ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಸಂಗೀತ ಹಾಗೂ ಭರತನಾಟ್ಯ ತರಬೇತಿ ಆರಂಭ

ಸಾಲಿಗ್ರಾಮ : ಜೇಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ ಆಶ್ರಯದಲ್ಲಿ ಭಾನುವಾರ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಸಂಗೀತ ಹಾಗೂ ಭರತನಾಟ್ಯ ತರಬೇತಿ ತರಗತಿಯನ್ನು ” ಕಲಾಚಿಗುರು ” ಸಂಸ್ಥೆಯ ಮೂಲಕ ಪ್ರಾರಂಭಿಸಲಾಯಿತು.

ಸ್ಥಳೀಯ ಆಸಕ್ತರಿಗೆ ಸಂಗೀತ ಹಾಗೂ ಭರತನಾಟ್ಯ ವನ್ನು ಕಲಿಸುವ ಹಾಗೂ ವೇದಿಕೆಯನ್ನು ರೂಪಿಸಿಕೊಡುವ ಉದ್ದೇಶದಿಂದ ತರಬೇತಿ ಪ್ರಾರಂಭಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಕೀಲ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆಯ ಆಡಳಿತ ಮಂಡಳಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕೊತ್ತಾಡಿ, ವೇದಮೂರ್ತಿ ರಾಘವೇಂದ್ರ ಭಟ್ಟ ಬನ್ನಾಡಿ ಹಾಗೂ ಆಗುಂಬೆ ಹೋಟೆಲ್ ಗಣೇಶ ಗ್ರ್ಯಾಂಡ್ ನ ಮಾಲಕ ವಡ್ಡರ್ಸೆ ಗುರುರಾಜ ಅಡಿಗ ಶುಭ ಹಾರೈಸಿದರು.

ವಡ್ಡರ್ಸೆ ಜೇಸಿಐ ನ ಅಧ್ಯಕ್ಷ ಜೇಸಿ ಸತೀಶ್ ವಡ್ಡರ್ಸೆ ಅವರು ಭರತನಾಟ್ಯ ಹಾಗೂ ಸಂಗೀತದ ಮಹತ್ವವನ್ನು ತಿಳಿಸಿ ಹೇಳಿದರು. ಭರತನಾಟ್ಯ ಶಿಕ್ಷಕಿ ಸ್ಮಿತಾ ಕೆ ಶಾಸ್ತ್ರೀ ಹಾಗೂ ಸಂಗೀತ ಶಿಕ್ಷಕಿ ಶ್ರೀರಕ್ಷಾ ಎಸ್ ಅಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೇಸಿಐ ನ ಸದಸ್ಯರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply