ಪರಿಸರ ರಕ್ಷಣೆಗಾಗಿ ಕೊಡವೂರು ಶಾಲಾ ಮಕ್ಕಳಿಂದ ಸಂಕಲ್ಪ.

ಮನೆಗೆ ಬೇಕಾಗುವ ದಿನಸಿ ಸಾಮಗ್ರಿ ಮತ್ತು ತರಕಾರಿಗಳಲ್ಲಿ ಎಲ್ಲದರಲ್ಲೂ ಒಂದೊಂದು ಪ್ಲಾಸ್ಟಿಕ್ ಬರುತ್ತದೆ 30-40 ವರ್ಷದ ಹಿಂದೆ ಎಲ್ಲಾ ಸಾಮಗ್ರಿಗಳು ಬರುತ್ತಿತ್ತು,ಆದರೆ ಪ್ಲಾಸ್ಟಿಕ್ ಅದರ ಜೊತೆಯಲ್ಲಿ ಬರುತ್ತಿಲ್ಲ ಇದಕ್ಕೆ ಯಾರು ಕಾರಣವೆಂದಾಗ ನಾವೇ ಕಾರಣ ಇದು ನಮ್ಮ ತಪ್ಪಿನಿಂದ ಈ ತಪ್ಪು ಆಗುತ್ತಾ ಇದೆ.

ನಮ್ಮ ಹಿರಿಯರು ಹೇಳಿಕೊಟ್ಟ ದಾರಿಯನ್ನು ಬಿಟ್ಟಿದ್ದೇವೆ ತಮ್ಮ ತಮ್ಮ ತಮ್ಮ ತಪ್ಪುಗಳನ್ನು ಅರ್ಥೈಸಿಕೊಂಡು ಕೊಡವೂರು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಇಕೋ ಬ್ರಿಕ್ಸ್ ಪರಿಸರಸ್ನೇಹಿ ಕಾರ್ಯಕ್ರಮದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು ಇಕೋಬ್ರಿಕ್ಸ್ ಕಾರ್ಯಕ್ರಮವನ್ನು ನಗರಸಭಾ ಸದಸ್ಯರಾದ ಕೆ ವಿಜಯ ಕೊಡವೂರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿ ಪುಣ್ಯಭೂಮಿ ಕೇವಲ ಕಲ್ಲು ಮಣ್ಣುಗಳ ರಾಶಿ ಅಲ್ಲ ಬದಲಾಗಿ ಚಿಕ್ಕದಾಗಿ ಇದ್ದಂತಹ ಗಿಡ ನೆಟ್ಟರೆ ಜೀವವಾಗಿ ದೊಡ್ಡ ಮರವಾಗಿ ಶಕ್ತಿ ಈ ಭೂಮಿಗೆ ಆದ್ದರಿಂದ ಈ ಭೂಮಿಗೆ ಜೀವವಿದೆ ಇದನ್ನು ಪ್ಲಾಸ್ಟಿಕ್ ನಿಂದ ತ್ಯಾಜ್ಯ ವಸ್ತುಗಳಿಂದ ಹಾಳು ಮಾಡುವ ಅಧಿಕಾರ ನಮಗಿಲ್ಲ ಎಷ್ಟು ಬೇಕು ಅದನ್ನು ಮಾತ್ರ ಉಪಯೋಗಿಸಬೇಕು ನಾವು ಬದುಕುವುದರ ಜೊತೆಯಲ್ಲಿ ನಮ್ಮ ಜೊತೆಯಲ್ಲಿ ಇರುವಂತಹ ಪ್ರಾಣಿ-ಪಕ್ಷಿಗಳಿಗೆ ಬದುಕುವಂತೆ ಮಾಡಬೇಕು ಎಂದರು.

ಚಾಕ್ಲೆಟ್ ಬಿಸ್ಕೆಟ್ ಲೇಸ್ ನಂತಹ ತಿಂಡಿ ಬಾಟಲಿಯಲ್ಲಿ ಬರುವ ಪಾನೀಯಗಳು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಬದಲಾಗಿ ನಾವು ನಮ್ಮ ಮನೆಯಲ್ಲಿ ತಾಯಿ ಹತ್ತಿರವೇ ಮಾಡಿಸಿಕೊಂಡು ತಿನ್ನಬೇಕೆ ಹೊರತು ಇಂತಹ ಜಂಕ್ ಫುಡ್ ಗಳನ್ನು ತಿಂದರೆ ಕ್ಯಾನ್ಸರ್ ನಂತಹ ಭೀಕರ ರೋಗಗಳು ಬರಲು ಸಾಧ್ಯತೆ ಇದೆ ನಮ್ಮ ಆರೋಗ್ಯ ಉತ್ತಮವಾದ ಬೇಕಾದರೆ ಜಂಕ್ ಫುಡ್ ತಿನ್ನುವುದನ್ನು ನಾವೇ ನಿಲ್ಲಿಸಬೇಕು ನಾವೇ ನಮ್ಮ ಹಿರಿಯರ ಜೊತೆ
ಹೇಳುವಂಥವರಾಗಬೇಕು ನಮಗೆ ಇದು ಅವಶ್ಯಕತೆ ವಿಲ್ಲವೆಂದು ಮರುಬಳಕೆ ಮಾಡುವಂತಹ ಪ್ಲಾಸ್ಟಿಕ್ಕನ್ನು ಇಕೋ ಬ್ರಿಕ್ಸ್ ಮಾಡಿ ಅಲಂಕಾರಿಕ ವಸ್ತುಗಳನ್ನಾಗಿ ಮಾಡುತ್ತಾರೆ ಇದನ್ನು ಒಂದು ತಿಂಗಳ ನಂತರ ನಾವು ಕಾಂಪಿಟಿಷನ್ ಇಟ್ಟುಕೊಂಡು ಮಾಡುವಂತ ಪ್ರಯತ್ನವನ್ನು ಮಾಡುತ್ತೇನೆ ಮರುಬಳಕೆ ಆಗುವಂತಹ ಪ್ಲಾಸ್ಟಿಕ್ನಿಂದ ಇಕೋ ಬ್ರಿಕ್ಸ್ ಮಾಡಿ ಅಲಂಕಾರಿಕ ಗಳಾಗಿ ಮಾಡುವುದರ ಮತ್ತು ಮರುಬಳಕೆ ಆಗದಿರುವ ಪ್ಲಾಸ್ಟಿಕ್ ಗಳನ್ನು ತಂದುಕೊಟ್ಟರೆ 1 ಕೆಜಿ ಪ್ಲಾಸ್ಟಿಕ್ ಗೆ 1 ಕೆಜಿ ಅಕ್ಕಿ ನೀಡಲಾಗುವುದು ಎಂದು ನಗರಸಭಾ ಸದಸ್ಯರು ತಮ್ಮ ಸಂಕಲ್ಪವನ್ನು ಹೇಳಿಕೊಂಡರು.

ಪ್ಲಾಸ್ಟಿಕ್ ಬಾಟಲಿಯಲ್ಲಿ ಗಿಡ ನೆಟ್ಟು ಶಾಲೆ, ಮನೆಗಳ ಅಲಂಕಾರವನ್ನು ಹೆಚ್ಚಿಸಬಹುದು. ಈ ಮುಖಾಂತರ ನಮ್ಮ ಶಾಲೆಯು ಹಸಿರೀಕರಣ ಆಗಬೇಕಾಗಿದೆ ಎಂದರು. ನಮ್ಮ ಪರಿಸರದ ಪವಿತ್ರವಾದ ಇಂದ್ರಾಣಿ ನದಿಯ ರಕ್ಷಣೆಯನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ, ಮುಂದಿನ ದಿನಗಳಲ್ಲಿ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಪತ್ರದ ಮುಖಾಂತರ ಸಂಪರ್ಕ ಮಾಡಿ ನಮಗೆ ನಮ್ಮ ನದಿಯಿಂದ ಆಗಿರುವಂತ ಸಮಸ್ಯೆ ತ್ಯಾಜ್ಯ ನೀರಿನ ಸಮಸ್ಯೆಯಿಂದ ಆಗಿರುವಂತಹ ಸಮಸ್ಯೆಯನ್ನು, ನಮ್ಮ ಊರಿನಲ್ಲಿರುವ ಆಗಿರುವಂತಹ 700 ಬಾವಿಗಳು ಕಲುಷಿತ ಆಗಿರುವುದು, ಕೃಷಿಗೆ ತುಂಬಾ ಸಮಸ್ಯೆಯಿಂದ ಕೃಷಿಗೆ ಉಪಯೋಗ ಇಲ್ಲದಿರುವುದು, ನಮ್ಮ ಇಂದ್ರಾಣಿ ನದಿಯ ಸಮಸ್ಯೆಯನ್ನು ಪರಿಹಾರವನ್ನು ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.

 
 
 
 
 
 
 
 
 
 
 

Leave a Reply