ಬದುಕನ್ನು ಬೆಳಗಿಸುವ ದೀಪ “ಭಗವದ್ಗೀತಾ”

ಶ್ರೀಕೃಷ್ಣನು ಕರುಣಿಸಿದ ಅಮೃತಮಯವಾದ ಭಗವದ್ಗೀತೆಯು ನಮ್ಮ ಬದುಕನ್ನು ಬೆಳಗಿಸುವ ದೀಪವಾಗಿದೆ. ನೊಂದ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಗ್ರಂಥವಾಗಿದೆ. ನಮ್ಮ ದೇಶದ ಶ್ರೇಷ್ಠ ಗ್ರಂಥವಾದ ಈ ಗೀತೆಯನ್ನು ಬರೆದು ಓದುವುದರಿಂದ ಅನಂತ ಪುಣ್ಯವನ್ನೂ ಪಡೆಯಬಹುದು ಎಂದು ವಿದ್ವಾನ್ ಬಿ.ಗೋಪಾಲಾಚಾರ್ಯರು ತಿಳಿಸಿದರು.
ಉಡುಪಿಯ ತುಳುಶಿವಳ್ಳಿ ಮಾಧ್ವಮಂಡಳದ ಪ್ರಾಯೋಜಕತ್ವದಲ್ಲಿ ಕೊಡವೂರಿನ ಶ್ರೀಕೃಷ್ಣ ವೃದ್ಧರ ಆಶ್ರಯಧಾಮದಲ್ಲಿ ಆಯೋಜಿಸಿದ್ದ ಕೋಟಿಗೀತಾಲೇಖನ ಯಜ್ಞ ದೀಕ್ಷಾ‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದೇಶವನ್ನು ನೀಡಿದರು.

ಈ ಸಮಾರಂಭದಲ್ಲಿ ತುಶೀಮಾಮ ದ ಅಧ್ಯಕ್ಷರಾದ ಶ್ರೀರವಿಪ್ರಕಾಶ್ ಭಟ್, ಪದಾಧಿಕಾರಿಗಳಾದ ಜಯರಾಮ ಆಚಾರ್ಯ, ರವೀಂದ್ರ ಆಚಾರ್ಯ, ಕೃಷ್ಣಮೂರ್ತಿ ರಾವ್, ಪ್ರಾಯೋಜಕರಾದ ಶ್ರೀಮಂಜುನಾಥ ರಾವ್,ರಮಾಕಾಂತ್ ಭಟ್,ವಿಜಯ ಆರ್ ಭಟ್, ಶ್ಯಾಮಲಕ್ಕ, ವಿವೇಕಾನಂದ ಪಾಂಗಣ್ಣಾಯ, ಸುಬ್ರಹ್ಮಣ್ಯ ಭಟ್. ಮುಂತಾದವರು ಉಪಸ್ಥಿತರಿದ್ದರು.

ಆಶ್ರಮದ ಮುಖ್ಯಸ್ಥರಾದ ಶ್ರೀಕೃಷ್ಣಮೂರ್ತಿ ಆಚಾರ್ಯ, ಇವರು ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಮುಖ್ಯಸ್ಥರಿಗೆ ಗೌರವ ಸ್ಮರಣಿಕೆಯೊಂದಿಗೆ ಸತ್ಕರಿಸಿದರು.

 
 
 
 
 
 
 
 
 
 
 

Leave a Reply