ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾ| ಎಚ್.ಎ. ವಿಶ್ವೇಶ್ವರ
ಡಾ| ವನಿತಾಲಕ್ಷ್ಮಿ

ಪ್ರತಿಭಾ ಸಂಪನ್ನ ವೈದ್ಯರಾಗಿರುವ ಡಾ| ಎಚ್.ಎ. ವಿಶ್ವೇಶ್ವರ
ಡಾ| ವನಿತಾಲಕ್ಷ್ಮಿ ರವರು ಕುಂದಾಪುರದ ಪ್ರಸಿದ್ದ ಸಜ೯ನ್ಸ್ ಆಸ್ಪತ್ರೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ| ಎಚ್.ಎ. ವಿಶ್ವೇಶ್ವರ ರವರು ಶಾಲಾ ಜೀವನದಲ್ಲಿ ಪ್ರತಿಭಾನ್ವಿತ ವಿದ್ಯಾಥಿ೯ಯಾಗಿದ್ದರು. ಶಾಲಾ ಕಾಲೇಜಿನ ಪ್ರತಿಯೊಂದು ಕಾಯ೯ಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಬಹುಮಾನ ತನ್ನದಾಗಾಗಿಸಿಕೊಳ್ಳುತ್ತಿದ್ದರು.

ತಮ್ಮ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿ, ನಂತರ ಉನ್ನತ ವ್ಯಾಸಂಗವನ್ನು ವಿವಿಧ ಕಾಲೇಜುಗಳಲ್ಲಿ ಮುಗಿಸಿ, 1996 ರಲ್ಲಿ ಕುಂದಾಪುರದಲ್ಲಿ ಸ್ಥಾಪನೆ ಮಾಡಿದ ಸಜ೯ನ್ಸ್ ಆಸ್ಪತ್ರೆ ಇಂದು ಬೃಹತ್ ಆಸ್ಪತ್ರೆಯಾಗಿ ಹೆಸರು ಪಡೆದಿರುವುದು ಅಭಿನಂದನೀಯ ವಿಚಾರ.

ಆಸ್ಪತ್ರೆ ಪ್ರಾರಂಭಿಸುವ ಮೊದಲು ಇವರು ಡಾ| ಎನ್. ಆರ್ ಆಚಾಯ೯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಿರಂತರವಾದ 3 ದಶಕದ ಈ ವೈದ್ಯಕೀಯ ಸೇವೆಯಲ್ಲಿ ಸಾವಿರಾರು ರೋಗಿಗಳ ಬಾಳಿಗೆ ಹೊಸ ಬೆಳಕು ನೀಡಿದ್ದಾರೆ.

ಸಾಮಾಜಿಕ: ಸೇವೆ ಕುಂದಾಪುರ ಐ.ಎಂ.ಎ ಯ ಪೂವ೯ ಅಧ್ಯಕ್ಷರಾಗಿರುವ ಇವರು ಹಲವಾರು ವಿವಿಧ ಜನಪರ , ವೈದ್ಯಕೀಯ ಕಾಯ೯ಕ್ರಮಗಳನ್ನು ನಡೆಸಿ ಉತ್ತಮ ಅಧ್ಯಕ್ಷರಾಗಿ ಮೂಡಿ ಬಂದಿದ್ದಾರೆ. ಕುಂದಾಪುರ ರೋಟರಿಯ ಮಾಜಿ ಅಧ್ಯಕ್ಷ, ಸದಸ್ಯರಾಗಿ 25 ವಷ೯ಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಬಹಳ ಪ್ರಾಮುಖ್ಯವಾಗಿ ಸಜ೯ನ್ಸ್ ಪ್ರತಿಷ್ಟಾನ ಪ್ರಾರಂಭಿಸಿ ಅದರ ಮೂಲಕ ವಿವಿಧ ಜನಪರ ಕಾಯ೯ ನಡೆಸುತ್ತಿರುವುದು ಅವರ ಸಮಾಜ ಪರ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.

ಗುಜರಾತ್ ನಲ್ಲಿ ಭೂಕಂಪ ಆದ ಸಂದರ್ಭದಲ್ಲಿ ಹದಿನೈದು ದಿನಗಳ ಕಾಲ ಅಲ್ಲಿದ್ದು, ನಿರಾಶ್ರಿತರಿಗೆ ಉಚಿತ ವೈದ್ಯಕೀಯ ಸೇವೆಯನ್ನು ನೀಡಿದ ಕೀರ್ತಿ ಈ ದಂಪತಿಗಳಿಗೆ ಸಲ್ಲುತ್ತದೆ.

ಸಾಹಿತ್ಯ ಸೇವೆ .. . ಸಾಹಿತ್ಯ ಕಲೆ ಪ್ರವಾಸದಲ್ಲಿ ವಿಶೇಷ ಆಸಕ್ತಿ ಬೆಳೆಸಿರುವ ಇವರು, ಕನ್ನಡ ಪರ ಸಂಸ್ಥೆಗಳಿಗೆ ವಿಶೇಷ ಸಹಾಯ ಮಾಡುವ ಪರಿಪಾಠ ಬೆಳೆಸಿ ಕೊಂಡಿದ್ದಾರೆ. ಹೀಗೆ ಅವರ ಸಾಧನೆಗೆ ಪೂರಕವಾಗಿ ಪತ್ನಿ ಡಾII ವನಿತಾಲಕ್ಷ್ಮಿ ಯವರು ಕೂಡ ತಮ್ಮ ವೈದ್ಯಕೀಯ ಸೇವೆಯ ಮೂಲಕ ಮನೆ ಮಾತಾಗಿದ್ದಾರೆ. ಇಬ್ಬರು ಪುತ್ರರ ತಾಯಿಯಾಗಿ ಆಸ್ಪತ್ರೆಯ ಬೆಳವಣಿಗೆಗೆ ತನ್ನದೇ ಆದ ಪಾತ್ರ ವಹಿಸುತ್ತಿದ್ದಾರೆ. ಇವರ ಪರಿಸರ ಕಾಳಜಿ ನಿಜಕ್ಕೂ ಮೆಚ್ಚಬೇಕಾದದ್ದು, ಇವರ ಈ ಸೇವೆಗೆ
ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ
ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

 
 
 
 
 
 
 
 
 
 
 

Leave a Reply