರ್ಯಧ್ಯಕ್ಷ  ಬಾಲಕೃಷ್ಣ ಅಮೀನ್, ಪ್ರಮುಖರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ರೀಶ ಕೊಡವೂರ್​,​ ವಿಜಯ ಕೊಡವೂರ್, ಸಾಸ್  ಇದರ ವಿವಿಧ ತಾಲ್ಲೂಕು ಮತ್ತು ಜಿಲ್ಲಾ  ವಲಯಗಳ ಅಧ್ಯಕ್ಷರು/ ಪದಾಧಿಕಾರಿಗಳು ಹಾಜರಿದ್ದರು.

ಕೊಡವೂರು ಶಿರ್ಡಿ ಶ್ರೀ ಸಾಯಿ ಬಾಬಾ ಮಂದಿರದ ಧರ್ಮದರ್ಶಿ ತೋಟದ ಮನೆ ದಿವಾಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ರಂಜಿತ್ ಸ್ವಾಗತಿಸಿದರು.  ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ವಂದಿಸಿದರು. ಪಾಂಡುರಂಗ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!