ತೆಂಕನಿಡಿಯೂರು : ಪುಸ್ತಕ ಬಿಡುಗಡೆ

ನಮ್ಮ ಪಠ್ಯಗಳನ್ನು ನಮ್ಮದೇ ಕಣ್ಣುಗಳ ಮೂಲಕ
ನೋಡುವ ಅಗತ್ಯವಿದೆ. ಯಾವ ಮತ್ತು ಯಾರ
ಪಠ್ಯಗಳು ನಮ್ಮೆದುರಿಗಿವೆ ಮತ್ತು ಯಾವುವನ್ನು
ಹೊರಗೇ ಇಟ್ಟು ನಿರ್ವಹಿಸಿಕೊಂಡು ಬರಲಾಗುತ್ತಿದೆ ಎಂಬ ಓದಿನ
ರಾಜಕಾರಣದ ಅರಿವಿಲ್ಲವಾದರೆ ನಾಪತ್ತೆಗೊಳಿಸಲಾದ ನಮ್ಮ
ಬದುಕುಗಳು ದಕ್ಕಲಾರವು. ಹಾಗಾಗಿ ಪಠ್ಯಗಳನ್ನು
ನಮ್ಮದೇ ಕಣ್ಣುಗಳ ಮೂಲಕ ಓದಬೇಕಾದ ತುರ್ತು
ನಮಗಿದೆ ಎಂದು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪುರಸ್ಕೃತ ಡ. ನಟರಾಜ ಎಸ್ ಬೂದಾಳು ಅವರು ‘ಜೆ.ಪಿ ಕೃತಿಗಳ
ಮೀಮಾಂಸಾ ನೆಲೆಗಳು’ ಎಂಬ ವಿಷಯದ ಮೇಲಿನ
ಉಪನ್ಯಾಸದಲ್ಲಿ ಹೇಳಿದರು. ತೆಂಕನಿಡಿಯೂರು ಸ.ಪ್ರ.ದ.
ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ
ಕೇಂದ್ರದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಅಡಿಯಲ್ಲಿ
ನಡೆದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್
ಶೆಟ್ಟಿಯವರ ‘ನುಡಿಯಾಟದ ನಡೆ, ಬಯಲ ಬೆರಗು,
ತಣ್ಣನೆಯ ದೀಪಗಳು” ಎಂಬ ಕೃತಿಗಳ ಬಿಡುಗಡೆ ಹಾಗೂ
ಈವರೆಗಿನ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರುಮಾತನಾಡಿದರು.

ಕಾರ್ಯಕ್ರಮದ ಸಂಪ್ರನ್ಮೂಲ
ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದ ತುಮಕೂರಿನ ಡಾ. ಜಿ.ವಿ
ಆನಂದಮೂರ್ತಿಯವರು ‘ಜೆಪಿ ಕೃತಿಗಳ ಸಂಸ್ಕೃತಿ
ಚಿoತನೆಯ ನೆಲೆಗಳ’ ಕುರಿತು ಹಾಗೂ ಕನಕಪುರದ
ಹಾರೋಹಳ್ಳಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.
ರಾಮಲಿಂಗಪ್ಪ ಟಿ. ಬೇಗೂರು ಅವರು ‘ಜೆಪಿ ಕೃತಿಗಳ ಸಾಹಿತ್ಯ
ಚರಿತ್ರೆಯ ರಚನೆಯ ನೆಲೆಗಟ್ಟು” ಎಂಬ ವಿಷಯಗಳ
ಕುರಿತು ಮಾತನಾಡಿದರು. ಕೆ. ಆರ್ ನಗರ ಸರ್ಕಾರಿ ಕಾಲೇಜಿನ ಡಾ.
ಚಿಕ್ಕಮಗಳೂರು ಗಣೇಶ ಅವರು ಪ್ರಾಸ್ತಾವಿಕ
ಮಾತುಗಳನ್ನಾಡಿದರು. ಪ್ರಾಂಶುಪಾಲ ಪ್ರೊ. ಸುರೇಶ್ ರೈ
ಕೆ. ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕರ‍್ಯಕ್ರಮದಲ್ಲಿ
ಕನ್ನಡ ವಿಭಾಗ ಮುಖ್ಯಸ್ಥ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ. ಸಹ
ಪ್ರಾಧ್ಯಾಪಕರುಗಳಾದ ಡಾ. ಹೆಚ್.ಕೆ. ವೆಂಕಟೇಶ್ ವಂದಿಸಿದರು

 
 
 
 
 
 
 
 
 
 
 

Leave a Reply