ಕಾರ್ಕಳ ತಾಲೂಕು ಹುಕ್ರಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ ನಾಪತ್ತೆ

ಉಡುಪಿ, ಡಿಸೆಂಬರ್ 21 (ಕವಾ): ಜಿಲ್ಲೆಯ ಕಾರ್ಕಳ ತಾಲೂಕು ಮಾಳ ಗ್ರಾಮದ ಹುಕ್ರಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ (18) ಎಂಬ ಯುವತಿಯು ಡಿಸೆಂಬರ್ 15 ರಂದು ಮನೆಯಿಂದ ಕಾಲೇಜಿಗೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.
5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಛೇರಿ ದೂರವಾಣಿ ಸಂಖ್ಯೆ: 08258-231083, 9480805435, ಕಾರ್ಕಳ ಗ್ರಾಮಾಂತರ ಠಾಣೆ ದೂರವಾಣಿ ಸಂಖ್ಯೆ: 08258-232083, 9480805462 ನ್ನು ಸಂಪರ್ಕಿಸು೦ತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply