ನಮ್ಮನೆ ಮಗು~ಛಾಯಾಚಿತ್ರ ಸ್ಪರ್ಧೆ

ರೋಟರಿ ಬ್ರಹ್ಮಾವರ RI Dist 3182 ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಆಯೋಜನೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಫೋಟೋ ಸ್ಪರ್ಧೆ
“ನಮ್ಮನೆ ಮಗು” ಎಂಬ ವಿನೂತನ ಸ್ಪರ್ಧೆಯನ್ನ ಹಮ್ಮಿಕೊಳ್ಳಲಾಗಿದೆ…
ಸ್ಪರ್ಧೆ ಹೇಗೆ : ಆರು ತಿಂಗಳಿನಿಂದ ಐದು ವರ್ಷದ ಒಳಗಿನ ನಿಮ್ಮ ಮಗುವಿನ ಒಂದು ಫೋಟೋವನ್ನು 9 1 6 4 5 7 3 0 7 4 ನಂಬರ್ ಗೆ ವಾಟ್ಸಪ್ ಮಾಡುವುದು, ಫೋಟೋ ಕಳಿಸುವಾಗ ಮಗುವಿನ ಹೆಸರು, ವಯಸ್ಸು,ತಂದೆಯ ಹೆಸರು,ತಾಯಿ ಹೆಸರು ಮತ್ತು ಊರು ಯಾವುದೆಂದು ದಾಖಲಿಸಿ.

ಬಹುಮಾನ : ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ
ಪ್ರಥಮ 5000/-
ದ್ವಿತೀಯ:3000/-
ತೃತೀಯ :1500/-
ಹಾಗೂ ಹಾಗೂ ಪ್ರತಿ ವಿಭಾಗದಿಂದ ಅಂದರೆ 0.6-1 ವರ್ಷದ ಒಳಗೆ,1ರಿಂದ -2ವರ್ಷ, 2ರಿಂದ – ವರ್ಷ 3ರಿಂದ4 ವರ್ಷ, ಮತ್ತು 4ರಿಂದ -5ವರ್ಷ ದ ಒಳಗಿನ ಮೆಚ್ಚುಗೆ ಗಳಿಸಿದ ಫೋಟೋಗೆ ತಲಾ 1000/- ದಂತೆ 5 ಬಹುಮಾನಗಳಿವೆ.

ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಬಹುಮಾನ
ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆ ಮಾಡಿದ ಫೋಟೋಗಳಿಗೆ ನಗದು ಬಹುಮಾನಗಳ ಜೊತೆಗೆ..
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ಪುಟಾಣಿಗೂ ಗಣ್ಯರಿಂದ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ. ನೀವು ಕಳುಹಿಸಿದ ಫೋಟೋ ವನ್ನು ನಾವೇ ಪ್ರಿಂಟ್ ತೆಗೆದು ಲ್ಯಾಮೀನೇಶನ್ ಮಾಡಿ, ಅದಕ್ಕೊಂದು ಚಂದದ ಪ್ರೇಮ್ ಹಾಕಿ ಆ ಫೋಟೋವನ್ನ ಬಹುಮಾನವಾಗಿ ನೀಡಲಿದ್ದೇವೆ

ಸಮಾರಂಭ ಮತ್ತು ಬಹುಮಾನ ವಿತರಣೆ
ಬ್ರಹ್ಮಾವರದ ರೋಟರಿ ಭವನದಲ್ಲಿ ನವೆಂಬರ್ 13ನೇ ತಾರೀಕು ಆದಿತ್ಯವಾರ ಸಂಜೆ 3:30ಕ್ಕೆ ಸರಳ ಸುಂದರ ಸಮಾರಂಭದಲ್ಲಿ ನಿಮ್ಮ ಮಕ್ಕಳೊಂದಿಗೆ ನಾವು ಮಕ್ಕಳ ದಿನಾಚರಣೆಯನ್ನು ಆಚರಿಸಿ ಆ ಸಂದರ್ಭದಲ್ಲಿ ಬಹುಮಾನವನ್ನ ನೀಡಲಿದ್ದೇವೆ,

ಪ್ರವೇಶ ಶುಲ್ಕ :
ಸ್ಪರ್ಧೆಯ ಗಂಭೀರತೆ ಮತ್ತು ಗುಣಮಟ್ಟದ ದೃಷ್ಟಿಯಿಂದ ನೂರು ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ, ಪೋಸ್ಟರ್ ನಲ್ಲಿರುವ QR ಕೋಡನ್ನ ಸ್ಕ್ಯಾನ್ ಮಾಡಬಹುದು ಅಥವಾ 9164573074 ಗೆ ಜಿಪೇ ಅಥವಾ ಫೋನ್ ಪೇ ಮಾಡಬಹುದು,

ವಿಶೇಷ ಸೂಚನೆ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ)ದಕ್ಷಿಣ ಕನ್ನಡ ಉಡುಪಿ ಜಿಲ್ಲೆ,
ಈ ಸಂಘಟನೆಯ ಸದಸ್ಯರಾಗಿರುವ ಮತ್ತು ಈ ವರ್ಷವೂ ರಿನಿವಲ್ ಮಾಡಿರುವ ಫೋಟೋಗ್ರಾಫರ್ಸ್ ಗಳು ತೆಗೆದಿರುವ ಫೋಟೋಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ, ಫೋಟೋ ದೊಂದಿಗೆ ಅವರ ಹೆಸರು ಮತ್ತು ಐಡಿ ಕಾರ್ಡ್ ದಾಖಲಿಸುವುದು ಕಡ್ಡಾಯ…

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply