ಯುಪಿಎಂಸಿ ಕಾಲೇಜಿನಲ್ಲಿ ಸ್ವರಕ್ಷಾ ತರಬೇತಿ ಕಾರ್ಯಕ್ರಮ 

ಕುಂಜಿಬೆಟ್ಟು : ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ‘ದಿಶಾ’ ಮಹಿಳಾ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗೆ ‘ಸ್ವರಕ್ಷಾ’ ತರಬೇತಿ ಕಾರ್ಯಕ್ರಮವು ಜ.11 ರಂದು ನಡೆಯಿತು. ಮಹಿಳಾ ಸ್ವರಕ್ಷಾ ತರಬೇತುದಾರ ಮಾರ್ಷಲ್ ಆರ್ಟ್ಸ್ ಎಕ್ಸಪೋನೆಂಟ್ ಕಾರ್ತಿಕ್ ಎಸ್ ಕಟೀಲ್ ಈ ಕಾರ್ಯಕ್ರಮವನ್ನು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿಕೊಟ್ಟರು. ಅವರ ತಾಯಿ ಶುಭಲತಾ ಸಹಕರಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ದಿಶಾ ಮಹಿಳಾ ಸಂಘದ ಅಧ್ಯಾಪಕ ಸಲಹೆಗಾರ ಜಯಲಕ್ಷ್ಮಿ, ಪುರೋಭಿ ಅವಿನಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಬಿಬಿಎ ನ ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿ, ನಿರೂಪಿಸಿದರು. ಪ್ರಿಯದರ್ಶಿನಿ ವಂದಿಸಿದರು.

 
 
 
 
 
 
 
 
 

Leave a Reply