ಯುಪಿಎಂಸಿ ಕಾಲೇಜಿನಲ್ಲಿ ಎನ್.ಎಸ್.ಎಸ್ ಚಟುವಟಿಕೆ ಉದ್ಘಾಟನೆಯೊಂದಿಗೆ ಯುವ ದಿನಾಚರಣೆ

ಕುಂಜಿಬೆಟ್ಟು : ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜನವರಿ 12ರಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ಹಾಗೂ 2021-22 ನೇ ಸಾಲಿನ ಎನ್.ಎಸ್.ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿತು.

ಮಾಹೆ, ಮಣಿಪಾಲ್ ಇದರ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಿದರು. ಎನ್‌‌.ಎಸ್.ಎಸ್ ಸ್ವಯಂ ಸೇವಕರೊಂದಿಗೆ ಕಷ್ಟ ಸಹಿಷ್ಣುತೆ, ಧೈರ್ಯ, ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯ ಕುರಿತಾದ ಸ್ವಾನುಭವನ್ನು ಹಂಚಿಕೊಂಡರು ಸ್ವಾಮಿ ವಿವೇಕಾನಂದರ ಜೀವನ ಸಾಧನೆಗಳನ್ನು ಈ ಸಂದರ್ಭದಲ್ಲಿ ವರ್ಣಿಸಿದರು‌.

ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ನೂತನ ವಿದ್ಯಾರ್ಥಿ ನಾಯಕ ಮತ್ತು ನಾಯಕಿಯರುಗಳಾದ ದ್ವಿತೀಯ ಬಿ.ಕಾಂ ನ ಸಂಗೀತ ಪೈ, ಶಶಾಂಕ್ ದೇವಾಡಿಗ, ದ್ವಿತೀಯ ಬಿಬಿಎ ನ ಪ್ರಕ್ಷಾ, ಶೋಭಿತ್ ನಾಯಕ್, ಪ್ರಥಮ ಬಿ.ಕಾಂ ನ ಪ್ರೇಮಂ ಸಾಯಿ, ಸುಶ್ಮಿತಾ ಭಟ್, ಪ್ರಥಮ ಬಿಬಿಎ ನ ಪ್ರಣೀತ, ಲೋಕೇಶ್ ರವರಿಗೆ ಪುಷ್ಪ ನೀಡಿ ಅಭಿನಂದಿಸಲಾಯಿತು.
ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ರಾಜೇಶ್ ಕುಮಾರ್ ಪ್ರಸ್ತಾವನೆ ಮಾತುಗಳನ್ನಾಡಿ ಸ್ವಾಗತಿಸಿದರು, ಸಹ ಯೋಜನಾಧಿಕಾರಿ ಚಂದ್ರಶೇಖರ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply