ತೆರೆದ ಮನೆ ಕಾರ್ಯಕ್ರಮ

 ಉಡುಪಿ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಚೈಲ್ಡ್ ಲೈನ್-೧೦೯೮ ಉಡುಪಿಯ ತೆರೆದ ಮನೆ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚಡದಲ್ಲಿ ನಡೆಯಿತು.

ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕಾರ್ಯಕ್ರಮವಪೋಷಕರು ತಮ್ಮ ಸಮಯವನ್ನು ಮಕ್ಕಳಿಗೂ ಸ್ವಲ್ಪ ಮೀಸಲಿಡಿ ಎಂದು ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಆಚಾರ್ಯ  ಮಕ್ಕಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅನುದಾನದ ಮೂಲಕ ಬಗೆಹರಿಸುವುದಾಗಿ ತಿಳಿಸಿರುತ್ತಾರೆ.ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯವರಾದ ಕು ಅಂಬಿಕಾರವರು ಮಕ್ಕಳಹಕ್ಕುಗಳ ರಕ್ಷಣೆ, ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳು, ಕಾನೂನು ಕಾಯಿದೆಗಳಬಗ್ಗೆ ಮಾಹಿತಿಯನ್ನು ನೀಡಿದರು.

ಜಿಲ್ಲಾ ಶಿಕ್ಷಣ ಸಂಯೋಜಕ ಶಂಕರ್ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಮಹತ್ವ ಹಾಗೂ ಇಲಾಖೆಯ ವಿವಿಧ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಮಕ್ಕಳ ಬೇಡಿಕೆಗಳನ್ನು ತಮ್ಮ ಕ್ರಿಯಾಯೋಜನೆಯಲ್ಲಿ ಅಳವಡಿಸಿ ಬಗೆಹರಿಸುವುದಾಗಿ ತಿಳಿಸಿರುತ್ತಾರೆ.ಅಲ್ಲದೇ ತೆರೆದ ಮನೆ ಕಾರ್ಯಕ್ರಮವು ಮಕ್ಕಳಿಗೆ ಮಾತಾನಾಡುವ ಧೈರ್ಯ ಮತ್ತು ಸ್ವಾತಂತ್ರಂತ್ರ್ಯವನ್ನು ನೀಡಿದೆ ಎಂದು ಹೇಳಿದರು.

ಕೋವಿಡ್ ಮುಂಜಾಗೃತ ಕ್ರಮಗಳನ್ನು ಪಾಲಿಸುವಂತೆ ಕಿರಿಯ ಮಹಿಳಾ ಆರೋಗ್ಯಸಹಾಯಕ ಪ್ರಭಾಕಲಾ ಇವರು ಕಿವಿ ಮಾತನ್ನು ಹೇಳಿದರು.ಕಟಪಾಡಿ ಪೋಲಿಸ್ ಠಾಣಾಧಿಕಾರಿ ದಯಾನಂದ ಇವರು ಅರ್ಹ ವಯಸ್ಸನ್ನು ತಲುಪವರೆಗೆ ತಮ್ಮ ಮಕ್ಕಳಿಗೆ ಪೋಷಕರು ವಾಹನವನ್ನು ಚಲಾಯಿಸಲು ನೀಡಿದ್ದಲ್ಲಿ, ಪೋಷಕರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿದರು. 

ಅಧ್ಯಕ್ಷೀಯ ಭಾಷಣವನ್ನಾಡಿದ ಚೈಲ್ಡ್ಲೈನ್-೧೦೯೮, ಉಡುಪಿ ಇದರ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ  ಸರ್ವ ಇಲಾಖೆಗಳ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಅಲ್ಲದೇ ಚೈಲ್ಡ್ ಲೈನ್-೧೦೯೮, ಇದರ ಸೇವೆಗಳ ಕುರಿತಾದ ಮಾಹಿತಿಯನ್ನು ನೀಡಿದರು. 

 ವಿದ್ಯಾರ್ಥಿಗಳಿಗೆ ಚೈಲ್ಡ್ ಲೈನ್-೧೦೯೮, ವತಿಯಿಂದ ಮಾಸ್ಕ್ ವಿತರಣೆ ಮಾಡಲಾಯಿತು. ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಪವಿತ್ರಾ ಶೆಟ್ಟಿ, ರಾಜೇಶ್ ಪೂಜಾರಿ, ತ್ರಿವೇಣಿ, ಚೈಲ್ಡ್ ಲೈನ್-೧೦೯೮ ಉಡುಪಿಯ ಸದಸ್ಯರು, ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೆಹೆನಾ ಮತ್ತು ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಭಾರತಿ, ಮೆಸ್ಕಾಂನ ಬಸವರಾಜ್ ಮತ್ತು ಮಂಜುನಾಥ, ಹಳೆ ವಿದ್ಯಾರ್ಥಿಗಳಾದ ಜನಾರ್ದನ ಆಚಾರ್ಯ, ತೆಂಕನಿಡಿಯೂರಿನ ಸಮಾಜಕಾರ್ಯ ಹಾಗೂ ಮಿಲಾಗ್ರೇಸ್ ನ ಸಮಾಜಕಾರ್ಯ ವಿದ್ಯಾರ್ಥಿಗಳು, ಸ್ಥಳೀಯರು, ಮಕ್ಕಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಚೈಲ್ಡ್ ಲೈನ್-೧೦೯೮ ಉಡುಪಿಯ ಸಿಬ್ಬಂದಿ ವೃಶಾಕ್ ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಶಕುಂತಳಾದೇವಿ ವಂದಿಸಿದರು. ಚೈಲ್ಡ್ ಲೈನ್-೧೦೯೮ರ ಆಪ್ತಸಮಾಲೋಚಕಿ ಜ್ಯೋತಿ ಸ್ವಾಗತಿಸಿ, ಪ್ರಸ್ತಾವನೆಗೈದರು. 

 
 
 
 
 
 
 
 
 
 
 

Leave a Reply