ಉಡುಪಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಾ ಸಾರಥ್ಯ ಸುನಿತಾ ಆದಿದ್ರಾವಿಡ ಕಾರ್ಕಳ ಹೆಗಲಿಗೆ.

ನಾಂಕ :- 05/03/2022 ರಂದು ಸಮಾನ ಮನಸ್ಕ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಅನುಭವ ಪಡೆದು ಮಹಿಳೆಯರ ಗಂಭೀರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಸಮಾಜಮುಖಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಒಂದು ಸಂಘಟನೆಯನ್ನು ಹುಟ್ಟು ಹಾಕುವ ಕೆಲಸವನ್ನು ಮಣಿಪಾಲದ ಆಶ್ಲೇಷ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ನ ಮಾಲಕಿ ಶ್ರೀಮತಿ ಶ್ರುತಿ ಜಿ. ಶೆಣೈಯವರ ಆಶ್ರಯದಲ್ಲಿ ಆಸಕ್ತ ಮಹಿಳೆಯರು ಸೇರಿ ಮಹಿಳೆಯರಿಗಾಗಿ ಕೆಲಸ ಮಾಡುವ ಬಗ್ಗೆ ಚರ್ಚಿಸಿ ಒಂದು ಸಮಿತಿಯನ್ನು ರಚಿಸಲಾಯಿತು.

 

ಈ ಸಮಿತಿಯು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಮಾಜ ಮುಖಿ ಅರಿವು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಉಡುಪಿ ಜಿಲ್ಲೆ ಇದರ ನೂತನ ಪದಾಧಿಕಾರಿಗಳ ಆಯ್ಕೆಗೊಂಡಿತು.

ಅಧ್ಯಕ್ಷರಾಗಿ ಶ್ರೀಮತಿ ಸುನಿತಾ ಆದಿದ್ರಾವಿಡ ಕಾರ್ಕಳ, ಅನುಭವ ಕ್ಷೇತ್ರ ಮಹಿಳಾ ಮತ್ತು ಮಕ್ಕಳ ಹಕ್ಕುಗಳು, ಅಭಿವೃದ್ಧಿ ಮತ್ತು ಕಾನೂನುಗಳು. ಉಪಾಧ್ಯಕ್ಷರು ಸಾಧನ ಕಿಣಿ ಉಡುಪಿ. ಅಧಿತಿ ಪ್ರತಿಷ್ಠಾನ ಆಡಳಿತ ಮುಖ್ಯಸ್ಥರು, ವಿಕಲಚೇತನ ನಾಗರಿಕ ಹಕ್ಕುಗಳ ಹೋರಾಟಗಾರರು. ಕಾರ್ಯದರ್ಶಿ ಜಯಶ್ರೀ ಭಂಡಾರಿ ಉಡುಪಿ.ಸೌಂದರ್ಯ ತಜ್ಞೆ ಹಾಗೂ ಸಮಾಜಸೇವಕಿ.

ಜೊತೆ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಉಡುಪಿ ಮಾನವ ಹಕ್ಕುಗಳ ಹೋರಾಟಗಾರರು. ಕೋಶಾಧಿಕಾರಿ ಸುಲೋಚನಾ ಕೊಡವೂರು ಉಡುಪಿ. ಮಹಿಳಾ ಪರ ಕಾನೂನು ಹಾಗೂ ಶಿಕ್ಷಣ ಹೋರಾಟಗಾರರು. ಸಂಘಟನಾ ಕಾರ್ಯದರ್ಶಿಗಳಾಗಿ ಬೇಬಿ ಶೆಟ್ಟಿ ಕಾರ್ಯದರ್ಶಿ ಅಂಗನವಾಡಿ ಕಾರ್ಯಕರ್ತರ ಸಂಘ ಉಡುಪಿ ಜಿಲ್ಲೆ.

ಸಂಘಟನಾ ಕಾರ್ಯದರ್ಶಿ ಪದ್ಮಾವತಿ ಅಮೀನ್ ಬಜಗೋಳಿ ಕಾರ್ಕಳ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತೆ ಅಂಗನವಾಡಿ ಕಾರ್ಯಕರ್ತೆ. ಸಂಘಟನಾ ಕಾರ್ಯದರ್ಶಿ ತಿಲೋತ್ತಮ ನಾಯಕ್ ಉಡುಪಿ. ಸಮಾಜಸೇವಕಿ ಶಿಕ್ಷಣ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರರು ಆಪ್ತ ಸಮಾಲೋಚಕರು ಶ್ರುತಿ ಜಿ. ಶೆಣೈ, ಉದ್ಯಮಿ ಆಶ್ಲೇಷ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಮಣಿಪಾಲ.

ಆಪ್ತ ಸಮಾಲೋಚಕರು ಡಾ. ಪ್ರಮೀಳಾ ಜೆ. ವಾಜ್ ಉಪನ್ಯಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ. ಆಪ್ತ ಸಮಾಲೋಚಕರು ರೇಷ್ಮಾ ಸೈಯದ್, ಸೌಂದರ್ಯ ತಜ್ಞೆ ಹಾಗೂ ಸಮಾಜಸೇವಕಿ ವಿ ಕೇರ್ ಫೌಂಡರ್ ಉಡುಪಿ.

 
 
 
 
 
 
 
 
 
 
 

Leave a Reply