ಬೆಂಗಳೂರು : ಡ್ರಗ್ ಕೇಸ್‌ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗಿ – ನೈಜೀರಿಯನ್ ಪ್ರಜೆ ಸೇರಿ 10 ಆರೋಪಿಗಳ ಬಂಧನ

ಬೆಂಗಳೂರು: ನೈಜೀರಿಯನ್ ಪ್ರಜೆ ಜೊತೆ ಸೇರಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಪೊಲೀಸರು ನೈಜಿರಿಯನ್ ಪ್ರಜೆ ಸೇರಿ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಟುಡೆಂಟ್ ವೀಸಾದಡಿ ಈತ ಭಾರತಕ್ಕೆ ಬಂದು, ವೀಸಾ ಅವಧಿ ಮುಗಿದರೂ ಆಕ್ರಮವಾಗಿ ನೆಲೆಸಿದ್ದ. ಡ್ರಗ್ ಜಾಲದ ಕಿಂಗ್ ಪಿನ್ ನೈಜಿರಿಯನ್ ಮೂಲದ ನ್ವಾನ್ಯಾ ಫ್ರಾನ್ಸಿಸ್ ಬೋರ್ಟೆಂಗ್ ನನ್ನು ಜೆಸಿ ನಗರ, ಸಂಜಯನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಇವನೊಂದಿಗೆ ಮಂಗಳೂರು ಮೂಲದ ವಿದ್ಯಾರ್ಥಿ ಕೂಡ ಕೈಜೋಡಿಸಿದ್ದ. ಕಮ್ಮನಹಳ್ಳಿಯ ಪ್ರದೀಪ್ ಕುಮಾರ್ / ಸ್ಟೀವ್ ಡ್ರಗ್ ಪೆಡ್ಲರ್ ಆಗಿದ್ದ. ಮಂಗಳೂರು ಮೂಲದ ಈತ ಹೊಟೆಲ್ ಬಿಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದ.

ಇವರೊಂದಿಗ ರೆಡ್ ಬಸ್ ಕಂಪೆನಿಯಲ್ಲಿ ವರ್ಕ್ ಮಾಡುತ್ತಿದ್ದ ಪ್ರದೀಪ್, ಡಾರ್ಕ್ ವೆಬ್ & ವಿಕ್ಕರ್ ಮೆಸೆಂಜರ್ ಮೂಲಕ ಡ್ರಗ್ ಖರೀದಿಸಿ ತಮ್ಮ ಕಾಲೇಜು‌ ಸೇರಿ, ಇತರೇ ಕಾಲೇಜು ವಿದ್ಯಾರ್ಥಿಗಳಿಗೂ ಮಾರಾಟ ಮಾಡುತ್ತಿದ್ದ. ಬಂಧಿತರಿಂದ ವೀಡ್ ಆಯುಲ್ 90 ಗ್ರಾಂ, 1.1 ಕೆಜಿ ಗಾಂಜಾ, 127 ಎಂಡಿಎಂಎ, 7.8 ಗ್ರಾಂ ಕೊಕೇನ್, 1 ಲ್ಯಾಪ್ ಟಾಪ್, 2 ಕಾರ್ ಗಳು ಜಪ್ತಿ ಮಾಡಿರುವ ಉತ್ತರ ವಿಭಾಗ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

 
 
 
 
 
 
 
 
 
 
 

Leave a Reply