ಕ್ರೀಡಾಭಾರತಿಯಿಂದ ಕ್ರೀಡೆ ಮತ್ತು ದೇಶ ರಕ್ಷಣೆ – ವಿಜಯ್ ಕೊಡವೂರು

ಕ್ರೀಡಾಭಾರತಿಯು ರಾಷ್ಟ್ರೀಯ ಸ್ವಯಂಸೇವಕಸಂಘದ ಒಂದು ಅಂಗಸಂಸ್ಥೆಯಾಗಿದೆ. ಕ್ರೀಡಾಭಾರತಿಯು ದೇಶೀಯಕ್ರೀಡೆಗಳ ರಕ್ಷಣೆಯ ಉದ್ದೇಶದೊಂದಿಗೆ ದೂರದೃಷ್ಟಿಯಿಂದ ಕೆಲಸಮಾಡುತ್ತದೆ. ಭಾರತೀಯು ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಅಲ್ಲದೆ ಯುವಕ್ರೀಡಾಪಟುಗಳನ್ನು ಗುರುತಿಸುವುದು, ಅವರಿಗೆ ಸೂಕ್ತ ಮಾರ್ಗದರ್ಶನಕೊಟ್ಟು ತರಬೇತಿಕೊಡಿಸಿ ಅವರನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುವ ಕೆಲಸವನ್ನು ಕ್ರೀಡಾಭಾರತೀ ಮಾಡುತ್ತಿದೆ. ಇಂತಹ ಕ್ರೀಡಾಪಟುಗಳು ದೇಶದ ಕೀರ್ತಯನ್ನು ಹೆಚ್ಚಿಸುತ್ತಾರೆ. ಕ್ರೀಡಾಪಟುವು ಕ್ರೀಡೆಯ ಮುಖಾಂತರ ದೇಶಭಕ್ತಿಯನ್ನೂ ರೂಢಿಸಿಕೊಳ್ಳಬೇಕು. ಅವರ ಜೀವನ ರಾಷ್ಟ್ರಸಮರ್ಪಿತ ಭಾವದಿಂದ ಕೂಡಿರಬೇಕು. ಇಂತಹ ಪ್ರತಿಭೆಗಳು ಮಾತ್ರ ದೇಶದ ಕೀರ್ತಿಯನ್ನು ಪರಮ ವೈಭವಕ್ಕೆ ಕೊಂಡೊಯ್ಯಬಲ್ಲರು ಎನ್ನುವ ದೃಷ್ಟಿಯಿಂದ ಕ್ರೀಡಾ ಭರತಿಯು ದೇಶಾದ್ಯಂತ ತನ್ನ ಸಂಘಟನೆಯನ್ನು ಬೆಳೆಸುತ್ತಿದೆ. ಈ ಸಂಘಟನೆಯಲ್ಲಿ ಕ್ರೀಡೆಯೊಂದಿಗೆ ಕ್ರೀಡಾಪಟುಗಳ ಮನದಲ್ಲಿ ರಾಷ್ಟಸಮರ್ಪಣಾ ಮನೋಭಾವವನ್ನೂ ತುಂಬಲಾಗುತ್ತದೆ. ಕ್ರೀಡಾಭಾರತೀಯು ಪರಿಸರ ಸಂರಕ್ಷಣೆ, ಹಾಗೂ ಗ್ರಾಹಕರ ರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಕಳೆದ ಅನೇಕ ದಿನಗಳಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 30 ರಾಜ್ಯಗಳಲ್ಲಿ 100 ನಗರಗಳನ್ನೂ ಹಾಗೂ 10,000 ಹಳ್ಳಿಗಳನ್ನೂ ಸ್ಕೇಟಿಂಗ್ ಮೂಲಕ ತಲುಪುವಂತಹ 5000km ಕ್ರಮಿಸುವ ಜಾಗ್ರತಿ ಯಾತ್ರೆಯನ್ನು ನಡೆಸುತ್ತಿದೆ. ಈ ಜಾಥಾವು ಉಡುಪಿ ಜಿಲ್ಲೆಗೆ ದಿನಾಂಕ 9-12-2022 ರಂದು ಶುಕ್ರವಾರ ಸಾಯಂಕಾಲ 4-40 ಕ್ಕೆ ಬಂದಿದೆ. ಅಂದು ಉಡುಪಿ ಜಿಲ್ಲೆಯಲ್ಲಿ ಇವರನ್ನು ಉಡುಪಿಯ ಕ್ರೀಡಾಭಾರತಿ ಸಂಸ್ಥೆಯು ಭವ್ಯವಾಗಿ ಸ್ವಾಗತ ಮಾಡಿತು.

ಅಂಬಲಪಾಡಿ ಜಂಕ್ಷನ್ ನಿಂದ ಸ್ಕೇಟಿಂಗ್, ಸೈಕಲ್ ಹಾಗೂ ಬೈಕ್ ರ್ಯಾಲಿ ಮೂಲಕ ಅವರೊಂದಿಗೆ ಜಾಥಾದಲ್ಲಿ ಭಾಗವಿಸಿತು. ಈ ರ್ಯಾಲಿಯು ಭ್ರಹ್ಮಗಿರಿ – ಜೋಡುಕಟ್ಟೆ – ಸಿಟಿಬಸ್ ನಿಲ್ದಾಣ – ಕಲ್ಸಂಕ – ಮಾರ್ಗವಾಗಿ ಕೃಷ್ಣಮಠದ ಪಾರ್ಕಿಂಗ್ ಸ್ಥಳದವರೆಗೆ ನಡೆಯಿತು. ಸ್ಕೇಟಿಂಗ್ ಮೂಲಕ ಸಮಗ್ರಭಾರತದ ಪರಿಭ್ರಮಣ ಯಾತ್ರೆಯನ್ನು ಕೈಗೊಂಡವರನ್ನು ಮಥುರಾ ಕಂಫರ್ಟ್ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

 
 
 
 
 
 
 
 
 
 
 

Leave a Reply