Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಉಡುಪಿಯ ಪೊಲೀಸ್ ಲೈನ್ ಶ್ರೀ ಮೂಕಾಂಭಿಕಾ ಭಜನಾ ಮಂದಿರದಲ್ಲಿ ಮಹಿಳೆಯರಿಗೆ ಉಚಿತ ಭಜನಾ ತರಬೇತಿ ಕೇಂದ್ರ ಉದ್ಘಾಟನೆ

 ಮಹಿಳೆಯರಿಗೆ ಉಚಿತ ಭಜನಾ ತರಬೇತಿ ಕೇಂದ್ರ ಉದ್ಘಾಟನೆ
 ಉಡುಪಿ: ಶ್ರೀ ಮಹಾಮಾಯಿ ಭಜನಾ ಮಂಡಳಿ ಈಶ್ವರ ನಗರ ಮಣಿಪಾಲ ಇದರ ಅಧ್ಯಕ್ಷರಾದ ಶ್ರೀಮತಿ ಮಾಯಾ ಕಾಮತ್ ರವರ ಮಾರ್ಗದರ್ಶನದಲ್ಲಿ  ಉಚಿತವಾಗಿ ಶ್ರೀ ಮೂಕಾಂಭಿಕಾ ಭಜನಾ ಮಂದಿರ ಪೊಲೀಸ್ ಲೈನ್ ಉಡುಪಿಯಲ್ಲಿ ಶುಕ್ರವಾರ ರಾತ್ರಿ ಭಜನಾ ತರಬೇತಿ ಕೇಂದ್ರ ಉದ್ಘಾಟನೆಯಾಯಿತು. 
ರಾಮ ಕ್ಷತ್ರಿಯ ಯುವ ಸಂಘ ಉಡುಪಿ ನಗರ ಘಟಕದ ಅಧ್ಯಕ್ಷ ಸೂರ್ಯಕುಮಾರ್ ದೀಪ ಬೆಳಗಿಸಿ ಚಾಲನೆ ನೀಡಿದರು. ಮೂಕಾಂಭಿಕಾ ಭಜನಾ ಮಂದಿರದ  ಉಪಾಧ್ಯಕ್ಷ ರಾಮಕೃಷ್ಣ , ಕಾರ್ಯದರ್ಶಿ ರಾಘವೇಂದ್ರ ರಾವ್, ಪ್ರಚಾರ ಸಮಿತಿ ಗೋಪಾಲಕೃಷ್ಣ , ಪ್ರಕಾಶ ಸುವರ್ಣ ಕಟಪಾಡಿ, ಮಹಾಮಾಯಿ ಭಜನಾ ಮಂಡಳಿ ಸ್ಥಾಪಕರಾದ ಮೋಹಿನಿ ಭಟ್, ರಾಮ ಕ್ಷತ್ರಿಯ ಯುವ ಸಂಘ ಉಡುಪಿ ಗೌರವ ಅಧ್ಯಕ್ಷ ಸತೀಶ್ಚಂದ್ರ, ಕಾರ್ಯದರ್ಶಿ ಗುರುಪ್ರಸಾದ್, ರಮ್ಯಾ ಮಲ್ಯ ಉಪಸ್ಥಿತರಿದ್ದರು 
ಮಾಯಾ ಕಾಮತ್ ರವರ ಮಾರ್ಗದರ್ಶನದಲ್ಲಿ  ಮಹಿಳೆಯರಿಗೆ /  ಮಕ್ಕಳಿಗೆ ಉಚಿತ ಭಜನಾ ತರಬೇತಿ ಕಾರ್ಯಕ್ರಮ ನೆಡೆಸಲಾಯಿತು. ಬಳಿಕ ಮಂಡಳಿ ವತಿಯಿಂದ ಮಾಯಾರವರನ್ನು ಗೌರವವಿಸಲಾಯಿತು. ಪೊಲೀಸ್ ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳು ಉಪ​​​ಸ್ಥಿತರಿದ್ದರು.  
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!