ಕರ್ನಾಟಕ ಬ್ಯಾಂಕ್: ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರಕ್ಕೆ ಅನುದಾನ ಬಿಡುಗಡೆ

ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರ, ಉಡುಪಿಗೆ, ಕರ್ನಾಟಕ ಬ್ಯಾಂಕಿನ ಸಿಎಸ್‌ಆರ್ ಅನುದಾನ ಬ್ಯಾಂಕಿನ ‘ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ’ ಅಡಿಯಲ್ಲಿ (ಸಿ ಎಸ್ ಆರ್), ಕರ್ನಾಟಕ ಬ್ಯಾಂಕಿನ ಮುಖ್ಯಸ್ಥರೂ, ಆಡಳಿತ ನಿರ್ದೇಶಕರಾದ ಶ್ರೀ ಮಹಾಬಲೇಶ್ವರ ಇವರು, ಉಡುಪಿಯ ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರಕ್ಕೆ ಅನುದಾನ ಬಿಡುಗಡೆಗೊಳಿಸಿದ್ದಾರೆ.

ಕರ್ನಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಪ್ರಮುಖರಾದ ಶ್ರೀ ರಾಜಗೋಪಾಲರು, ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಅನುದಾನ ಪತ್ರ ಸಮರ್ಪಿಸಿ, ಬ್ಯಾಂಕಿನ ಸಾಂಸ್ಥಿಕ, ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ನಡೆಯುವ ಚಟುವಟಿಕೆಗಳ ಬಗೆಗೆ ತಿಳಿಸಿದರು.

ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ, ಡಾ. ಕೃಷ್ಣಕೊತಾಯ ಮಾತನಾಡಿ, ಬ್ಯಾಂಕಿನ ಅನುದಾನವನ್ನು ಪ್ರಮುಖವಾಗಿ ಉತ್ತರ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ‘ಮಹಿಳಾ ಸಬಲೀಕರಣ ಕಾರ್ಯಕ್ರಮ’ಗಳಿಗೆ
ಬಳಸಲಾಗುವುದೆಂದರು. ಬ್ಯಾಂಕಿನ ಮುಖ್ಯಸ್ಥರು ಹಾಗೂ ಸಂಬoಧಿತ ಇತರರಿಗೆ ಅವರು ಅನುದಾನಕ್ಕಾಗಿ ಆಭಾರ ಸಲ್ಲಿಸಿದರು. ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟಿನ ಗೌರವ ಕೋಶಾಧಿಕಾರಿ ಸಿ.ಎ. ಪ್ರಶಾಂತ ಹೊಳ್ಳ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ, ಉಪ ಪ್ರಾಂಶುಪಾಲ ಡಾ. ಪ್ರಕಾಶ್
ರಾವ್, ಕರ್ನಾಟಕ ಬ್ಯಾಂಕಿನ ಶಾಖಾ ಪ್ರಬಂಧಕ ಶ್ರೀ ರಾಘವೇಂದ್ರ ತoತ್ರಿ, ಸಂಸ್ಕçತ ವಿಭಾಗದ ಮುಖ್ಯಸ್ಥ ಡಾ. ರಮೇಶ್, ಕ್ಷೇಮಾಭಿವೃದ್ಧಿ ಅಧಿಕಾರಿ ಶ್ರೀಮತಿ ಜಯಲಕ್ಷಿ÷್ಮ, ಪ್ರಾಧ್ಯಪಕ ವೃಂದ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply