Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಇಂದು ಶ್ರೀಪರಶುರಾಮ ದೇವರ ಜಯಂತಿ ಹಾಗೂ ಅಕ್ಷಯ ತೃತೀಯ ಹಬ್ಬ – ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,ಆನೇಕಲ್

ಭೂಭಾರ ಏರಲಿಕ್ಕೆ ಕಾರಣೀಭೂತರಾದ ದುಷ್ಟ ಕ್ಷತ್ರಿಯರನ್ನು ಸದೆ ಬಡೆಯಲು ಹಾಗೂ ಶ್ರೀರಾಮಚಂದ್ರ ಪ್ರಭುವಿಗಿಂತ ಮೊದಲೇ ಪಿತೃವಾಕ್ಯ ಪರಿಪಾಲನೆ ಮಾಡಲು ಶ್ರೀಹರಿ ಧರೆಯಲ್ಲವತರಿಸಿದ ದಿನವಿದು.

ತಂದೆಯ ಮಾತನ್ನು ಪಾಲಿಸಲು ತಾಯಿಯ ಶಿರಸ್ಸನ್ನು ಕಡಿದು, ತಂದೆಯ ಅನುಗ್ರಹಕ್ಕೆ ಪಾತ್ರರಾಗಿ ತಾಯಿಯನ್ನು ಮರಳಿ ಬದುಕಿಸಿದ ಮಹಾವೀರರು ಪರಶುರಾಮ ದೇವರು.

ಇಂತಹ ಮಹಾನುಭಾವರು ಜನರನ್ನು ಕಾಡುತ್ತಿರುವ ಮಹಾಮಾರಿ ಕೊರೋನವನ್ನು ನಿವಾರಿಸಿ ಪ್ರಜೆಗಳಿಗೆ ಸಂತಸವೀಯಲಿ. ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಹಾಗೂ ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಸುಖ ಸಂತೋಷ ತರಲಿ ಎಂದು ಬೇಡೋಣ.

ಅಂಗಾರವರ್ಣಮಭಿತೋಂಡಬಹಿ: ಪ್ರಭಾಭಿರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಂ | ಧ್ಯಾಯೇದಜೇಶಪುರುಹೂತಮುಖೈಸ್ತುವದ್ಭಿರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||

ಶ್ರೀಪರಶುರಾಮಾಯ ನಮಃ….

ಹಾಗೆಯೇ ಅಕ್ಷಯ ತದಿಗೆ ದಿನವಾದ ಕಾರಣ ವಿಶೇಷ ಆಚರಣೆ ನಡೆಸಿ. ಅಕ್ಷಯ ತದಿಗೆಯಂದು ಮಾಡಿದ ಒಳ್ಳೆಯ ಕೆಲಸಗಳಿಂದ ಬರುವ ಪುಣ್ಯ ಅಕ್ಷಯವಾಗುತ್ತದೆ ಎಂಬುದು ಶಾಸ್ತ್ರ ವಿಧಿತ.

ಆದರೆ ಯಾವ ಕೆಲಸ ಒಳಿತು ಯಾವ ಕಾರ್ಯ ಅಕ್ಷಯವಾಗುತ್ತದೆ ಎಂಬುದು ಅರಿತು ಮಾಡಿದರೆ ಒಳಿತು. ಈ ದಿನ ಬೆಳ್ಳಿ, ಬಂಗಾರ ಖರೀದಿಸಿದರೆ ಅದು ಅಕ್ಷಯ ಆಗುವುದಿಲ್ಲ. ಈ ರೀತಿ ಅಕ್ಷಯ ಆಗುವಂತಿದ್ದರೆ ಸಾಕಷ್ಟು ಮಂದಿ ಈ ದಿನ ಮದುವೆಯಾಗಿ ಪ…….ಅಕ್ಷಯ ಮಾಡಿಕೊಳ್ಳುತ್ತಿದ್ದರು. 

ಈ ದಿನ ನಾವು ಮಾಡುವ ದಾನ ಮತ್ತಿತರ ಪುಣ್ಯಕಾರ್ಯಗಳಿಂದ ಬರುವ ಪುಣ್ಯ ಮಾತ್ರವೇ ಅಕ್ಷಯವಾಗುತ್ತದೆ. ಹಣವಿದ್ದವರು ಬೇಕಿದ್ದರೆ ಬೆಳ್ಳಿ ಬಂಗಾರ ಖರೀದಿಸಿ. ಮನವಿದ್ದವರು ಕಷ್ಟದಲ್ಲಿರುವವರಿಗೆ ದಾನ ಧರ್ಮ ಮಾಡುವ ಮೂಲಕ ನೆರವಾಗಿ. ಇಂತಹ ಪುಣ್ಯ ಅಕ್ಷಯವಾಗುತ್ತದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!