ಪಂಚ ಮಂತ್ರಿಗಳ ಜವಾಬ್ಧಾರಿ ಸೂತ್ರ ಯಶಸ್ಸಿನತ್ತ..ಬಿಎಸ್ ವೈ ಮೇಲುಗೈ

 ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ರಿಂದ ಹಲವಾರು ಜವಾಬ್ದಾರಿಗಳನ್ನು ಕಿತ್ತುಕೊಂಡ ಒಂದು ಹಂತದಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತದೆ ವರದಿಗಳು.

ಕೊರೊನಾದಿಂದ ದಿನನಿತ್ಯ ನೂರಾರು ಸಾವುಗಳು, ಸಾವಿರಾರು ಕೋರೋನಾ ಪ್ರಕರಣಗಳಿಂದ ಬೇಸತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುಧಾಕರ್ ಅವರ ಬಳಿ ಇದ್ದ ಹಲವಾರು ಜವಾಬ್ದಾರಿಗಳನ್ನು ಬೇರೆಯವರಿಗೆ ಹಂಚಿದ್ದರು.

ಕೋವಿಡ್ ನಿಯಂತ್ರಣದ ಹೊಸ ಜವಾಬ್ದಾರಿಯನ್ನು ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಬೊಮ್ಮಾಯಿ, ಆರ್ ಅಶೋಕ್, ಅಶ್ವಥನಾರಾಯಣ ಈ ರೀತಿ ಪಂಚ ಮಂತ್ರಿಗಳಿಗೆ ಹಂಚಿಕೆ ಮಾಡಿದ್ದರು. ಕಳೆದ ಒಂದು ವಾರಗಳಿಂದ ಈ ಮಂತ್ರಿಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಆಂತರಿಕ ವರದಿಗಳು ತಿಳಿಸುತ್ತವೆ.

ಇದರಿಂದ ಒಂದು ಹಂತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಹಾಗೂ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎನ್ನುತ್ತವೆ ವರದಿಗಳು.ಒಂದು ವರದಿಯ ಪ್ರಕಾರ ಇದು ಯಶಸ್ವಿಯಾಗಿದೆ. ಸುಧಾಕರ್ ಎಲ್ಲವನ್ನು ನಿರ್ವಹಿಸುವ ಸಂದರ್ಭದಲ್ಲಿ ಒಂದು ಹಂತದಲ್ಲಿ ಹಾದಿ ತಪ್ಪಿದ ರೀತಿಯಲ್ಲಿ ಅನಿಸಿದ ಕೋವಿಡ್ ಈಗ ನಿಯಂತ್ರಣಕ್ಕೆ ಬರುತ್ತಿರುವ ಹಾಗೆ ತೋರುತ್ತದೆ.

ಈ ಪಂಚ ಮಂತ್ರಿಗಳ ಕೊಡುಗೆ ಬಹಳಷ್ಟು ಇದೆ ಎಂಬುದು ಆಂತರಿಕ ವರದಿಗಳು ಮಾಹಿತಿ ನೀಡಿದೆ. ಎಲ್ಲಾ ಕೆಲಸಗಳನ್ನು ಸುಧಾಕರ್ ಸರಿಯಾಗಿ ನಿರ್ವಹಿಸದೇ ರಾಜ್ಯದ ಕೋರೋನಾ ಪರಿಸ್ಥಿತಿ ನಿಯಂತ್ರಣ ತಪ್ಪುವಂತೆ ಮಾಡಿದ್ದಾರೆ ಎಂಬು ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದ್ದವು.

 
 
 
 
 
 
 
 
 

Leave a Reply