ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಲಕ್ಷ್ಮೀ ಪೂಜೆ

ದೀಪಾವಳಿಯು “ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನ” ಎಂಬುದನ್ನು ಸೂಚಿಸುತ್ತದೆ. 14 ವರ್ಷಗಳ ವನವಾಸದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ಸಂದರ್ಭವನ್ನು ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತದೆ. 

ರಾಮನು ವನವಾಸದಿಂದ ಹಿಂದಿರುಗಿದಾಗ, ಅಯೋಧ್ಯೆಯ ಜನರು ತುಪ್ಪದ ದೀಪಗಳನ್ನು ಬೆಳಗಿಸುವ ಮೂಲಕ ಅಮವಾಸ್ಯೆಯ ಕತ್ತಲನ್ನು ದೂರಮಾಡಿದರು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ದೀಪಾವಳಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಅಷ್ಟೇ ಅಲ್ಲ, ದೀಪಾವಳಿಯಂದು ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸಿದರೆ, ಆಕೆ ಪ್ರಸನ್ನಳಾಗಿ, ಸಂಪತ್ತನ್ನು ಸುರಿಸುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದ್ದು, ಮನೆಮನೆಗಳಲ್ಲಿ, ಪ್ರತಿ ಅಂಗಡಿ-ಮುಂಗಟ್ಟುಗಳಲ್ಲೂ ಲಕ್ಷ್ಮಿ ಪೂಜೆ ಮಾಡುತ್ತಾರೆ.

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಲಕ್ಷ್ಮೀ ಪೂಜೆ, ಹಾಗೂ ವಾಹನ ಪೂಜೆ ಮಾಡಿ ಸರ್ವ ಸದಸ್ಯರಿಗೂ, ಅಭಿಮಾನಿಗಳಿಗೂ ಸಿಹಿ ಹಂಚಿದರು. 

ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಗೌರವಾಧ್ಯಕ್ಷ ಜನಾರ್ದನ್ ಕೊಡವೂರು, ಗೌರವ ಸಲಹೆಗಾರ ಕೃಷ್ಣ ಶೆಟ್ಟಿಬೆಟ್ಟು, ಸವಿತಾ ನೋಟಗಾರ್, ಉಪಾಧ್ಯಕ್ಷರಾದ ಲಕ್ಷ್ಮಣ ಕೋಲ್ಕಾರ್, ಈರಪ್ಪ ಗೌಂಡಿ, ಬಸವರಾಜ್ ಐಹೊಳೆ,ಮಹೇಶ್ ಗುಂಡಿಬೈಲ್ , ಶರಣಪ್ಪ ಬಾರ್ಕರ್, ಕುಮಾರ್ ಪ್ರಸಾದ್, ವಿಠ್ಠಲ್, ಹನುಮಂತರಾಯ ಪೂಜಾರಿ, ಶರಣು ತಳಹಳ್ಳಿ, ನಾಗಲಿಂಗಯ್ಯ ಕರಕಳ್ಳಿಮಠ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply