ಶ್ರೀಕಾಂತ್ ಶೆಟ್ಟಿಯವರ “ಯಹೂದಿ” ಎಂಬ ಕೃತಿ ಬಿಡುಗಡೆ

ಇಸ್ರೇಲ್ ಕುರಿತಾಗಿ ಶ್ರೀಕಾಂತ್ ಶೆಟ್ಟಿ ಬರೆದಿರುವ ಬರಹಗಳ ಸಂಗ್ರಹ “ಯಹೂದಿ” ಎಂಬ ಕೃತಿಯ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಇಸ್ರೇಲ್ ದೇಶವನ್ನು ಪುನರ್ ರಚಿಸಿದ ಯಹೂದಿಗಳು  ಮತ್ತು ಭಾರತದ ಹಿಂದೂ ಸಮಾಜದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. 

ಭಾರತವನ್ನು ಸರ್ವತೋಭದ್ರವಾಗಿ ಕಟ್ಟಿ ಬೆಳೆಸುವಲ್ಲಿ ಇಸ್ರೇಲ್ ಮಾರ್ಗದರ್ಶಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಈ ಕೃತಿ.

ಲಾಹೋರ್ ವರೆಗೆ ಭಾರತೀಯ ಸೇನೆಯನ್ನು ನುಗ್ಗಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವಾದ ಅಕ್ಟೋಬರ್ 2 ನೇ ತಾರೀಖಿನಂದು ಈ ಕೃತಿ ಲೋಕಾರ್ಪಣೆ ಗೊಳ್ಳಲಿದೆ. ಇದು ಶೆಟ್ಟಿಯವರ ಎರಡನೇ ಕೃತಿಯಾಗಿದ್ದು ಅಗ್ರಣಿ ಪ್ರಕಾಶನವು ಮುದ್ರಿಸಿರುವ ಮೂರನೇ ಪುಸ್ತಕ ವಾಗಿರುತ್ತದೆ. 

ಈ ಪುಸ್ತಕದ ಬೆಲೆ  ರೂ : 300/ ಮತ್ತು ಅಂಚೆ ವೆಚ್ಚವನ್ನು  ಕೆಳಗೆ ನೀಡಲಾಗಿರುವ ಗೂಗಲ್ ಪೇ ಸಂಖ್ಯೆಗೆ ಕಳುಹಿಸಿದರೆ  ನಿಗದಿತ ಅವಧಿಯಲ್ಲಿ ಕೃತಿಯು ತಮ್ಮ ಕೈ ಸೇರುತ್ತದೆ. (ಗೂಗಲ್ ಪೇ ಸಂಖ್ಯೆ: 8105721648 -Shashikanth shetty)

 

 
 
 
 
 
 
 
 
 
 
 

Leave a Reply