ಕಾಪು ತಾಲೂಕು ಕಸಾಪ ಅಧ್ಯಕ್ಷರಾಗಿ ಬಿ.ಪುಂಡಲೀಕ ಮರಾಠೆ ಶಿರ್ವ

ಶಿರ್ವ:-ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ೨೦೨೨ -೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ, ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆಯವರನ್ನು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರವರ ಶಿಪಾರಾಸಿನ ಮೇರೆಗೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿಯವರು ನೇಮಕ ಮಾಡಿದ್ದಾರೆ.

ನೂತನವಾಗಿ ಘೋಷಣೆಗೊಂಡ ಕಾಪು ತಾಲೂಕಿಗೆ ಪ್ರಥಮ ಅಧ್ಯಕ್ಷರಾಗಿ ನಿಯುಕ್ತಿಗೊಂಡು, ಎರಡುವರೆ ವರ್ಷಗಳ ಸೀಮಿತ ಸೇವಾವಧಿಯಲ್ಲಿ ಕುತ್ಯಾರು, ಮೂಡುಬೆಳ್ಳೆ ಹಾಗೂ ಪಡುಬಿದ್ರಿ ಸೇರಿದಂತೆ  ಹಿರಿಯ ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಕೆ.ಎಲ್.ಕುಂಡoತಾಯ, ಭರತ್‌ಕುಮಾರ್ ಪೊಲಿಪು ಇವರುಗಳ ಸರ್ವಾಧ್ಯಕ್ಷತೆಯಲ್ಲಿ ಮೂರು ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದಲ್ಲದೆ, ಹಿರಿಯರೆಡೆಗೆ ಸಾಹಿತ್ಯದ ನಡಿಗೆ, ಶಾಲೆಯತ್ತ ಸಾಹಿತ್ಯ, ದತ್ತಿಉಪನ್ಯಾಸ, ಪುಸ್ತಕ ಬಿಡುಗಡೆ, ಕನ್ನಡ ನಾಡು ನುಡಿ,ಸಾಹಿತ್ಯ ಸಂಸ್ಕೃತಿ, ಜನಪದಕ್ಕೆ ಸಂಬAಧಸಿದAತೆ ನವೆಂಬರ್ ತಿಂಗಳಲ್ಲಿ ತಿಂಗಳ ಸಡಗರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಸಂಘಟಿಸಿದ್ದಾರೆ.
 ಇವರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸೇವಾಕ್ಷೇತ್ರದಲ್ಲಿ ಸಕ್ರೀಯರಾಗಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಭಾರತೀಯ ಜೇಸೀಸ್, ರೋಟರ‍್ಯಾಕ್ಟ್, ರೋಟರಿ, ಸ್ಥಳೀಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರು, ಭಾರತ ಸೇವಾದಳದ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರು, ಅಂತಾರಾಷ್ಟ್ರೀಯ ರೋಟರಿಯ ಜಿಲ್ಲಾ ಸಮಿತಿಯಲ್ಲಿ ಸಭಾಪತಿಗಳಾಗಿದ್ದಾರೆ.
 
 
 
 
 
 
 
 
 
 
 

Leave a Reply