ಉಡುಪಿಯಲ್ಲಿ ಮನುಷ್ಯನ ಮುಖ ಹೋಲುವ ಕೀಟ ಪತ್ತೆ!

ಉಡುಪಿ: ಮನುಷ್ಯನ ಮುಖವನ್ನೇ ಹೋಲುವ ಬೆನ್ನುಳ್ಳ ಕೀಟ(ಮ್ಯಾನ್​ ಫೇಸ್ಡ್​ ಬಗ್​) ಕಾರ್ಕಳದ ಬೈಪಾಸ್​ ಬಳಿಯ ತಾಳೆತೋಟದಲ್ಲಿ ಪತ್ತೆಯಾಗಿದೆ. ತಲೆಗೊಂದು ಮಕ್ಮಲ್​ ಟೋಪಿ, ಎರಡು ಕಣ್ಣು, ದೊಡ್ಡ ಮೂಗಿನ ಕೆಳಗೆ ಚಾರ್ಲಿ ಚಾಪ್ಲಿನ್​ ಮೀಸೆ. ಹೀಗೆ ದೂರದಿಂದ ನೋಡಿದರೆ ಮಾನವ ಮುಖದ ಕಲಾಕೃತಿಯಂತೆ ಕಾಣುತ್ತದೆ.

ಭಾರತ ಸಹಿತ ದಕ್ಷಿಣ ಏಷ್ಯಾ ರಾಷ್ಟ್ರಗಳ ಕರಾವಳಿಯಲ್ಲಿ ಮ್ಯಾನ್​ ಫೇಸ್ಡ್​ ಕೀಟಗಳಿವೆ. ಕೆಂಪು, ಹಳದಿ, ಕಿತ್ತಳೆ, ಕಂದು ಬಣ್ಣದಲ್ಲಿರುವ ಈ ಕೀಟ ಬೆಳಗ್ಗೆ 7ರಿಂದ 8 ಗಂಟೆಯ ಅವಧಿಯಲ್ಲಿ ಸೂರ್ಯನ ಎಳೆ ಬಿಸಿಲ ಶಾಖ ಹೀರುತ್ತ ಗಿಡಗಳಲ್ಲಿ ಹೆಚ್ಚಾಗಿ ವಿಹರಿಸುತ್ತವೆ.

ಫೆಬ್ರವರಿಯಿಂದ ಮೇ ಅವಧಿಯಲ್ಲಿ ಕಂಡುಬರುವ ಈ ಕೀಟ ಚಿಗುರು, ಕಾಂಡ, ಹಣ್ಣಿನಿಂದ ರಸ ಹೀರುತ್ತವೆ. ತಾಳೆ ಗರಿಗಳಲ್ಲಿ ಸ್ವಚ್ಛಂದ ವಿಹರಿಸುವ ಮ್ಯಾನ್​ ಫೇಸ್ಡ್​ ಬಗ್​ ನಿರುಪದ್ರವಿ ಜೀವಿ. ಗಾತ್ರದಲ್ಲಿ ಗಂಡು ಚಿಕ್ಕದಾದರೆ, ಹೆಣ್ಣು ಸ್ವಲ್ಪ ದೊಡ್ಡದು. ಈ ಕೀಟಗಳು ಗುಂಪಲ್ಲಿ ಮೊಟ್ಟೆ ಇಡುತ್ತವೆ. 25ರಿಂದ 30ದಿನವಷ್ಟೇ ಆಯುಷ್ಯ. ತಂಪು ಹವಾಮಾನವಿದ್ದರೆ ಜೀವನ ದೀರ್ಘವಾಗಿರುತ್ತದೆ.

ಕೊಳವೆಯಾಕಾರದಲ್ಲಿರುವ ಬಾಯಿ ಚುಚ್ಚಿ ರಸ ಹೀರುವ ಈ ಕೀಟವನ್ನು ವೈಜ್ಞಾನಿಕವಾಗಿ ಕೆಟಕ್ಯಾಂಥಸ್​ ಇನ್​ಕಾರ್ನೇಟಸ್​ ಎಂದು ಕರೆಯಲಾಗುತ್ತಿದೆ. ಪೆಂಟಟೊಮಿಡೆ ಜಾತಿಗೆ ಸೇರಿದ್ದು, ಮಕ್ಕಳಿಗೆ ಹಾಗೂ ಕೀಟಶಾಸ್ತ್ರಜ್ಞರಿಗೆ ಆಸಕ್ತಿಕರ ವಿಷಯ.

 
 
 
 
 
 
 
 
 
 
 

Leave a Reply