ಮದುವೆ ಕ್ಯಾನ್ಸಲ್ ಯಾಕೆ ಗೊತ್ತಾ ~ ವರನಿಗೆ ಹಣ ಎಣಿಸಲು ಬರೋದಿಲ್ವಂತೆ 

ಮದುವೆಗೆ ಎಲ್ಲಾ ಸಿದ್ಧತೆ ಪೂರ್ಣಗೊಂಡು ವೇದಿಕೆಯಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಅನ್ನೋವಾಗ ವಿವಾಹ ಮುರಿದುಬಿದ್ದಿರುವಂತಹ ಅನೇಕ ಘಟನೆಗಳು ನಡೆದಿವೆ. ಇದೀಗ ಇಂಥದ್ದೇ ಘಟನೆಯಲ್ಲಿ ವರನಿಗೆ 10 ರೂ.ಗಳ ನೋಟು ಎಣಿಸಲು ಬಾರದಿದ್ದಕ್ಕೆ ಮದುವೆ ಮುರಿದು ಬಿದ್ದಿದೆ. ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ಘಟನೆ ನಡೆದಿದೆ. ವರನಿಗೆ 10 ರೂ.ಗಳ ನೋಟು ಎಣಿಸಲು ಬರುತ್ತಿಲ್ಲ ಎಂಬ ಕಾರಣ ನೀಡಿ 21 ವರ್ಷದ ವಧು ಮದುವೆಯನ್ನು ತಿರಸ್ಕರಿಸಿದ್ದಾಳೆ. 

ಮದುವೆಯ ವಿಧಿವಿಧಾನದ ವೇಳೆ ಈ ಆಘಾತಕಾರಿ ಸಂಗತಿ ಬಹಿರಂಗಗೊಂಡಿದೆ. ಪುರೋಹಿತರು ವರನ ವರ್ತನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ವಧುವಿನ ಮನೆಯವರಿಗೆ ತಿಳಿಸಿದ್ದಾರೆ. ಈ ವೇಳೆ ವಧು ರೀಟಾ ಸಿಂಗ್, ತಕ್ಷಣವೇ ವೇದಿಕೆಯಿಂದ ಹೊರನಡೆದಿದ್ದಾಳೆ. ಮದುವೆಯ ದಿನದವರೆಗೂ 23 ವರ್ಷದ ವರ ಮಾನಸಿಕವಾಗಿ ದುರ್ಬಲ ಎಂದು ತಿಳಿದಿರಲಿಲ್ಲ ಎಂದು ವಧುವಿನ ಕುಟುಂಬ ಹೇಳಿಕೊಂಡಿದೆ. 

ವರನ ವಿಚಿತ್ರ ವರ್ತನೆಯ ಬಗ್ಗೆ ಅರ್ಚಕರು ನಮಗೆ ಹೇಳಿದಾಗ, ನಾವು ಪರೀಕ್ಷೆಯನ್ನು ನಡೆಸಲು ನಿರ್ಧರಿ ಸಿದೆವು. ಹೀಗಾಗಿ 10 ರೂ.ಗಳ 30 ಕರೆನ್ಸಿ ನೋಟುಗಳನ್ನು ನೀಡಿದ್ದೇವೆ. ಆದರೆ, ಆತನಿಗೆ ನೋಟು ಎಣಿಸಲು ಸಾಧ್ಯವಾಗಿಲ್ಲ. ಇದನ್ನು ಗಮನಿಸಿದ ಕೂಡಲೇ ವಧು ರೀಟಾ ಮದುವೆಯಾಗಲು ನಿರಾಕರಿಸಿದಳು ಎಂದು ಸಹೋದರ ಮಾಹಿತಿ ನೀಡಿದ್ದಾರೆ.

ವಧು ಮದುವೆಯನ್ನು ರದ್ದುಗೊಳಿಸಿದ ನಂತರ, ಎರಡು ಕುಟುಂಬಗಳ ನಡುವೆ ತೀವ್ರ ವಾಗ್ವಾದ ಪ್ರಾರಂಭ ವಾಯಿತು. ಈ ವಿಷಯ ಪೊಲೀಸರವರೆಗೆ ತಲುಪಿತು. ಅವರು ಮಧ್ಯಸ್ಥಿಕೆಗೆ ಪ್ರಯತ್ನಿಸಿದರೂ ಪ್ರಯೋಜನ ವಾಗಿಲ್ಲ. ಹೀಗಾಗಿ ಮದುವೆಯನ್ನು ರದ್ದುಗೊಳಿಸಬೇಕಾಯಿತು.

 
 
 
 
 
 
 
 
 
 
 

Leave a Reply