ಪೇಜಾವರ ಶ್ರೀ -60,  ನ.18 : ಉಡುಪಿಯಲ್ಲಿ ಗುರುವಂದನ ಪೂರ್ವಭಾವಿ ಸಭೆ

ಅಯೋಧ್ಯೆ ರಾಮಂಮದಿರ ಟ್ರಸ್ಟ್ ನ ವಿಶ್ವಸ್ಥರಾಗಿ ಇಡೀ ಉಡುಪಿಗೇ ಹೆಮ್ಮೆ ತಂದಿರುವ ಶ್ರೀ ಪೇಜಾವರ ಮಠಾಧೀಶಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಇದೀಗ ಸಾರ್ಥಕ ಜೀವನದ 60 ರ ಸಂಭ್ರಮ . ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನ್ವರ್ಥ ಶಿಷ್ಯರಾಗಿ ಅವರು ಹಾಕಿ ಕೊಟ್ಟ ಮಾರ್ಗದಲ್ಲೇ ಹೆಜ್ಜೆ ಹಾಕುತ್ತಾ ಗೋಸೇವೆ , ವೇದಶಾಸ್ತ್ರಾಧ್ಯಯನ ಅಧ್ಯಾಪನ , ಶಿಕ್ಷಣ ಆರೋಗ್ಯ ದೀನಜನ ಶುಶ್ರೂಷೆ , ಧರ್ಮರಕ್ಷಣೆಯೇ‌ ಮೊದಲಾದ ಬಹುಮುಖಿ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಾ , ನಿರಂತರ ದೇಶ ಸಂಚಾರದ ಮೂಲಕ ಜನರಲ್ಲಿ ರಾಮಭಕ್ತಿ ದೇಶಭಕ್ತಿಯ ಜಾಗೃತಿ ಮೂಡಿಸುತ್ತಿರುವ ಶ್ರೀಪಾದರ ಷಷ್ಠ್ಯಬ್ದಿ ಮಹೋತ್ಸವದ ಪ್ರಯುಕ್ತ ಅವರನ್ನು ಅಭಿವಂದಿಸುವುದು ಕೇವಲ ಅವರ ಶಿಷ್ಯರು ಭಕ್ತರು ಅಭಿಮಾನಿಗಳಿಗೆ ಮಾತ್ರವಲ್ಲದೇ ಉಡುಪಿಯ ಜನತೆಗೇ ಒದಗಿದ ಒಂದು ಭಾಗ್ಯ.

ಈ ಕಾರ್ಯಕ್ರಮವನ್ನು ಜಿಲ್ಲೆಯ ಸಮಸ್ತ ನಾಗರಿಕರ ಸಹಕಾರ ಸಹಯೋಗವನ್ನು ಪಡೆದು ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸಂಕಲ್ಪಿಸಲಾಗಿದೆ . ಈ ಉದ್ದೇಶಕ್ಕಾಗಿ ಇದೇ ಬರುವ ನವಂಬರ್ 18 ಶನಿವಾರ ಸಂಜೆ 5.30 ಕ್ಕೆ ಉಡುಪಿ ಅಜ್ಜರಕಾಡಿನ ಶ್ರೀ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಯನ್ನು ಕರೆಯಲಾಗಿದೆ .

ಇದರಲ್ಲಿ ಶ್ರೀ ಪೇಜಾವರ ಮಠದ , ಶ್ರೀಗಳವರ ಅಭಿಮಾನಿಗಳು , ಭಕ್ತರು , ವಿದ್ವಾಂಸರು , ದೇವಸ್ಥಾನಗಳ ಧರ್ಮದರ್ಶಿಗಳು , ಜನಪ್ರತಿನಿಧಿಗಳು , ರಾಜಕೀಯ ಪಕ್ಷಗಳ ಮುಖಂಡರು , ಉದ್ಯಮಿಗಳು , ಭಜನಾ ಮಂಡಳಿ , ಹಿಂದು ಸಂಘಟನೆಗಳು , ವಿವಿಧ ಸಮಾಜ ಸೇವಾ ಸಂಸ್ಥೆಗಳು , ಜಾತಿ ಸಮುದಾಯಗಳ ಪ್ರತಿನಿಧಿಗಳು ಹಾಗೂ ಸಮಾನ‌ಮನಸ್ಕರು ಭಾಗವಹಿಸಿ ಸಲಹೆ ಸೂಚನೆಗಳನ್ನಿತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ವಿನಂತಿಸಿದ್ದಾರೆ .

 
 
 
 
 
 
 
 
 
 
 

Leave a Reply