ತುಳುಭಾಷೆಗೆ ಅದರದ್ದೇ ಆದ ಮೇರು ಗೌರವ, ಘನತೆ ಇದೆ. ತುಳುಭಾಷೆಯು ಸಾವಿರಾರು ವರ್ಷಗಳ ಇತಿಹಾಸ ವನ್ನು ಹೊಂದಿದೆ. ತುಳುಭಾಷೆಗೆ ಇರುವ ಲಿಪಿಯು ಇನ್ನು ಅನೇಕರಿಗೆ ತಿಳಿದಿಲ್ಲ.ಈ ದೃಷ್ಟಿಯಲ್ಲಿ ಯುವ ತುಳು ಶಿಕ್ಷಕರಾದ ಉಷಾ ಎನ್ ಪೂಜಾರಿ, ರಾಕೇಶ್ ಪೂಜಾರಿ ತುಳುವೆ, ಉಜ್ವಲ ಎನ್ ಪೂಜಾರಿ, ದೀಪಾಶ್ರೀ ಪೂಜಾರಿ, ವಿಜಯ್ ವಿಕ್ಕಿ ಪೂಜಾರಿ ಇವರುಗಳು ತಮ್ಮ ಉದ್ಯೋಗ, ಶಿಕ್ಷಣದ ನಡುವೆ ತುಳುಲಿಪಿಯನ್ನು ಉಚಿತವಾಗಿ ” ಬಲೆ ತುಳುಲಿಪಿ ಕಲ್ಪುಗ” (Tulu Script Free Learning Class) ಕಾರ್ಯಗಾರವನ್ನು ಆಯೋಜಿಸಿದ್ದರು.
ಮಲ್ಪೆಯಲ್ಲಿ “ಬಲೆ ತುಳುಲಿಪಿ ಕಲ್ಪುಗ” ಕಾರ್ಯಾಗಾರ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಬಿಲ್ಲವ ಸಮಾಜ ಸೇವಾ ಸಂಘ(ರಿ) ಮಲ್ಪೆ, ಜೈ ತುಳುನಾಡ್(ರಿ.) ಇವರುಗಳ ಕೂಡುವಿಕೆಯಲ್ಲಿ ಮಲ್ಪೆಯ ನಾರಾಯಣ ಗುರು ಸಮುದಾಯ ಭವನದಲ್ಲಿ ಪ್ರತಿ ಭಾನುವಾರ 25/10, 01/11/, 08/11/2020 ರಂದು ಸಂಪನ್ನಗೊಂಡಿತು
ವಯಸ್ಸಿನ ಧರ್ಮದ ಭೇದ ಭಾವವಿಲ್ಲದೆ ಎಲ್ಲಾ ಜನರು ಭಾಗಿಯಾಗಿ ಈ ಕಾರ್ಯಕ್ರಮದ ಸದುಪಯೋಗ ಪಡೆದರು. ದಿನಾಂಕ 22/11/2020 ರಂದು ಕೊನೆಯ ತುಳು ಲಿಪಿ ತರಗತಿ ನಡೆಯಲಿದ್ದು ತಾವೆಲ್ಲರು ಬರಬೇಕು.
- Advertisement -