ಉಡುಪಿ ಜಿಲ್ಲಾ ರಂಗಮಂದಿರ ನಿರ್ಮಾಣದ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಶ್ರೀ ಸುನಿಲ್ ಕುಮಾರ್ ಸೂಚನೆ

ಉಡುಪಿ ಜಿಲ್ಲಾ ರಂಗಮಂದಿರ ನಿರ್ಮಾಣದ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಸುನಿಲ್ ಕುಮಾರ್ ಇವರಿಂದ ಅಧಿಕಾರಿಗಳಿಗೆ ಸೂಚನೆ.

ಇಂದು ಮಾರ್ಚ್ 30ರಂದು ಬೆಂಗಳೂರು ವಿಧಾನ ಸೌಧದಲ್ಲಿ ಉಡುಪಿ ಶಾಸಕರಾದ ಶ್ರೀ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಭಾಜಪದ ಅಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಶ್ರೀ ಉದಯ ಕುಮಾರ್ ಶೆಟ್ಟಿ ಕಿದಿಯೂರು ಇವರುಗಳೊಂದಿಗೆ ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಸೇರಿದಂತೆ ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಸುನಿಲ್ ಕುಮಾರ್ ಇವರನ್ನು ಭೇಟಿಯಾಗಿ ಉಡುಪಿ ಜಿಲ್ಲಾ ರಂಗಮಂದಿರದ ನಿರ್ಮಾಣದ ತುರ್ತು ಅಗತ್ಯತೆಯನ್ನು ತಿಳಿಸಿದಾಗ, ಮಾನ್ಯ ಸಚಿವರು ಈ ಕೂಡಲೇ, ಆರಂಭಿಕವಾಗಿ ರೂ ಎರಡು ಕೋಟಿ ಅನುದಾನಗಳನ್ನು ಇಲಾಖೆಯಿಂದ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಸುಮಾರು 12 ವರ್ಷದ ಹಿಂದೆಯೇ ಸರ್ಕಾರದಿಂದ ಬಿಡುಗಡೆ ಆಗಿ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇರುವ ರೂ 50 ಲಕ್ಷ ಅನುದಾನದೊಂದಿಗೆ ಜಿಲ್ಲಾ ರಂಗಮಂದಿರ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಉಡುಪಿ ಜಿಲ್ಲೆಯ ಸಮಸ್ತ ಕಲಾವಿದರ, ಕಲಾಪ್ರೇಮಿಗಳ ಕನಸು ನನಸಾಗುವತ್ತ ಸದ್ಯದಲ್ಲೇ ಸಾಗಲಿದೆ ಎಂಬ ಸಂಭ್ರಮದ ವಿಚಾರವನ್ನು ತಮಗೆಲ್ಲರಿಗೂ ತಿಳಿಸಲು ಬಹಳ ಸಂತೋಷ ಪಡುತ್ತಿದ್ದೇನೆ.

ಜಿಲ್ಲಾ ರಂಗಮಂದಿರ ಬೇಡಿಕೆಗೆ ಧ್ವನಿಗೂಡಿಸಿದ ಉಡುಪಿ ಶಾಸಕರಾದಿ ಎಲ್ಲಾ ನಾಯಕರುಗಳಿಗೆ ಮಗದೊಮ್ಮೆ ಧನ್ಯವಾದ.

ಸಚಿವರ ಆದೇಶವನ್ನ ಮೂರ್ತರೂಪಕ್ಕೆ ತರುವಲ್ಲಿ ಅಧಿಕಾರಿಗಳು ತುರ್ತಾಗಿ ಶೃಮಿಸಲಿ ಎಂದು ಆಶಿಸುತ್ತೇನೆ.

– ಪ್ರದೀಪ್ ಚಂದ್ರ ಕುತ್ಪಾಡಿ
ಪ್ರಧಾನ ಕಾರ್ಯದರ್ಶಿ
ರಂಗಭೂಮಿ (ರಿ.) ಉಡುಪಿ

 
 
 
 
 
 
 
 
 
 
 

Leave a Reply