ತನು ಮನವ ಅರಳಿಸುವ ಸುಮ/Click: Dr Vyasaraja Thantry

ತನು ಮನವ ಅರಳಿಸುವ ಸುಮ

ಹೂವೆ ನಿನ್ನ ಪ್ರಾಧಾನ್ಯತೆಯ ಎನಿತು ಬಣ್ಣಿಸಲಿ ನಾನು
ನೋಡ ನೋಡುತಲೆ ಪಕಳೆಗಳ ಬಿರಿದು ಅರಳುತ ನಗುತಲಿರುವೆ ನೀನು​​

ಒಮ್ಮೆ ನೀನಿರುವೆ ಭಗವಂತನ ಚರಣದಲಿ

ಮತ್ತೊಮ್ಮೆ ಶೋಭಿಸುವೆ ಹೆಣ್ಣಿನ ಮುಡಿಯಲಿ ​.. ​


ಮಗದೊಮ್ಮೆ ಕಾಣಿಸುವೆ ಗೃಹದ ಹೊಸ್ತಿಲು ದ್ವಾರದಲಿ

ಇನ್ನೊಮ್ಮೆ ಆಕರ್ಷಿಸುವೆ ಮದುವೆ ಮಂಟಪದಲಿ ​.. ​

ಮತ್ತಿನ್ನೊಮ್ಮೆ ಕಂಗೊಳಿಸುವೆ ಸಮಾರಂಭಗಳ ವೇದಿಕೆಯಲಿ

ಮಗದಿನ್ನೊಮ್ಮೆ ಕಣ್ಣು ಮಿಟುಕಿಸುತಲಿರುವೆ ಮಹಾನ್ ವ್ಯಕ್ತಿಗಳ ಕರ ಕಿಸೆಯಲಿ ​… 

ನೀನಿಲ್ಲದ ಜಾಗವುಂಟೆ ಭುವಿಯಲಿ
ರಾಣಿಯಂತೆ ರಾರಾಜಿಸುತಲಿರುವೆ ನೀನು ಎಲ್ಲಿ ನೋಡಿದರಲ್ಲಿ​… 

ಹುಟ್ಟಿನಿಂದ ಮರಣದ ತನಕದ ಕಾಯಕಕೆ ಜೊತೆಯಾಗುವೆ
ದುಕಿನ ಸಂತಸದ ಕ್ಷಣಕೆ, ದು:ಖದ ಚಣಕೆ ಸಾಕ್ಷಿಯಾಗುವೆ ​.. 

ನಿನ್ನ ಸೌಂದರ್ಯಕೆ ನಿನ್ನ ಆಹ್ಲಾದಕೆ ಇಲ್ಲ ಯಾರಿಂದಲೂ ಪೈಪೋಟಿ
ನಿನ್ನ ಅಂದಕೆ ನಿನ್ನ ಚೆಂದಕೆ ನೀನೇ ಸರಿಸಾಟಿ​ .. ​

ನೀನೆಂದರೆ ಭಗವಂತನಿಗೆ ಸಂಪ್ರೀತಿ
ಭಕ್ತನಿಗೆ ಭಕ್ತಿಯ ಅನುಭೂತಿ​.. 

ವನಿತೆಯರ ಜೊತೆಗಾತಿ, ಕವಿಗಳಿಗೆ ಸ್ಫೂರ್ತಿ
ಸಕಲರಿಗೂ ನೀನೆಂದರೆ ಬಲುಪ್ರೀತಿ​.. 

 

 
 
 
 
 
 
 
 
 
 
 

Leave a Reply