ಚಿನ್ನಗಿರವಿ ಇಟ್ಟು ಸಾಲ ಪಡೆದವರಿಗೆ ಶೀಘ್ರದಲ್ಲೇ ಸಿಗಲಿದೆ ಗುಡ್ ನ್ಯೂಸ್

 ಬೆಂಗಳೂರು : ಚಿನ್ನಾಭರಣ ಗಿರವಿ ಇಟ್ಟು ಸಾಲ ಪಡೆದವರಿಗೆ ರಾಜ್ಯ ಆಭರಣ ವರ್ತಕರ ಒಕ್ಕೂಟ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಎರಡರಿಂದ ಮೂರು ತಿಂಗಳ ಬಡ್ಡಿ ಮನ್ನಾ ಮಾಡಲು ಚಿಂತಿಸುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ 1 ಗ್ರಾಂ ಚಿನ್ನಕ್ಕೆ ಶೇ. 75 ಸಾಲ ನೀಡಲಾಗುತ್ತದೆ.ವರ್ಷಕ್ಕೆ ಶೇ. 8.5 ನಿಂದ ಶೇ. 14 ರವರೆಗೆ ಬಡ್ಡಿಯನ್ನು ಗ್ರಾಹಕ ರಿಂದ ವಸೂಲಿ ಮಾಡಲಾಗುತ್ತಿದೆ. ಇದೀಗ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ್ಡಿ ಮನ್ನಾ ಮಾಡುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿಸಲು ಒಕ್ಕೂಟ ಮುಂದಾಗಿದೆ.

ವಿವಿಧ ಕಾರಣಗಳಿಗಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಚಿನ್ನಾಭರಣಗಳ ಅಂಗಡಿಗಳಲ್ಲಿ ಚಿನ್ನದ ಮೇಲೆ ಸಾಲ ಪಡೆದುಕೊಂಡಿದ್ದಾರೆ.ರಾಜ್ಯ ಆಭರಣ ವರ್ತಕರ ಸಂಘ ಈಗಾಗಲೇ ಚಿಂತನೆಯನ್ನು ನಡೆಸಿದ್ದು ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಿದೆ ಎಂದು ಒಕ್ಕೂಟ ಮಾಹಿತಿ ನೀಡಿದೆ.

 
 
 
 
 
 
 
 
 
 
 

Leave a Reply